ಮಳೆ ಅವಾಂತರಕ್ಕೆ ನಗರದಲ್ಲಿ ಇಬ್ಬರು ಬಲಿ: ಎಚ್ಚೆತ್ತ ಬಿಬಿಎಂಪಿ, ಹೊಸ ಯೋಜನೆಗಳ ಕೈಗೆತ್ತಿಕೊಳ್ಳಲು ಮುಂದು!

ರಾಜಧಾನಿಯಲ್ಲಿ ಮಳೆ ಸೃಷ್ಟಿಸಿದ ಅವಾಂತರಕ್ಕೆ ಇಬ್ಬರು ಬಲಿಯಾಗಿದ್ದು, ದುರ್ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ 1,900 ಕೋಟಿ ರುಪಾಯಿ ಅನುದಾನದ ಅಡಿಯಲ್ಲಿ ಹೊಸ ಯೋಜನೆಗಳ ಕೈಗೆತ್ತಿಕೊಳ್ಳಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜಧಾನಿಯಲ್ಲಿ ಮಳೆ ಸೃಷ್ಟಿಸಿದ ಅವಾಂತರಕ್ಕೆ ಇಬ್ಬರು ಬಲಿಯಾಗಿದ್ದು, ದುರ್ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ 1,900 ಕೋಟಿ ರುಪಾಯಿ ಅನುದಾನದ ಅಡಿಯಲ್ಲಿ ಹೊಸ ಯೋಜನೆಗಳ ಕೈಗೆತ್ತಿಕೊಳ್ಳಲು ಮುಂದಾಗಿದೆ.

ಒಟ್ಟು 1,900 ಕೋಟಿ ರೂ, ಅನುದಾನದ ಅಡಿಯಲ್ಲಿ 195 ಕಿಮೀ ಮಳೆನೀರು ಚರಂಡಿ ದುರಸ್ತಿ ಕಾರ್ಯಗಳ ತ್ವರಿತಗೊಳಿಸುವುದು ಮತ್ತು ಹೊಸ ಯೋಜನೆಗಳನ್ನು ಬಿಬಿಎಂಪಿ ಕೈಗೊತ್ತಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, 2022ರಲ್ಲಿ ಸರ್ಕಾರದ ವಿವಿಧ ಅನುದಾನದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಇಲ್ಲಿಯವರೆಗೆ ಶೇ.40ರಷ್ಟು ಪೂರ್ಣಗೊಂಡಿದೆ ಎಂದು ಹೇಳಿದರು.

ಎಸ್'ಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ಮಾತನಾಡಿ, ಬೆಂಗಳೂರಿನಲ್ಲಿ 859.9 ಕಿಮೀ ಮಳೆನೀರು ಚರಂಡಿಯನ್ನು ಗುರ್ತಿಸಲಾಗಿದ್ದು, 2006 ರಿಂದ ಸರ್ಕಾರದ ವಿವಿಧ ಅನುದಾನಗಳ ಅಡಿಯಲ್ಲಿ ಹೊಸ ಯೋಜನೆ ಮತ್ತು ದುರಸ್ತಿ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಅನುದಾನದ ಅಡಿಯಲ್ಲಿ ಪಾಲಿಕೆ ಮೊದಲು 75 ಕಿಮೀವರೆಗೆ ಮಳೆನೀರಿನ ಒಳಚರಂಡಿ ಸಂಪರ್ಕಗಳ ದುರಸ್ತಿ ಕಾರ್ಯಗಳನ್ನು ನಡೆಸಿದೆ. 2006 ರಿಂದ 2016 ರವರೆಗೆ, ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ ಮತ್ತು ಅದರ ನಿಧಿಯಡಿಯಲ್ಲಿ 102 ಕಿ.ಮೀ ಮಳೆನೀರಿನ ಒಳಚರಂಡಿಯನ್ನು ನಿರ್ಮಿಸಲಾಗಿದೆ. 2016ರಿಂದ 2018ರ ನಡುವೆ ಸಿಎಂ ನಗರೋತ್ಥಾನ ಅನುದಾನದಲ್ಲಿ 212 ಕಿ.ಮೀ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ 2018ರಿಂದ 2021ರ ನಡುವೆ ಸಿಎಂ ನವ ನಗರೋತ್ಥಾನ ನಿಧಿಯಡಿ 102 ಕಿ.ಮೀ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಕಳೆದ ವರ್ಷ ಪ್ರವಾಹದ ಎದುರಾದ ಬಳಿಕ, ಬೊಮ್ಮಾಯಿ ಸರ್ಕಾರ 195 ಕಿಮೀ ಎಸ್‌ಡಬ್ಲ್ಯೂಡಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುವತೆ ಸೂಚಿಸಿತ್ತು. ಇದರಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಹಾಗೂ ಹೆಚ್ಚುವರಿ 313 ಕೋಟಿ ರೂಪಾಯಿಗಳ ತುರ್ತು ಅನುದಾನವನ್ನು ಬಿಡುಗಡೆ ಮಾಡಿತ್ತು.

"ಕಳೆದ ಬಾರಿ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೆಆರ್ ಪುರಂನ ಸಾಯಿ ಲೇಔಟ್ ಮತ್ತು ನಾಗಪ್ಪ ಲೇಔಟ್ ಹಾಗೂ ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ಇತರ ಪ್ರದೇಶಗಳು ಜಲಾವೃತವಾಗಿದ್ದವು.

ಎಸ್‌ಡಬ್ಲ್ಯೂಡಿ ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ, ಚರಂಡಿಗಳು ಹೆಚ್ಚುವರಿಯಾಗಿ ಹರಿಯುವುದರಿಂದ ತಗ್ಗಿಸಲು ಕ್ರಮಗಳ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com