ಡ್ರಗ್ಸ್ ಪ್ರಕರಣ: ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳ ಬಂಧನ

ಮಾವಳ್ಳಿಪುರದ ಮಾದಕ ದ್ರವ್ಯ ದಂಧೆಕೋರರ ಮನೆ ಮೇಲೆ ದಾಳಿ ನಡೆಸಿo ಆರು ಮಂದಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆಫ್ರಿಕನ್ ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಬಂಧನ (ಸಂಗ್ರಹ ಚಿತ್ರ)
ಬಂಧನ (ಸಂಗ್ರಹ ಚಿತ್ರ)ಸಂಗ್ರಹ ಚಿತ್ರ

ಬೆಂಗಳೂರು: ಮಾವಳ್ಳಿಪುರದ ಮಾದಕ ದ್ರವ್ಯ ದಂಧೆಕೋರರ ಮನೆ ಮೇಲೆ ದಾಳಿ ನಡೆಸಿo ಆರು ಮಂದಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆಫ್ರಿಕನ್ ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ಏತನ್ಮಧ್ಯೆ, ಎಂಟು ಇತರ ಆಫ್ರಿಕನ್ ಪ್ರಜೆಗಳನ್ನು ಸಹ ಎರಡು ವಿಭಿನ್ನ ಪ್ರಕರಣಗಳಲ್ಲಿ ಏಕಕಾಲದಲ್ಲಿ ಬಂಧಿಸಲಾಗಿದೆ. ವೀಸಾ ಅವಧಿ ಮುಗಿದ್ದರೂ, ಅಕ್ರಮವಾಗಿ ನಗರದಲ್ಲಿ ತಂಗಿದ್ದ ಹಿನ್ನೆಲೆಯಲ್ಲಿ ಈ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಇದೀಗ ಎಂಟು ಮಂದಿ ವಿದೇಶಿಗರು ಪೊಲೀಸರ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಬಂಧನ (ಸಂಗ್ರಹ ಚಿತ್ರ)
ಡ್ರಗ್ಸ್ ಕೇಸ್: ಬಂಧಿಸಲು ಬಂದ ಬೆಂಗಳೂರು ಪೊಲೀಸರನ್ನು ಅಟ್ಟಾಡಿಸಿ ಹೊಡೆದ ನೈಜೀರಿಯಾ ಪ್ರಜೆಗಳು!

ಎಲ್ಲಾ ಆರೋಪಿಗಳು ತಂಗಿದ್ದ ಸ್ಥಳಗಳಲ್ಲಿ ಮಾದಕ ದ್ರವ್ಯ ಇದೆಯೇ ಎಂದು ಪತ್ತೆ ಹಚ್ಚಲು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಎಲ್ಲಾ ಆರೋಪಿಗಳನ್ನೂ ವಿಚಾರಣೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏತನ್ಮಧ್ಯೆ, ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಸಿಸಿಬಿ ಇನ್ಸ್‌ಪೆಕ್ಟರ್ ಎಲ್ ಸುಬ್ರಹ್ಮಣ್ಯ ಸ್ವಾಮಿ ಮತ್ತು ಹೆಡ್ ಕಾನ್‌ಸ್ಟೆಬಲ್ ಎಸ್‌ಬಿ ರಾಜೀವ್, ಮಾದಕ ದ್ರವ್ಯ ವಿರೋಧಿ ವಿಭಾಗ (ಎಎನ್‌ಡಬ್ಲ್ಯು) ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com