ಬೆಂಗಳೂರು: ಪೊಲೀಸ್ ಎಂದು ಹೇಳಿಕೊಂಡು ಫೈನಾನ್ಸ್ ಸಂಸ್ಥೆಯ ಮ್ಯಾನೇಜರ್ ಮೇಲೆ ಬ್ಲೇಡ್‌ನಿಂದ ಹಲ್ಲೆ

ಜಯನಗರ 7ನೇ ಬ್ಲಾಕ್‌ನಲ್ಲಿ ತಾನು ಪೊಲೀಸ್ ಎಂದು ಹೇಳಿಕೊಂಡ ವ್ಯಕ್ತಿ, ತನಗೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಯೊಂದರ ವಲಯ ವ್ಯವಸ್ಥಾಪಕರೊಬ್ಬರ (35) ಮೇಲೆ ಬ್ಲೇಡ್ ಮತ್ತು ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಲಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಜಯನಗರ 7ನೇ ಬ್ಲಾಕ್‌ನಲ್ಲಿ ತಾನು ಪೊಲೀಸ್ ಎಂದು ಹೇಳಿಕೊಂಡ ವ್ಯಕ್ತಿ, ತನಗೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಯೊಂದರ ವಲಯ ವ್ಯವಸ್ಥಾಪಕರೊಬ್ಬರ (35) ಮೇಲೆ ಬ್ಲೇಡ್ ಮತ್ತು ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಲಾಗಿದೆ.

ಜೆ.ಪಿ. ನಗರ 9ನೇ ಹಂತದ ನಿವಾಸಿ ಸಂತೋಷ್ ಕುಮಾರ್ ಪಾಟೀಲ್ ಸಂಜೆ ವಾಕಿಂಗ್ ಹೋಗಿದ್ದ ವೇಳೆ ಸುಮಾರು 6 ಅಡಿ ಎತ್ತರದ ಆರೋಪಿ ಆತನನ್ನು ತಡೆದು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡಲು ನಿರಾಕರಿಸಿದ ವೇಳೆ ಪಾಟೀಲ್ ಅವರ ಹೊಟ್ಟೆಯ ಕೆಳಭಾಗಕ್ಕೆ ಇರಿಯಲಾಗಿದೆ. ಕೂಡಲೇ ಅವರನ್ನು ಆತನ ಸ್ನೇಹಿತ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಸಂಬಂಧ ವೈದ್ಯಕೀಯ-ಕಾನೂನು ಪ್ರಕರಣವನ್ನು ದಾಖಲಿಸಲಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಅಪರಿಚಿತ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದಾರೆ. ಜಯನಗರ 8ನೇ ಬ್ಲಾಕ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಕೆಂಪು ಬಣ್ಣದ ಬೈಕ್‌ನಲ್ಲಿ ಬಂದ ಆರೋಪಿ ಪಾಟೀಲರನ್ನು ತಡೆದು ನಿಲ್ಲಿಸಿ ತಾನು ಪೊಲೀಸ್ ಹೇಳಿಕೊಂಡಿದ್ದಾನೆ. ಬೇಡಿಕೆಯಿಟ್ಟ ಹಣವನ್ನು ನೀಡಲು ಪಾಟೀಲ್ ನಿರಾಕರಿಸಿದಾಗ ಆರೋಪಿಗಳು ಬ್ಲೇಡ್ ತೆಗೆದು ಕೊಲೆ ಬೆದರಿಕೆ ಹಾಕಿದ್ದಾರೆ. ಪಾಟೀಲ್ ರಕ್ಷಣೆಗೆ ಮುಂದಾದಾಗ ಆರೋಪಿಗಳು ಅವರಿಗೆ ಹೊಡೆದು, ಹೊಟ್ಟೆಗೆ ಬ್ಲೇಡ್‌ನಿಂದ ಚುಚ್ಚಿದ್ದಾರೆ. ಬಳಿಕ ಪಾಟೀಲ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸಹಾಯಕ್ಕಾಗಿ ತನ್ನ ಸ್ನೇಹಿತನನ್ನು ಕರೆದಿದ್ದಾನೆ.

ಸ್ಥಳಕ್ಕೆ ಬಂದ ಸ್ನೇಹಿತರೊಬ್ಬರು ಪಾಟೀಲ್ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಐಪಿಸಿ 323 (ಗಾಯ ಉಂಟು ಮಾಡುವುದು), ಐಪಿಸಿ 324 (ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು), ಐಪಿಸಿ 341 ಮತ್ತು ಐಪಿಸಿ 341 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯನ್ನು ಇನ್ನಷ್ಟೇ ಬಂಧಿಸಬೇಕಿದೆ. ಸಂತ್ರಸ್ತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆರೋಪಿ ಮದ್ಯದ ಅಮಲಿನಲ್ಲಿದ್ದ ಎಂದು ಹೇಳಲಾಗಿದ್ದು, ಪೊಲೀಸ್ ಸೋಗಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಸುತ್ತಮುತ್ತಲೂ ಇದೇ ರೀತಿಯ ಅಪರಾಧ ನಡೆದಿದ್ದು, ಆ ಪ್ರಕರಣದಲ್ಲಿ ಶಿವಾಜಿನಗರ ನಿವಾಸಿ ಮೊಹಮ್ಮದ್ ರಫಿ (29) ಎಂಬಾತನನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೂ ರಫಿಗೂ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com