ರಾಜ್ಯ

ಪ್ರಿಯಾಂಕ್ ಖರ್ಗೆ ಹೆಂಡತಿ, ಮಕ್ಕಳ 'ಸಾಫ್' ಮಾಡುತ್ತಿದ್ದೆ: ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಆಡಿಯೋ ವೈರಲ್

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹತ್ಯೆ ಸಂಚಿಗೆ ಸಂಬಂಧಿಸಿದೆ ಎನ್ನಲಾದ ಆಡಿಯೋವೊಂದು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪ್ರಿಯಾಂಕ್ ಖರ್ಗೆ ಹೆಂಡತಿ, ಮಕ್ಕಳ 'ಸಾಫ್' ಮಾಡುತ್ತಿದ್ದೆ: ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಆಡಿಯೋ ವೈರಲ್
ಸಂಗ್ರಹ ಚಿತ್ರ
Published On :

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹತ್ಯೆ ಸಂಚಿಗೆ ಸಂಬಂಧಿಸಿದೆ ಎನ್ನಲಾದ ಆಡಿಯೋವೊಂದು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರು, ಕಾರ್ಯಕರ್ತ ರವಿ ಎಂಬಾತನ ಜೊತೆ ಮಾತನಾಡಿದ್ದಾರೆಂಬ ಆಡಿಯೋ ವೈರಲ್ ಆಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ರವಿ ಎಂಬಾತನ ಜೊತೆಯಲ್ಲಿ ಮಣಿಕಂಠ ರಾಥೋಡ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ತುಣಕನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ.

ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಆಡಿಯೋದಲ್ಲಿ ಏನಿದೆ?
ರವಿ, ಕಾರ್ಯಕರ್ತ: ಅಣ್ಣಾ, ನಿಮ್ಮ ಮೇಲೆ ಎಷ್ಟು ಕೇಸ್​ಗಳಿವೆ?
ಮಣಿಕಂಠ ರಾಥೋಡ್: ಯಾವ ಬೋ.. ಮಗ ಕಾಂಗ್ರೆಸ್​ನವನು ಕೇಳಲಿ. 44 ಕೇಸ್​ಗಳಿವೆ ಅಂತ ಹೇಳಲಿ.
ರವಿ: ಅಣ್ಣಾ...ಅದನ್ನು ಖರ್ಗೆ ಕಡೆಯವರು ಮಾಡ್ತಾರೆ. ನಾವ್ಯಾರು ಮಾಡಲ್ಲ.
ಮಣಿಕಂಠ ರಾಥೋಡ್: ಖರ್ಗೆ ಕಡೆಯಿಂದಲೇ ಕೇಳಲೇ?
ರವಿ: ಅಣ್ಣಾ ನನ್ನ ಹತ್ರ ಅವರ ನಂಬರ್ ಇಲ್ಲ. ಕೇಳೋಣ ಅಂದ್ರೆ ಅವರ ನಂಬರ್ ಇಲ್ಲ, ಇದ್ರೆ ಕೊಡಿ. ಫೋನ್ ಮಾಡಿ ನಮ್ಮ ಅಣ್ಣನ ಬಗ್ಗೆ ಯಾಕೆ ಹಿಂಗ್ ಮಾತಾಡ್ತೀರಿ ಅಂತ ಕೇಳ್ತೀನಿ.
ಮಣಿಕಂಠ ರಾಥೋಡ್: ನನ್ನ ಬಳಿ ಅವರ ನಂಬರ್ ಇಲ್ಲಾ. ನಂಬರ್ ಇದ್ದಿದ್ದರೇ ಪ್ರಿಯಾಂಕ್ ಖರ್ಗೆ ಅವರ ಹೆಂಡತಿ. ಮಕ್ಕಳನ್ನು ಸಾಫ್ ಮಾಡುತ್ತಿದ್ದೆ.
ರವಿ: ಯಾರ ಹೆಂಡರ ಮಕ್ಕಳ ಅಣ್ಣಾ?
ಮಣಿಕಂಠ ರಾಥೋಡ್: ಇವಾಗ ಯಾರ ಹೆಸರು ತೊಗೊಂಡಿ ನೀನು?
ರವಿ: ಖರ್ಗೆ ಅವರದ್ದು ಅಣ್ಣಾ.
ಮಣಿಕಂಠ ರಾಥೋಡ್: ಖರ್ಗೆ ಅವರ ನಂಬರ್ ಇದ್ರೆ ಅವರ ಹೆಂಡ್ರು ಮಕ್ಕಳನ್ನೆಲ್ಲಾ ಸಾಫ್ ಮಾಡ್ತೀನಿ ಲೇ? ನಂಬರ್ ಇದ್ರೆ ನಾನೇ ಫೋನ್ ಮಾಡಿ ಬೈಯ್ತಿದ್ದೆ ಎಂದು ಹೇಳಿರುವುದು ಕಂಡು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.