ಆನೇಕಲ್: ರಸ್ತೆ ಹಂಪ್ ನಿಂದ ಸ್ಕಿಡ್ ಆಗಿ ಬಿದ್ದ ಬೈಕ್, ಒಡಿಶಾ ಮೂಲದ ಇಬ್ಬರು ಕಾರ್ಮಿಕರ ದುರ್ಮರಣ!

ಬೆಂಗಳೂರಿನ ಜಿಗಣಿ ಸಮೀಪದ ಮಾದ ಪಟ್ಟಣದ ಬಳಿ ಬೈಕ್‌ನಿಂದ ಬಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆನೇಕಲ್: ಬೆಂಗಳೂರಿನ ಜಿಗಣಿ ಸಮೀಪದ ಮಾದ ಪಟ್ಟಣದ ಬಳಿ ಬೈಕ್‌ನಿಂದ ಬಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. 

ಮೃತರು ಒಡಿಶಾ ಮೂಲದ ಕಾರ್ಮಿಕರಾದ 29 ವರ್ಷದ ಫೋಕೀರ್ ಚರಣ್ ಪ್ರಧಾನ್ ಹಾಗೂ 24 ವರ್ಷದ ಬೀರ್ ಸಿಂಗ್ ನಾಯಕ್ ಎಂದು ಗುರುತಿಸಲಾಗಿದೆ.

L&t ಕಂಪನಿಯಲ್ಲಿ ಫೋಕೀರ್ ಚರಣ್ ಹೆಲ್ಪರ್‌ ಆಗಿ ಕೆಲಸ ಮಾಡುತ್ತಿದ್ದು ಬೀರ್ ಸಿಂಗ್ ಶಕ್ತಿ ಪ್ರೊಸೆಸಿಂಗ್ ಕಂಪನಿಯಲ್ಲಿ ಸಹಾಯಕನಾಗಿ  ಕೆಲಸಮಾಡುತ್ತಿದ್ದರು. ಇಂದು ಕೆಲಸ ಮುಗಿಸಿಕೊಂಡು ಜಿಗಣಿಯಿಂದ ಇಂಡ್ಲವಾಡಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಹಂಪ್ ನಿಂದಾಗಿ ಬೈಕ್ ಸ್ಕಿಡ್ ಆಗಿದೆ. 

ಬೈಕ್ ನಿಯಂತ್ರಣ ತಪ್ಪಿ ಮುಂದೆ ಬರುತ್ತಿದ್ದ ಬಸ್ ಗೆ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com