ಹೊಸೂರು ರಸ್ತೆಯಲ್ಲಿ ಭೀಕರ ಅಪಘಾತ: ಉರುಳಿಬಿದ್ದ ಟ್ರಕ್; ಚಾಲಕ, ಕ್ಲೀನರ್ ದುರ್ಮರಣ

ಬೆಂಗಳೂರು: ವೇಗವಾಗಿ ಸಾಗುತ್ತಿದ್ದ ಹಾಲು ಸರಬರಾಜು ಮಾಡುವ ಟ್ರಕ್ ವೊಂದು ಉರುಳಿಬಿದ್ದ ಪರಿಣಾಮ ಟ್ರಕ್'ನ ಚಾಲಕ ಮತ್ತು ಕ್ಲೀನರ್ ಸಾವನ್ನಪ್ಪಿರುವ ಘಟನೆ ಹೊಸೂರು ರಸ್ತೆ (ಎನ್‌ಎಚ್-7) ಸರ್ವಿಸ್ ಲೇನ್‌ನಲ್ಲಿ ಬುಧವಾರ ನಡೆದಿದೆ.
ಮೃತ ವ್ಯಕ್ತಿಗಳನ್ನು ಚಾಲಕ ಕಾರ್ತಿಕ್ ಮತ್ತು ಕ್ಲೀನರ್ ಉದಯ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ತಮಿಳುನಾಡು ಮೂಲದವರೆಂದು ತಿಳಿದುಬಂದಿದೆ.
ತಮಿಳುನಾಡು ರಾಜ್ಯದ ನಂಬರ್ ಪ್ಲೇಟ್ ಹೊಂದಿದ್ದ ಟ್ರಕ್ ಬೊಮ್ಮಸಂದ್ರದಿಂದ ವೈಟ್ ಫೀಲ್ಡ್'ಗೆ ಹಾಲು ಪೂರೈಕೆ ಮಾಡಲು ಹೋಗುತ್ತಿದ್ದು. ವೇಗವಾಗಿ ಸಾಗುತ್ತಿದ್ದ ಕಾರಣ ಟ್ರಕ್ ಚಾಲಕನ ನಿಯಂತ್ರಣಕ್ಕೆ ಸಿಕ್ಕಿಲ್ಲ. ಈ ವೇಳೆ ಕೋಡಿಹಳ್ಳಿಯ ಪಾಪಣ್ಣ ಬಿಲ್ಡಿಂಗ್ ಬಳಿ ಪಲ್ಟಿ ಹೊಡೆದು. ಬ್ಯಾರಿಕೇಡ್ ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅಪಘಾತವನ್ನು ಕಂಡ ಸ್ಥಳೀಯ ರಮೇಶ್ ಕುಮಾರ್ ಎಂಬುವವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕ್ಲೀನರ್ ಉದಯ್ ಕುಮಾರ್ ಅವರ ದೇಹವು ಟ್ರಕ್ ಅಡಿಯಲ್ಲಿ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಕಂಡು ಬಂದಿತ್ತು. ಘಟನೆ ಚಾಲಕನ ಅತಿ ವೇಗವೇ ಕಾರಣವೆಂದು ಹೇಳಲಾಗುತ್ತಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಘಟನೆ ವೇಳೆ ಚಾಲಕ ಯಾವುದಾದರೂ ಮಾದಕ ವಸ್ತು ಸೇವಿಸಿದ್ದನೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ನಡುವೆ ಡೈರಿ ಉತ್ಪನ್ನ ಕಂಪನಿಗೆ ಘಟನೆ ಸಂಬಂಧ ಮಾಹಿತಿ ನೀಡಲಾಗಿದ್ದು, ಅಪಘಾತ ಸ್ಥಳವನ್ನು ಪರಿಶೀಲಿಸಿ, ಕಂಟೈನರ್ ಲಾರಿಯಲ್ಲಿದ್ದ ಡೈರಿ ಉತ್ಪನ್ನಗಳನ್ನು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಈ ನಡುವೆ ಘಟನೆಯಲ್ಲಿ ಬ್ಯಾರಿಕೇಡ್ ಗಳು ಹಾನಿಗೊಳಗಾಗಿದ್ದು, ಇದರ ವೆಚ್ಚ ಸುಮಾರು ರೂ.1ಲಕ್ಷವಾಗಿದೆ ಎನ್ನಲಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಎದುರಾಗಿತ್ತು. ಈ ವೇಳೆ ಪೊಲೀಸರು ರಸ್ತೆಯಿಂದ ಟ್ರಕ್'ನ್ನು ತೆಗೆಯಲು ಕ್ರೇನ್ ಬಳಕಬೇಕಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


