social_icon

ಆತ್ಮಹತ್ಯೆ ತಡೆಗೆ ಚಿಕಿತ್ಸೆಗಿಂತ ಆತ್ಮೀಯರೊಂದಿಗೆ ಭಾವನೆ ಹಂಚಿಕೊಳ್ಳುವುದು ಉತ್ತಮ: ಡಾ. ಅಜಿತ್ ವಿ ಭಿಡೆ (ಸಂದರ್ಶನ)

ಯಾವುದೇ ವ್ಯಕ್ತಿ ಮಾನಸಿಕವಾಗಿ ನೊಂದಾಗ 48 ಗಂಟೆಗಳ ಬಳಿಕವೂ ನೋವಿಗೆ ಸ್ವತಃ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಹೋದಲ್ಲಿ, ಆತ್ಮೀಯರೊಂದಿಗೆ ತನ್ನ ನೋವನ್ನು ಹಂಚಿಕೊಳ್ಳಬೇಕು. ಈ ವೇಳೆ ಅಂಜಿಕೆಗಳು ಬೇಡ.

Published: 10th September 2023 01:38 PM  |   Last Updated: 16th September 2023 08:07 PM   |  A+A-


Dr Ajit V Bhide

ಡಾ ಅಜಿತ್ ವಿ ಭಿಡೆ

Posted By : Manjula VN
Source : The New Indian Express

ಮದುವೆಯಾಗಿಲ್ಲ ಎಂದು ಆತ್ಮಹತ್ಯೆ, ಹೆಣ್ಣು ಸಿಗಲಿಲ್ಲ ಎಂದು ಆತ್ಮಹತ್ಯೆ, ಯಾರೋ ಕೈಕೊಟ್ಟರು ಎಂದು ಆತ್ಮಹತ್ಯೆ, ಗಂಡ ಬೈಯ್ದ ಎಂದು ಆತ್ಮಹತ್ಯೆ, ಬೆಳೆ ಬಂದಿಲ್ಲ ಎಂದು ಆತ್ಮಹತ್ಯೆ, ಆಟದ ಚಟದಲ್ಲಿ ಲಕ್ಷ ಲಕ್ಷ ಕಳೆದುಕೊಂಡೆ ಎಂದು ಆತ್ಮಹತ್ಯೆ..! ದಿನಬೆಳಗಾದರೆ ಇಂತಹ ಹತ್ತಾರು ಆತ್ಮಹತ್ಯೆಯ ಕೇಸ್‌ ಬಗ್ಗೆ ಓದುತ್ತಲೇ ಇರುತ್ತೇವೆ. ಆಘಾತಕಾರಿ ವಿಚಾರ ಎಂದರೆ ಇನ್ನೂ ಬದುಕನ್ನು ನೋಡದ, ಬದುಕಿ ಬಾಳಬೇಕಾದ ಯುವಜನರೇ (ದಿನನಿತ್ಯ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ.

ಯಾವುದೇ ವ್ಯಕ್ತಿ ಮಾನಸಿಕವಾಗಿ ನೊಂದಾಗ 48 ಗಂಟೆಗಳ ಬಳಿಕವೂ ನೋವಿಗೆ ಸ್ವತಃ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಹೋದಲ್ಲಿ, ಆತ್ಮೀಯರೊಂದಿಗೆ ತನ್ನ ನೋವನ್ನು ಹಂಚಿಕೊಳ್ಳಬೇಕು. ಈ ವೇಳೆ ಅಂಜಿಕೆಗಳು ಬೇಡ. ಹೆಚ್ಚಿನ ಸಂದರ್ಭಗಳಲ್ಲಿ, ಔಪಚಾರಿಕ ಚಿಕಿತ್ಸೆಗಿಂತ ಆಪ್ತರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದು ಉತ್ತಮವಾಗಿರುತ್ತದೆ.

ಗ್ರಾಮೀಣ ಭಾಗಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನಗರದ ಅತ್ಯುತ್ತಮ ಮನೋವೈದ್ಯ ಮತ್ತು ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ ಮಾಜಿ ಅಧ್ಯಕ್ಷ ಡಾ ಅಜಿತ್ ವಿ ಭಿಡೆ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ, ವೈದ್ಯ ಅಜಿತ್ ಅವರು, ಆತ್ಮಹತ್ಯೆಗೆ ಕಾರಣ, ಅದನ್ನು ತಡೆಯಲು ಇರುವ ಮಾರ್ಗಗಳು, ಕಾರಣಗಳನ್ನು ವಿವರಿಸಿದ್ದಾರೆ.

ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕಾರಣವೇನು?
ಸಮಾಜದಲ್ಲಿ ಸ್ಪಷ್ಟ ಮೌಲ್ಯಗಳಿಲ್ಲ. ಈ ಮೌಲ್ಯಗಳು ಆಗಾಗ್ಗೆ ಬದಲಾಗುತ್ತಲೇ ಇರುತ್ತವೆ. ಇದರಿಂದ ಮನುಷ್ಯನ ಮನಸ್ಥಿತಿ ಕೂಡ ಬದಲಾಗಿ, ಅಶಾಂತಿಯುಂಟಾುತ್ತದೆ. ಇದು ಮನುಷ್ಯನನ್ನು ಹತಾಶ ಸ್ಥಿತಿಗೆ ತೆರಳುವಂತೆ ಮಾಡುತ್ತದೆ. 50 ವರ್ಷವಾದ ಜನರದಲ್ಲಿ ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿದೆ.

ಆತ್ಮಹತ್ಯೆಯನ್ನು ಹತಾಶ ಕ್ರಿಯೆ ಎಂದು ಹೇಳುತ್ತೀರಾ?
ಹೌದು. ಈ ಬಗ್ಗೆ ಸಾಕಷ್ಟು ಸಂಶೋಧನೆಗಳೂ ಕೂಡ ಹೇಳಿವೆ. ಆತ್ಮಹತ್ಯೆ ಪ್ರಯತ್ನದಿಂದ ಹೊರಬಂದ ಸಾಕಷ್ಟು ಜನರೂ ಕೂಡ ಈ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ನಾನು ಹಾಗೆ ಮಾಡಬಾರದಿತ್ತು. ಒತ್ತಡದಿಂದ ಹೊರ ಬರಲು ಮಾರ್ಗಗಳಿತ್ತು ಎಂದು ಹೇಳಿದ್ದಾರೆ. ಆತ್ಮಹತ್ಯೆಯಿಂದ ಬದುಕುಳಿದ ಸಾಕಷ್ಟು ಮಂದಿ ಬಹು ಎತ್ತರಕ್ಕೆ ಬೆಳೆದಿರುವವರಿದ್ದಾರೆ.

ಇದನ್ನೂ ಓದಿ: ನೇಮಿನಾಥ ತೀರ್ಥಂಕರ ದೇವಸ್ಥಾನ: ಬೆಳಗಾವಿ ಕಮಲ ಬಸದಿಯ ಬೆರಗುಗೊಳಿಸುವ ಸೌಂದರ್ಯ ಸವಿಯಿರಿ...

ಕೆಲವರು ಆತ್ಮಹತ್ಯೆಗೆ ಹೆಚ್ಚು ಒಳಗಾಗುತ್ತಾರೆಯೇ? ಒಬ್ಬರು ಸ್ಥಿತಿಸ್ಥಾಪಕತ್ವವನ್ನು ಹೇಗೆ ನಿರ್ಮಿಸುತ್ತಾರೆ?
ಖಿನ್ನತೆಯು ಭಾವನೆಗಳ ಕಾಯಿಲೆಯಾಗಿದೆ. ಆತ್ಮಹತ್ಯೆಗೆ ಹೆಚ್ಚು ಒಳಗಾಗುವ ಜನರು ಬಹು ಭಾವನೆಗಳ ಮೂಲಕ ಹೋಗುತ್ತಾರೆ - ದುಃಖ, ಕೋಪ ಅಥವಾ ಕಿರಿಕಿರಿ. ಖಿನ್ನತೆಯ ಸ್ಪಷ್ಟ ಇತಿಹಾಸವನ್ನು ಹೊಂದಿರುವ ಜನರು, ಖಿನ್ನತೆಯ ಕುಟುಂಬದ ಹೊರೆ ಅಥವಾ ಆನುವಂಶಿಕವಾಗಿ ನಿರ್ಧರಿಸಲ್ಪಟ್ಟವರು ಆತ್ಮಹತ್ಯೆಯ ಮುಂಚೂಣಿಯಲ್ಲಿರುವವರು. ಸ್ಥಿತಿಸ್ಥಾಪಕತ್ವವು ಆರಂಭಿಕ ಹಂತದಿಂದ ಬರುತ್ತದೆ ಮತ್ತು ಕಾಲಾನಂತರದಲ್ಲಿ ಬಲಪಡಿಸಬಹುದು.

ಆತ್ಮಹತ್ಯೆಗೆ ಶರಣಾಗುವ ಸೆಲೆಬ್ರಿಟಿಗಳ ಮನಃಸ್ಥಿತಿ ಹೇಗಿರುತ್ತದೆ?
ಸೆಲೆಬ್ರಿಟಿಗಳು ಐಷಾರಾಮಿ ಜೀವನ ನಡೆಸುತ್ತಾರೆ. ಈ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಹಲವಾರು ಸಂದರ್ಭಗಳಲ್ಲಿ ಯಶಸ್ಸನ್ನು ಗಳಿಸದಿದ್ದರೆ, ನಿರಾಶೆಗೊಳಗಾಗುತ್ತಾರೆ.

ಪೋಷಕರ ಬೆಂಬಲ ಮತ್ತು ಸಂವಹನದ ಕೊರತೆಯು ಆತ್ಮಹತ್ಯೆಯ ಪ್ರವೃತ್ತಿಯನ್ನು ಹೇಗೆ ಪ್ರಚೋದಿಸುತ್ತದೆ?
ಪೋಷಕರ ಮತ್ತು ಸ್ನೇಹಿತರ ಒತ್ತಡವು ಸಾಕಷ್ಟು ಜನರು ತಮಗಿಷ್ಟವಿಲ್ಲದಿದ್ದರೂ ಇತರೆ ವೃತ್ತಿಜೀವನ ಮತ್ತು ಮದುವೆ ಕುರಿತು ನಿರ್ಧಾರ ಕೈಗೊಳ್ಳುವಂತಾಗುತ್ತದೆ. ತಮಗಿಷ್ಟವಾದ ವೃತ್ತಿಯನ್ನೇ ಆಯ್ದುಕೊಳ್ಳಬೇಕೆಂದು ಪೋಷಕರು ಒತ್ತಡ ಹೇರಿದಾಗ ಮಕ್ಕಳಿಗೆ ಅದು ನೋವುಂಟು ಮಾಡುತ್ತದೆ. ಇದರಿಂದಾಗಿ ತಮ್ಮ ಜೀವನವನ್ನೇ ಅಂತ್ಯಗೊಳಿಸಲು ನಿರ್ಧಾರ ಕೈಗೊಳ್ಳುತ್ತಾರೆ.

ಪೋಷಕರು ಗಮನಿಸಬಹುದಾದ ಮಕ್ಕಳಲ್ಲಿ ಖಿನ್ನತೆಯ ಆರಂಭಿಕ ಲಕ್ಷಣಗಳು ಯಾವುವು?
ಸಾಮಾಜಿಕವಾಗಿ ದೂರ ಉಳಿಯುವುದು. ನಿಯಮಿತ ಚಟುವಟಿಕೆಗಳಲ್ಲಿ ಆಸಕ್ತಿಯ ಕೊರತೆ, ಮನೆಯಲ್ಲಿಯೇ ಇರಲು ಬಲವಂತದ ಭಾವನೆ, ಅನಿಯಮಿತ ನಿದ್ರೆ, ಹಸಿವಿಲ್ಲದಿರುವುದು, ಅತಿಯಾದ ಕೋಪಗಳು ಇದರ ಲಕ್ಷಣವಾಗಿದೆ.

ಇದನ್ನೂ ಓದಿ: ಅವಮಾನದ ಹೆಸರಿನಲ್ಲಿ 'ಮರ್ಯಾದಾ ಹತ್ಯೆ': ಈ ಹೇಸಿಗೆ ಕೃತ್ಯಕ್ಕೆ ಶಿಕ್ಷೆಯಿಲ್ಲವೇ; ಕಾನೂನು ಹೇಳುವುದೇನು?

ಮಕ್ಕಳಲ್ಲಿ ಮೊಬೈಲ್ ಚಟ ಸಾಕಷ್ಟು ಪ್ರಚಲಿತವಾಗಿದೆ? ಅದೂ ಕಾರಣವೇ?
ಮಕ್ಕಳ ಆತ್ಮಹತ್ಯೆ ಹೆಚ್ಚಾಗಿದೆ. ಇಂಟರ್ನೆಟ್-ಸಕ್ರಿಯಗೊಳಿಸಿದ ಸಾಧನಗಳು ಮಕ್ಕಳನ್ನು ತುಂಬಾ ಕಠಿಣವಾಗಿ ವರ್ತಿಸುವಂತೆ ಮಾಡುತ್ತಿವೆ. ಇದು ಭಾವನಾತ್ಮಕ ಅಪ್ರಬುದ್ಧತೆಯ ಸಂಕೇತವಾಗಿದೆ.

ಇದರಲ್ಲಿ 'ಪ್ರಕೃತಿ vs ಪೋಷಣೆ' ಯಾವ ರೀತಿಯ ಪಾತ್ರವನ್ನು ವಹಿಸುತ್ತದೆ?
ಖಿನ್ನತೆಗೆ ಆನುವಂಶಿಕ ಪಾತ್ರ ಶೇ.80ರಷ್ಟಿದ್ದರೆ, ಪರಿಸರದ ಪಾತ್ರ ಸುಮಾರು ಶೇ.20. ಇರುತ್ತದೆ. ಅದಾಗ್ಯೂ ಹಠಾತ್ ಆತ್ಮಹತ್ಯೆಗೆ ಆನುವಂಶಿಕ ಕೊಡುಗೆ ಕೇವಲ ಶೇ.5-10ರಷ್ಟಿರುತ್ತದೆ. ಸಾಮಾನ್ಯವಾಗಿ ಖಿನ್ನತೆಗೆ ಫೋಷಕರು, ಸುತ್ತಮುತ್ತಿನ ವಾತಾವರಣ ಮುಖ್ಯವಾಗುತ್ತದೆ. ಮನೆಯಲ್ಲಿನ ಅಹಿತಕರ ವಾತಾವರಣ ಮನುಷ್ಯನ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ. ನೇಚರ್ ವರ್ಸಸ್ ನರ್ಚರ್ ಇವೆರಡೂ ಜನರ ಆತ್ಮಹತ್ಯಾ ಪ್ರವೃತ್ತಿಗೆ ಕೊಡುಗೆ ನೀಡುತ್ತವೆ.

ಶಾಲೆಗೆ ಹೋಗುವ ಚಿಕ್ಕ ಮಕ್ಕಳ ಆತ್ಮಹತ್ಯೆ ಆತಂಕಕ್ಕೆ ಕಾರಣವಲ್ಲವೇ?
ಸಣ್ಣ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡುವುದು ತುಂಬಾ ಅಪರೂಪ. ನಿಮ್ಹಾನ್ಸ್‌ನಲ್ಲಿ ನನ್ನ ವೃತ್ತಿಪರ ವೃತ್ತಿಜೀವನದಲ್ಲಿ ಅತ್ಯಂತ ಕಿರಿಯ ಪ್ರಕರಣವೆಂದರೆ 8 ವರ್ಷ ವಯಸ್ಸಿನ ಬಾಲಕಿಯದ್ದು. ಪೋಷಕರು ಸರ್ಕಸ್'ಗೆ ಕರೆದುಕೊಂಡು ಹೋಗಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳು. ಪ್ರೌಢಾವಸ್ಥೆಯಲ್ಲಿ ಮಕ್ಕಳು ಅತ್ಯಂತ ದುರ್ಬಲರಾಗಿರುತ್ತಾರೆ. ಈ ಸಂದರ್ಭದಲ್ಲಿ ಮನೆಯ ಹಾಗೂ ಸುತ್ತಮುತ್ತಲಿನ ವಾತಾವರಣ ಉತ್ತಮವಾಗಿರುವುದು ಮುಖ್ಯವಾಗುತ್ತದೆ.

ಪೋಷಕರಿಗೆ ನೀವು ಯಾವ ರೀತಿಯ ಸಲಹೆಯನ್ನು ನೀಡುತ್ತೀರಿ?
ಮಗುವಿನ ಜೊತೆಗೆ ಸಾಕಷ್ಟು ಸಮಯ ಕಳೆಯಿರಿ. ಅವರಿಗೆ ಉತ್ತಮ ಪಾಠ, ಸಂದೇಶಗಳನ್ನು ನೀಡಿ, ಸಲಹೆಗಳನ್ನು ನೀಡಿ. ಆದರೆ, ಯಾವುದೂ ಅತಿಯಾಗಬಾರದು. ತಪ್ಪಾದಾಗ ಬಹಿರಂಗವಾಗಿ ಅಲ್ಲದೆ, ಸೂಕ್ಷ್ಮ ರೀತಿಯಲ್ಲಿ ಸರಿಪಡಿಸಲು ಯತ್ನಿಸಿ.

ಇದನ್ನೂ ಓದಿ: ವಿಶ್ವದ ಮೊದಲ ಪ್ರಕರಣ: ಮಹಿಳೆ ಮೆದುಳಿನಲ್ಲಿ ಜೀವಂತ ಹುಳು ಹೊರತೆಗೆದ ವೈದ್ಯರು!

ಶಾಲೆಗಳು ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು?
ಶಾಲೆಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ನೋಡಿಕೊಳ್ಳುತ್ತವೆ. ಮಕ್ಕಳೊಂದಿಗೆ ವ್ಯವಹರಿಸುವಾಗ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಬೇಕು. ಶಿಕ್ಷಕರು ತುಂಬಾ ಕಠಿಣ ಮತ್ತು ನಿಂದನೀಯವಾಗಿರಬಾರದು. ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನೀಡಲು ಶಾಲೆಗಳು ಮೂಲಸೌಕರ್ಯ ಹೊಂದಿರಬೇಕು. ಶಾಲೆಗಳನ್ನು ಮೀರಿ, ಮನೆಯಲ್ಲಿನ ಬೆಂಬಲ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಹೆಚ್ಚು ಸಹಾಯ ಮಾಡುತ್ತದೆ. ಮನೆಯಲ್ಲಿ ಕೌಟುಂಬಿಕ ಹಿಂಸೆ, ಪೋಷಕರ ನಡುವೆ ನಿರಂತರ ಜಗಳಗಳು ಮಗುವಿಗೆ ಹೆಚ್ಚು ಹಾನಿ ಮಾಡುತ್ತದೆ. ಕೌಟುಂಬಿಕ ಅಂಶಗಳು ಸೂಯಿಗೆ ಹೆಚ್ಚು ಕೊಡುಗೆ ನೀಡುತ್ತವೆ. ಶಾಲೆಯ ಅಂಶಗಳಿಗಿಂತ ಮಕ್ಕಳಿಗೆ ಮನೆಯ ವಾತಾವರಣ ಮುಖ್ಯವಾಗುತ್ತದೆ.

ಅವಿಭಕ್ತ ಕುಟುಂಬಗಳಿಗೆ ಹೋಲಿಸಿದರೆ ವಿಭಕ್ತ ಕುಟುಂಬಗಳು ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆಯೇ?
ಅವಿಭಕ್ತ ಕುಟುಂಬ ಈಗ ‘ಕಳೆದು ಹೋಗಿರುವ ಸ್ವರ್ಗ’ದಂತಾಗಿದೆ. ಪೋಷಕರು ಇಲ್ಲದ ಸಂದರ್ಭದಲ್ಲಿ ಮಕ್ಕಳಿಗೆ ಸಾಮಾಜಿಕ ಮತ್ತು ಭಾವನಾತ್ಮಕ ಬೆಂಬಲವನ್ನು ಒದಗಿಸುವಲ್ಲಿ ಅವಿಭಕ್ತ ಕುಟುಂಬ ಸಾಕಷ್ಟು ಕೊಡುಗೆ ನೀಡುತ್ತವೆ.

ಆತ್ಮಹತ್ಯೆ ತಡೆಯುವಲ್ಲಿ ಗೇಟ್‌ಕೀಪರ್‌ಗಳ ಪ್ರಾಮುಖ್ಯತೆ ಏನು?
ಗೇಟ್‌ಕೀಪರ್‌ಗಳು ಆತ್ಮಹತ್ಯೆಯ ಚಿಹ್ನೆಗಳನ್ನು ಮೊದಲೇ ತೆಗೆದುಕೊಳ್ಳಲು ತರಬೇತಿ ಪಡೆದವರು ಮತ್ತು ತೀವ್ರವಾದ ಹೆಜ್ಜೆಯನ್ನು ತೆಗೆದುಕೊಳ್ಳದಂತೆ ವ್ಯಕ್ತಿಯನ್ನು ತಡೆಯುತ್ತಾರೆ. ಗೇಟ್‌ಕೀಪರ್‌ ಪರಿಕಲ್ಪನೆಯನ್ನು ಮೊದಲು 1980 ರ ದಶಕದಲ್ಲಿ ಬರೆಯಲಾಯಿತು, ಆದರೆ ಇದು ಬಹಳ ನಂತರ ಗಮನ ಸೆಳೆಯಿತು ಮತ್ತು ಈಗ ಒಂದು ಪ್ರಮುಖ ಅಂಶವಾಗಿದೆ.

ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಿದೆಯೇ?
ನಗರಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಭಾವನೆಗಳನ್ನು ದೂರಾಗಿಸಲು ಅನೇಕ ಕಾರ್ಯವಿಧಾನಗಳಿವೆ.

ಪುರುಷರು ಮತ್ತು ಮಹಿಳೆಯರ ನಡುವೆ ಹೆಚ್ಚು ಆತ್ಮಹತ್ಯೆಗೆ ಶರಣಾಗುವವರು ಯಾರು?
ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನವಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ. ಆದಾಗ್ಯೂ, ಆತ್ಮಹತ್ಯೆಗೆ ಯತ್ನಿಸುವವರ ಪೈಕಿ ಪುರುಷಕರಿಗಿಂತ ಮಹಿಳೆಯರು ಹೆಚ್ಚು ಬದುಕುಳಿಯುತ್ತಿದ್ದಾರೆ. ಇದು ಸಂಶೋಧನೆಗಳಿಂದ ದೃಢೀಕರಿಸಲ್ಪಟ್ಟಿಲ್ಲ. ಆದರೆ, ಆತ್ಮಹತ್ಯೆಗೆ ಯತ್ನಿಸುವ ಮಾರ್ಗಗಳಿಂದ ಇದನ್ನು ಪತ್ತೆ ಮಾಡಬಹುದಾಗಿದೆ. ಸಾಮಾನ್ಯವಾಗಿ ಆತ್ಮಹತ್ಯೆಗೆ ಯತ್ನಿಸುವ ಪುರುಷಕರು ಗುಂಡೇಟು, ಕಟ್ಟಡದ ಎತ್ತರಿಂದ ಕೆಳಗೆ ಜಿಗಿಯುವುದು, ನೀರಿನಲ್ಲಿ ಮುಳುಗುವ ಹಿಂಸಾತ್ಮಕ ಮಾರ್ಗಗಳನ್ನು ಕಂಡು ಕೊಳ್ಳುತ್ತಾರೆ. ಆದರೆ, ಮಹಿಳೆಯರು ಮನೆಯಲ್ಲಿರುವ ಕೀಟನಾಶಕಗಳು, ವಿಶಕಾರಿ ಪದಾರ್ಥಗಳು, ಫೀನಾಲ್ ಕುಡಿಯುತ್ತಾರೆ.

ಇದನ್ನೂ ಓದಿ: ನಡೆದಾಡುವ ಸಾಮರ್ಥ್ಯ ಇಲ್ಲದಿದ್ದರೂ ದಿವ್ಯಾಂಗರು ಗೌರವಯುತ ಜೀವನ ನಡೆಸಲು ನೆರವಾಗುತ್ತಿರುವ ನಿಮಿಷ್ ಆಚಾರ್ಯ!

ಆತ್ಮಹತ್ಯೆಗಳನ್ನು ಅಪರಾಧೀಕರಣಗೊಳಿಸುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಆತ್ಮಹತ್ಯೆಯನ್ನು ಅಪರಾಧ ಎಂದು ಪರಿಗಣಿಸಲು ಪ್ರತ್ಯೇಕ ಕಾನೂನು ಇದೆ. ಆತ್ಮಹತ್ಯೆ ಅಪರಾಧವಾಗಬಾರದು ಎಂದು ಹೇಳುವ ಮಾನಸಿಕ ಆರೋಗ್ಯ ಕಾಯಿದೆಯೊಂದು ಅದರ ವ್ಯಾಪ್ತಿಯನ್ನು ಮೀರಿದೆ, ಅದನ್ನು ನಾವು ಸಂತೋಷದಿಂದ ಒಪ್ಪಿಕೊಂಡಿದ್ದೇವೆ. ಆದಾಗ್ಯೂ, ಆತ್ಮಹತ್ಯೆ ಒಂದು ಅಪರಾಧವಾಗಿದ್ದು, ಆ ಕುರಿತು ಇನ್ನು ನಿರ್ಧಾರಗಳಾಗಿಲ್ಲ.

ಮಾಧ್ಯಮಗಳು ಆತ್ಮಹತ್ಯೆ ಪ್ರಕರಣಗಳನ್ನು ಹೇಗೆ ವರದಿ ಮಾಡಬೇಕು?
ಬೇಜವಾಬ್ದಾರಿಯುತ ವರದಿಗಾರಿಕೆ ವ್ಯಾಪಕವಾಗಿದೆ. ಕೆಲವೊಮ್ಮೆ ಮಾಧ್ಯಮಗಳು ಆತ್ಮಹತ್ಯೆಯಂತಹ ಘಟನೆಗಳ ಸುತ್ತ ತನ್ನದೇ ನಿರೂಪಣೆಗಳನ್ನು ನೀಡುತ್ತವೆ, ಇದರಿಂದಾಗಿ ಜನರು ಕಾನೂನು ಹೋರಾಟದಿಂದ ಹಿಂದೆ ಸರಿಯುವಂತೆ ಮಾಡುತ್ತದೆ.

ಮನೋವೈದ್ಯರ ಸಂಖ್ಯೆ ಹೆಚ್ಚಾಗಿದೆಯೇ?
ಹೆಚ್ಚಿನ ಮನಶ್ಶಾಸ್ತ್ರಜ್ಞರು ಮತ್ತು ಸಲಹೆಗಾರರ ಅಗತ್ಯವಿದೆ. ಆದರೆ, ಅಗತ್ಯವಿರುವಷ್ಟು ಮನೋವೈದ್ಯರು ರಾಜ್ಯದಲ್ಲಿಲ್ಲ. ಪರಿಣಾಮಕಾರಿ ಸಮಾಲೋಚನೆ ಮತ್ತು ಸಮಸ್ಯೆಯ ಮೂಲ ಕಾರಣವನ್ನು ಅರ್ಥಮಾಡಿಕೊಳ್ಳುವದರಿಂದ ಖಿನ್ನತೆ, ಆತ್ಮಹತ್ಯೆ ಪ್ರಕರಣಗಳನ್ನು ತಡೆಯಬಹುದು.

ಯಾವ ನಗರವು ಗರಿಷ್ಠ ಸಂಖ್ಯೆಯ ಆತ್ಮಹತ್ಯೆಗಳನ್ನು ದಾಖಲಿಸುತ್ತದೆ?
ಮೆಟ್ರೋಪಾಲಿಟನ್ ನಗರಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ವರದಿಯಾಗುತ್ತವೆ. ಸಾಕಷ್ಟು ಪ್ರಕರಣಗಳಲ್ಲಿ ಊರಿಗೆ ಹೋಗಿ ಬಂದು ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವವರಿದ್ದಾರೆ. ಕೇರಳ ಮತ್ತು ಕೋಲ್ಕತ್ತಾದಲ್ಲಿಯೂ ಆತ್ಮಹತ್ಯೆ ಪ್ರಮಾಣಗಳು ಹೆಚ್ಚಾಗಿವೆ.

ಮಧ್ಯಮ ವರ್ಗದವರಲ್ಲಿ ಆತ್ಮಹತ್ಯೆಗಳು ಹೆಚ್ಚು ವರದಿಯಾಗಿವೆ. ನಿಯಂತ್ರಣಕ್ಕೆ  ಕಾರ್ಯವಿಧಾನಗಳಿವೆ ಎಂದು  ಭಾವಿಸುತ್ತೀರಾ?
ಸಮಾಜದ ಯಾವುದೇ ವಿಭಾಗದಲ್ಲಿ ಆತ್ಮಹತ್ಯೆ ಪ್ರಮಾಣಗಳು ಕಡಿಮೆಯಾಗಿಲ್ಲ. ಮೇಲ್ವರ್ಗ ಮತ್ತು ಕೆಳವರ್ಗ ಎರಡರಲ್ಲೂ ವರದಿಯಾಗಿವೆ. ಕೆಲವು ಸಂದರ್ಭಗಳಲ್ಲಿ, ಆತ್ಮಹತ್ಯೆಗಳನ್ನು ಹೃದಯಾಘಾತವೆಂದು ಮರೆಮಾಚಿರುವುದೂ ಇದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಸಾಮಾಜಿಕ ಜಾಲತಾಣಗಳ ಮೂಲಕ ಆತ್ಮಹತ್ಯೆಗೆ ಶರಣಾಗುವ ಸುಳಿವುಗಳನ್ನು ನೀಡುತ್ತಿದ್ದಾರೆ. ಕೆಲವನ್ನು ತಡೆಯಲಾಗಿದೆ. ಇಂತಹ ಬೆಳವಣಿಗೆಗಳು ಕಂಡು ಬಂದಾಗ ಲಘುವಾಗಿ ತಳ್ಳಿಹಾಕಬಾರದು.

ಇದನ್ನೂ ಓದಿ: ಚಂದ್ರಯಾನ-3 ರ ನಂತರ ಭಾರತವನ್ನು ಗಂಭೀರವಾಗಿ ಪರಿಗಣಿಸಲಾಗಿದೆ: ಇಸ್ರೋ ಮಾಜಿ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ (ಸಂದರ್ಶನ)

ಮಾನಸಿಕ ಆರೋಗ್ಯ ಕುರಿತ ಪಠ್ಯಕ್ರಮ ಶಾಲೆಗಳ ಭಾಗವಾಗಿರಬೇಕೆಂದು ಭಾವಿಸುತ್ತೀರಾ?
ಹೌದು, ಇದನ್ನು ಪ್ರೌಢಶಾಲೆಯಿಂದಲೇ ಪರಿಚಯಿಸಬೇಕು. ಅದಕ್ಕೂ ಮೊದಲು ಶಿಕ್ಷಕರು ಮಕ್ಕಳ ಬಗ್ಗೆ ಸಂವೇದನಾಶೀಲತೆ ಹೊಂದಿರಬೇಕು.

'ಬಾಡಿ ಶೇಮಿಂಗ್' ಬಗ್ಗೆ ಏನು ಹೇಳುತ್ತೀರಿ?
ಇತ್ತೀಚಿನ ದಿನಗಳಲ್ಲಿ ಬಾಡಿ ಶೇಮಿಂಗ್ ಅತ್ಯಂತ ಉತ್ಪ್ರೇಕ್ಷಿತವಾಗಿದೆ. ಕೆಲವರ ಹೇಳಿಕೆಗಳು ಅಸಹ್ಯಕರವಾಗಿರುತ್ತವೆ. ಆದರೆ, ಯುವ ಜನರು ನಿಜವಾದ ಕಾಳಜಿ ಮತ್ತು ಟೀಕೆಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.

ಸಾಕಷ್ಟು ಜನರು ವಿಶೇಷವಾಗಿ ತಮ್ಮ ವೃತ್ತಿಗಳಿಗೆ ಹೊಸದಾಗಿ ಬರುವವರು ಆಗಾಗ್ಗೆ ಅತಿಯಾದ ಒತ್ತಡವನ್ನು ವ್ಯಕ್ತಪಡಿಸುತ್ತಾರೆ, ಯಾವುದೇ ದಾರಿಯಿಲ್ಲ ಎನ್ನುತ್ತಾರೆ. ಈ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಹೇಗೆ?
ಇದು ಸಾಮಾನ್ಯವಾಗಿ ಸ್ಥಿತಿಸ್ಥಾಪಕತ್ವ ಮತ್ತು ತಾಳ್ಮೆಯ ಕೊರತೆಯನ್ನು ಸೂಚಿಸುತ್ತದೆ. ಬೆಳೆದಂತೆ ಆರ್ಥಿಕ ಒತ್ತಡಗಳು ಹೆಚ್ಚಾಗುತ್ತವೆ. ಇದನ್ನು ನಿಭಾಗಿಯಲು ವ್ಯಕ್ತಿ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಒತ್ತಡದಿಂದ ಹೊರಬರಲು ಮಾರ್ಗಗಳನ್ನು ಕಂಡುಕೊಳ್ಳಬಹುದು.

ನೀವು ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ?
ರಂಗಭೂಮಿ ನನ್ನ ಆಸಕ್ತಿಕರ ವೃತ್ತಿಯಾಗಿತ್ತು, ಬರವಣಿಗೆ ಮತ್ತು ತೋಟಗಾರಿಕೆಯನ್ನೂ ಕೂಡ ಇಷ್ಟಪಡುತ್ತೇನೆ. ಸೃಜನಶೀಲತೆಯನ್ನು ಪೋಷಿಸುವುದು ನಮ್ಮನ್ನು ಪ್ರೇರೇಪಿಸುತ್ತದೆ.


Stay up to date on all the latest ರಾಜ್ಯ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp