Lok Sabha Elections 2024: ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ.50ರಷ್ಟು ಮತದಾನ! ಎಲ್ಲಿ ಗರಿಷ್ಠ? ಎಲ್ಲಿ ಕನಿಷ್ಠ? ಇಲ್ಲಿದೆ ಸಂಪೂರ್ಣ ಪಟ್ಟಿ

ಇಡೀ ಕರ್ನಾಟಕವೇ ಎದುರು ನೋಡುತ್ತಿರುವ ಲೋಕಸಭಾ ಚುನಾವಣೆಯ ಮತಹಬ್ಬ ಶುಕ್ರವಾರ ಆರಂಭವಾಗಿದ್ದು, ಕರುನಾಡಿನ 14 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಇದುವರೆಗೂ ರಾಜ್ಯದ 14 ಕ್ಷೇತ್ರಗಳಲ್ಲಿ ಶೇ.50.93ರಷ್ಟು ಮತದಾನವಾಗಿದೆ.
ಮತಹಕ್ಕು ಚಲಾಯಿಸಲು ಸಾಲಿನಲ್ಲಿ ನಿಂತಿರುವ ಸಚಿವೆ ನಿರ್ಮಲಾ ಸೀತಾರಾಮನ್.
ಮತಹಕ್ಕು ಚಲಾಯಿಸಲು ಸಾಲಿನಲ್ಲಿ ನಿಂತಿರುವ ಸಚಿವೆ ನಿರ್ಮಲಾ ಸೀತಾರಾಮನ್.

ಬೆಂಗಳೂರು: ಇಡೀ ಕರ್ನಾಟಕವೇ ಎದುರು ನೋಡುತ್ತಿರುವ ಲೋಕಸಭಾ ಚುನಾವಣೆಯ ಮತಹಬ್ಬ ಶುಕ್ರವಾರ ಆರಂಭವಾಗಿದ್ದು, ಕರುನಾಡಿನ 14 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಇದುವರೆಗೂ ರಾಜ್ಯದ 14 ಕ್ಷೇತ್ರಗಳಲ್ಲಿ ಶೇ.50.93ರಷ್ಟು ಮತದಾನವಾಗಿದೆ.

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ.9.21ರಷ್ಟು ಮತದಾನವಾಗಿತ್ತು, ನಂತರ ಈ ಪ್ರಮಾಣ ಬೆಳಿಗ್ಗೆ 11 ಗಂಟೆ ವೇಳೆಗೆ ಶೇ.22.34ಕ್ಕೆ ಏರಿಕೆಯಾಯಿತು. ಮಧ್ಯಾಹ್ನ 1 ಗಂಟೆಯವರೆಗೆ ಶೇ.38.23ಕ್ಕೆ, ಹಾಗೂ ಇದೀಗ ಅಂದರೆ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.50.93ಕ್ಕೆ ತಲುಪಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನ 3 ಗಂಟೆಯ ವೇಳೆಗೆ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದ ಮತದಾನ ಆಗಿದ್ದು, ಇದುವರೆಗೂ 58.76ರಷ್ಟು ಮತದಾನ ಆಗಿದೆ. ಕನಿಷ್ಠ ಪ್ರಮಾಣದ ಮತದಾನ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಆಗಿದ್ದು, ಇದೂವರೆಗೂ ಶೇ.40.10ರಷ್ಟು ಮತದಾನವಾಗಿದೆ. ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.50.93ರಷ್ಟು ಮತದಾನ ಆಗಿದೆ.

ಮತಹಕ್ಕು ಚಲಾಯಿಸಲು ಸಾಲಿನಲ್ಲಿ ನಿಂತಿರುವ ಸಚಿವೆ ನಿರ್ಮಲಾ ಸೀತಾರಾಮನ್.
ಲೋಕಸಭಾ ಚುನಾವಣೆ: 2ನೇ ಹಂತದಲ್ಲಿ 88 ಸ್ಥಾನಗಳಿಗೆ ಮತದಾನ, ರಾಹುಲ್, ಹೇಮಾ ಮತ್ತಿತರರು ಕಣದಲ್ಲಿ!

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಇಲ್ಲಿದೆ ಮಾಹಿತಿ...

ಉಡುಪಿ-ಚಿಕ್ಕಮಗಳೂರು ಶೇ.57.49

ಹಾಸನ -ಶೇ.55.92

ದಕ್ಷಿಣ ಕನ್ನಡ - ಶೇ.58.76

ಚಿತ್ರದುರ್ಗ - ಶೇ.52.14

ತುಮಕೂರು- 56.62

ಮಂಡ್ಯ- ಶೇ.57.44

ಮೈಸೂರು - ಶೇ.53.55

ಚಾಮರಾಜನಗರ- ಶೇ.54.82

ಬೆಂಗಳೂರು ಗ್ರಾಮಾಂತರ- ಶೇ.49.62

ಬೆಂಗಳೂರು ಉತ್ತರ - ಶೇ.41.12

ಬೆಂಗಳೂರು ಕೇಂದ್ರ -ಶೇ. 40.10

ಬೆಂಗಳೂರು ದಕ್ಷಿಣ- ಶೇ.40.77

ಚಿಕ್ಕಬಳ್ಳಾಪುರ- ಶೇ.55.90

ಕೋಲಾರ - ಶೇ.54.66

ಮತಹಕ್ಕು ಚಲಾಯಿಸಲು ಸಾಲಿನಲ್ಲಿ ನಿಂತಿರುವ ಸಚಿವೆ ನಿರ್ಮಲಾ ಸೀತಾರಾಮನ್.
ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನ: ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ ವೈದ್ಯ!

14 ಸಂಸದೀಯ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಗೆ ಯಾವುದೇ ತಾಂತ್ರಿಕ ದೋಷಗಳಿಲ್ಲದೆ ಮತದಾನ ಆರಂಭವಾಗಿತ್ತು. ಆದರೆ, ಸಮಯ ಕಳೆಯುತ್ತಿದ್ದಂತೆ ಕೆಲವೆಡೆ ಸಮಸ್ಯೆಗಳು ವರದಿಯಾದವು. ಚಿಕ್ಕಮಗಳೂರು ಸಂಸದೀಯ ಕ್ಷೇತ್ರದ ಮತಗಟ್ಟೆ ಸಂಖ್ಯೆ 53 ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಇದರ ಪರಿಣಾಮ ಮತದಾನ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ದೋಷ ಸರಿಪಡಿಸಿದ ಬಳಿಕ ಮರಳಿ ಮತದಾನ ಪ್ರಕ್ರಿಯೆ ಆರಂಭಗೊಂಡಿತ್ತು.

ಮತದಾನ ಪ್ರಮಾಣ ಹೆಚ್ಚಾಗುತ್ತದೆ. ತಾಪಮಾನ ಕಡಿಮೆಯಾದ ಬಳಿಕ ಸಂಜೆ ವೇಳೆಗೆ ಮತದಾನ ಪ್ರಮಾಣದ ಶೇಕಡವಾರು ಹೆಚ್ಚಾಗಬಹುದು. ಆದರೆ, ತಾಪಮಾನ ಹೆಚ್ಚಾಗಿರುವ ಪರಿಣಾಮ ಜನರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಚುನಾವಣಾಧಿಕಾರಿಯೊಬ್ಬರು ಹೇಳಿದ್ದಾರೆ.

ಚುನಾವಣಾ ಆಯೋಗದ ಆದೇಶದಂತೆ ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ಗಳಿಗೆ ಅನುಮತಿ ನೀಡಲಾಗುತ್ತಿಲ್ಲ. ಕೆಲವೆಡೆ ಮತದಾರರು ಮತಗಟ್ಟೆಗಳಿಗೆ ಭೇಟಿ ನೀಡುವಾಗ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಸೂಚಿಸಲಾಗುತ್ತಿದೆ. ಸ್ಮಾರ್ಟ್ ವಾಚ್ ಗಳಿಗೂ ಅವಕಾಶ ನೀಡಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 2,88,08,182 ಮತದಾರರು ಶುಕ್ರವಾರ ಮತದಾನಕ್ಕೆ ಅರ್ಹರಾಗಿದ್ದು, ಅದರಲ್ಲಿ ಮೊದಲ ಬಾರಿ ಮತ ಚಲಾಯಿಸುವ ಯುವ ಮತದಾರರು 5,99,444 ಮಂದಿ ಇದ್ದಾರೆ. 14 ಲೋಕಸಭಾ ಕ್ಷೇತ್ರಗಳ ಪೈಕಿ ಕೋಲಾರ, ಚಾಮರಾಜನಗರ ಹಾಗೂ ಚಿತ್ರದುರ್ಗ ಎಸ್‌ಸಿ ಮೀಸಲು ಕ್ಷೇತ್ರಗಳಾಗಿವೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com