ಕಾರವಾರ: 10 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ಕುಟುಂಬ, ಅಪಾಯದಿಂದ ಪಾರು

10 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ನಾಲ್ವರಿದ್ದ ಕುಟುಂಬವೊಂದು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ಕಾರವಾರವಾದಲ್ಲಿ ನಡೆದಿದೆ. ಸಂಬಂಧಿಕರ ಮನೆಯಲ್ಲಿ ವಾಹನ ನಿಲ್ಲಿಸಿದ ಬಳಿಕವಷ್ಟೇ ಕಾರಿನಲ್ಲಿ ಹಾವಿರುವುದು ತಿಳಿದುಬಂದಿದೆ.
ಕಾರಿನಲ್ಲಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪದ ರಕ್ಷಣೆ
ಕಾರಿನಲ್ಲಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪದ ರಕ್ಷಣೆ
Updated on

ಕಾರವಾರ: 10 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ನಾಲ್ವರಿದ್ದ ಕುಟುಂಬವೊಂದು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ಕಾರವಾರವಾದಲ್ಲಿ ನಡೆದಿದೆ.

ಸಂಬಂಧಿಕರ ಮನೆಯಲ್ಲಿ ವಾಹನ ನಿಲ್ಲಿಸಿದ ಬಳಿಕವಷ್ಟೇ ಕಾರಿನಲ್ಲಿ ಹಾವಿರುವುದು ತಿಳಿದುಬಂದಿದೆ.

ರಾಮನಗರದಿಂದ ಕಾರಿನಲ್ಲಿ ಬಂದ ಕುಟುಂಬಸ್ಥರು ಕುಂಬಾರವಾಡದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದಾರೆ. ಆಗ ಮನೆಯಲ್ಲಿದ್ದ ಬೆಕ್ಕು ವಿಚಿತ್ರವಾಗಿ ಆಡುತ್ತಾ, ಕಾರನ್ನು ಪರಿಶೀಲಿಸಲಾರಂಭಿಸಿದೆ.

ಆಗ ಕುಟುಂಬ ಏನಾಗಿರಬಹುದೆಂದು ಕಾರನ್ನು ಪರಿಶೀಲಿಸಲು ಮುಂದಾಗಿದೆ. ಈ ವೇಳೆ ಕಾರಿನಿಂದ ದೊಡ್ಡ ಶಬ್ದವೊಂದು ಕೇಳಿಸಿದೆ. ಆಗ ಕಾರಿನೊಳಗೆ ದೊಡ್ಡ ಕಾಳಿಂಗ ಸರ್ಪವೊಂದು ಇರುವುದು ಕಂಡುಬಂದಿದೆ. ಇದನ್ನು ಕಂಡು ಆಘಾತಕ್ಕೊಳಗಾದ ಕುಟುಂಬದವರು, ತಕ್ಷಣವೇ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಹಾವು ರಕ್ಷಕರನ್ನು ಕರೆಸಿದ್ದು, ಸುದೀರ್ಘ ಹೋರಾಟದ ನಂತರ ಹಾವನ್ನು ರಕ್ಷಿಸಿ, ಕಾಡಿಗೆ ಬಿಡಲಾಗಿದೆ. ಕಾಳಿಂಗ ಸರ್ಪವು ವಿಶ್ವದ ಅತಿ ದೊಡ್ಡ ವಿಷಕಾರಿ ಹಾವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com