ಹಳಿ ತಪ್ಪಿದ ಲಿವ್ ಇನ್: ಬಾನೆಟ್ ಮೇಲೆ ಬಿದ್ದ ಮಾಜಿ ಗೆಳೆಯನ ಸಮೇತ ಕಾರು ಚಲಾಯಿಸಿದ ಯುವತಿ!

ಬಾನೆಟ್ ಮೇಲೆ ಬಿದ್ದ ವ್ಯಕ್ತಿಯೋರ್ವನ ಸಮೇತ ಮಹಿಳೆಯೊಬ್ಬಳು ಕಾರು ಚಲಾಯಿಸಿದ ಘಟನೆ ಜ್ಞಾನಭಾರತಿ ಪ್ರದೇಶದಲ್ಲಿ ವರದಿಯಾಗಿತ್ತು. ಈ ಘಟನೆ ಮರೆಯುವುದಕ್ಕೂ ಮುನ್ನವೇ ಇಂಥಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. 
ಅಪರಾಧ
ಅಪರಾಧ

ಬೆಂಗಳೂರು: ಬಾನೆಟ್ ಮೇಲೆ ಬಿದ್ದ ವ್ಯಕ್ತಿಯೋರ್ವನ ಸಮೇತ ಮಹಿಳೆಯೊಬ್ಬಳು ಕಾರು ಚಲಾಯಿಸಿದ ಘಟನೆ ಜ್ಞಾನಭಾರತಿ ಪ್ರದೇಶದಲ್ಲಿ ವರದಿಯಾಗಿತ್ತು. ಈ ಘಟನೆ ಮರೆಯುವುದಕ್ಕೂ ಮುನ್ನವೇ ಇಂಥಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. 

ಬೆಂಗಳೂರು ಉತ್ತರ ತಾಲೂಕಿನ ನಿವಾಸಿಯಾದ ದ್ರುವ (31) (ಹೆಸರು ಬದಲಾವಣೆ ಮಾಡಲಾಗಿದೆ) ಎಂಬ ವ್ಯಕ್ತಿ ತನಗೆ ಎದುರಾದ ಸನ್ನಿವೇಶದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಆತನ ಹೇಳಿಕೆಯ ಪ್ರಕಾರ ಆತ 33 ವರ್ಷದ ಮಹಿಳೆಯ ಜೊತೆ ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ದ. ಆದರೆ ಆಕೆ ಆತನ ವಿರುದ್ಧ ಜುಲೈ ನಲ್ಲಿ ಈಶಾನ್ಯ ವಿಭಾಗದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ ಬಳಿಕ ಸಂಬಂಧ ಹದಗೆಟ್ಟಿತ್ತು. ಈ ಬಳಿಕ ವ್ಯಕ್ತಿ ತನ್ನ ವಿರುದ್ಧ ಪೋಲೀಸ್ ಕ್ರಮ ಜರುಗಿಸದಂತೆ ಹೈಕೋರ್ಟ್ ನಿಂದ ತಡೆ ತಂದಿದ್ದರು.
 
ಇದರಿಂದ ಆಕ್ರೋಶಗೊಂಡ ಮಹಿಳೆ. ಹೊಯ್ಸಳ ನಗರದಲ್ಲಿರುವ ಆತನ ಕಚೇರಿಗೆ ತೆರಳಿ ನಿಂದಿಸಿದ್ದಾಳೆ. ಅಷ್ಟೇ ಅಲ್ಲದೇ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ ಆದರೆ ಆತ ಕೊಡಲು ಒಪ್ಪದೇ ಇದ್ದಾಗ ಆತನ ವಾಹನದ ಕೀ ಪಡೆದು ಹೊರಡಲು ಯತ್ನಿಸಿದ್ದಾಳೆ. ಕಾರನ್ನು ನಿಲ್ಲಿಸಲು ಆತ ಪ್ರಯತ್ನಿಸಿದಾಗ ಆತನ ಮೇಲೆಯೇ ಕಾರು ಚಾಲನೆ ಮಾಡಲು ಯತ್ನಿಸಿದ್ದಾಳೆ. ಸಮತೋಲನ ಕಳೆದುಕೊಂಡು ಬಾನೆಟ್ ಮೇಲೆ ಆತ ಬಿದ್ದಿದ್ದಾನೆ. ಆದರೆ ಇದನ್ನೂ ಲೆಕ್ಕಿಸದೇ ಸ್ವಲ್ಪ ದೂರದವರೆಗೆ ಆಕೆ ಕಾರು ಚಾಲನೆ ಮಾಡಿದ್ದಾಳೆ. ಏಕಾ ಏಕಿ ಬ್ರೇಕ್ ಹಾಕಿದ್ದರ ಪರಿಣಾಮ ಆತ ಬಿದ್ದಿದ್ದಾನೆ. ಮಹಿಳೆ ಮೇಲೆ ದೂರು ದಾಖಲಾಗಿದೆ. ಈಗ ಆಕೆ ಗರ್ಭಿಣಿ ಎಂದು ತಿಳಿದುಬಂದಿದ್ದು, ದೃಶ್ಯಾವಳಿಗಳನ್ನು ಪರಿಶೀಲಿಸಿ ಆಕೆಯ ಹೇಳಿಕೆಯನ್ನು ಪಡೆಯುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com