ಬೆಳಗಾವಿ: ಪತ್ನಿ ಮೇಲೆ ಕೋಪ, ನಾಲ್ಕು ತಿಂಗಳ ಹಸುಗೂಸನ್ನು ರಸ್ತೆಗೆ ಎಸೆದು ಕೊಂದ ತಂದೆ

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಸಿಟ್ಟಿನ ಭರದಲ್ಲಿ ವ್ಯಕ್ತಿಯೊಬ್ಬ ತನ್ನ ನಾಲ್ಕು ತಿಂಗಳ ಗಂಡು ಮಗುವನ್ನು ರಸ್ತೆಗೆ ಎಸೆದು ಕೊಂದಿರುವ ದಾರುಣ ಘಟನೆ ಗಣೇಶ ಹಬ್ಬದಂದು ನಡೆದಿದೆ.
ನವಜಾತ ಶಿಶು (ಸಾಂಕೇತಿಕ ಚಿತ್ರ)
ನವಜಾತ ಶಿಶು (ಸಾಂಕೇತಿಕ ಚಿತ್ರ)
Updated on

ಚಿಕ್ಕೋಡಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಸಿಟ್ಟಿನ ಭರದಲ್ಲಿ ವ್ಯಕ್ತಿಯೊಬ್ಬ ತನ್ನ ನಾಲ್ಕು ತಿಂಗಳ ಗಂಡು ಮಗುವನ್ನು ರಸ್ತೆಗೆ ಎಸೆದು ಕೊಂದಿರುವ ದಾರುಣ ಘಟನೆ ಗಣೇಶ ಹಬ್ಬದಂದು ನಡೆದಿದೆ.

ಶಂಕಿತ ಆರೋಪಿಯನ್ನು ಬಸಪ್ಪ ಬಳುಂಕಿ ಎಂದು ಗುರುತಿಸಲಾಗಿದ್ದು, ಈತ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಕೆಎಸ್‌ಐಎಸ್‌ಎಫ್) ಪೊಲೀಸ್ ಪೇದೆಯಾಗಿದ್ದು, ಸದ್ಯ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಹುಟ್ಟೂರಾದ ಗೋಕಾಕ ತಾಲೂಕಿನ ದುರ್ದುಂಡಿ ಗ್ರಾಮದಲ್ಲಿ ಜಾತ್ರೆಯಿದೆ. ಹೀಗಾಗಿ, ಮಗುವನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾನೆ. ಇದಕ್ಕೆ ಪತ್ನಿ ಲಕ್ಷ್ಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಬಸಪ್ಪ ಕೂಡಲೇ ಮಗುವನ್ನು ರಸ್ತೆಗೆ ಎಸೆದಿದ್ದಾನೆ. ಮಗು ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವಿಗೀಡಾಗಿದೆ. ಕಳೆದ ಒಂದು ವರ್ಷದಿಂದ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಲಕ್ಷ್ಮಿ ನೀಡಿರುವ ದೂರನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

ಕೆಎಸ್‌ಐಎಸ್‌ಎಫ್ ಕಾನ್‌ಸ್ಟೆಬಲ್ ವಿರುದ್ಧ ಕುಡಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com