ಬೆಂಗಳೂರು: ಚಿಕನ್ ಕರಿ ಸರಿಯಿಲ್ಲ ಎಂದು ಬೈದಿದ್ದಕ್ಕೆ ಚಾಲಕನ ಬರ್ಬರ ಹತ್ಯೆ!

ಹತ್ಯೆಯಾದ ಸುರೇಶ್ ಸಂಬಂಧಿ ರವಿಚಂದ್ರನ್ 3 ತಿಂಗಳಿನಿಂದ ಅಮೃತ್ ಬೋರ್ ವಲ್ ಕಲ್ಕಿ ಎಂಟನ್ ಪ್ರೈಸಸ್ ನಲ್ಲಿ ಬೋರ್ ವೆಲ್ ಚಾಲಕ ಹಾಗೂ ಡ್ರಿಲ್ಲಿಂಗ್ ಆಪರೇಟರ್ ಕೆಲಸ ಮಾಡಿಕೊಂಡಿದ್ದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಚಿಕನ್ ಕರಿ ಸರಿಯಾಗಿ ಮಾಡಿಲ್ಲ ಎಂದು ಬೈದಿದ್ದಕ್ಕೆ ಲಾರಿ ಚಾಲಕ ಮತ್ತು ನಿರ್ವಾಹಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಎಇಸಿಎಸ್ ಲೇಔಟ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು ತಮಿಳುನಾಡಿನ ತಿರುಚ್ಚಿ ಮೂಲದ ಸುರೇಶ್ (47) ಎಂದು ಗುರ್ತಿಸಲಾಗಿದೆ. ಭಾನುವಾರ ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದೆ.

ಹತ್ಯೆಯಾದ ಸುರೇಶ್ ಸಂಬಂಧಿ ರವಿಚಂದ್ರನ್ 3 ತಿಂಗಳಿನಿಂದ ಅಮೃತ್ ಬೋರ್ ವಲ್ ಕಲ್ಕಿ ಎಂಟನ್ ಪ್ರೈಸಸ್ ನಲ್ಲಿ ಬೋರ್ ವೆಲ್ ಚಾಲಕ ಹಾಗೂ ಡ್ರಿಲ್ಲಿಂಗ್ ಆಪರೇಟರ್ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಸಿಂಗಸಂದ್ರದ ಎಇಸಿಎಲ್ ಲೇಔಟ್'ನ ನಿವೇಶನವೊಂದರಲ್ಲಿ ಬೋರ್ ವೆಲ್ ಕೊರೆಯಲು ಸುರೇಶ್, ರವಿಚಂದ್ರನ್ ಹಾಗೂ ಹಾಗೂ ಮಧ್ಯಪ್ರದೇಶ ಮೂಲದ ನಾಲ್ವರು ಕಾರ್ಮಿಕರು ಬಂದಿದ್ದಾರೆ.

ಸಂಗ್ರಹ ಚಿತ್ರ
'ನವಿಲು ಕರಿ' ರೆಸಿಪಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ತೆಲಂಗಾಣ ಯೂಟ್ಯೂಬರ್ ಬಂಧನ

ಭಾನುವಾರ ರಾತ್ರಿ ಬೋರ್ ವೆಲ್ ಕೊರೆಯುವ ಕೆಲಸ ಸ್ಥಗಿತಗೊಳಿಸಿ, ಸೋಮವಾರ ಕೆಲಸ ಮುಂದುವರೆಸಲು ತೀರ್ಮಾನಿಸಿದ್ದಾರೆ. ನಿವೇಶನದಲ್ಲಿದ್ದ ಶೆಡ್ ನಲ್ಲಿ ರಾತ್ರಿ ಉಳಿದುಕೊಂಡಿದ್ದಾರೆ. ಈ ವೇಳೆ ಮಧ್ಯಪ್ರದೇಶದ ಮೂಲದ ನಾಲ್ವರ ಪೈಕಿ ಓರ್ವ ಚಿಕನ್ ಸಾರು ಮಾಡಿದ್ದು, ಎಲ್ಲರೂ ಸೇರಿ ಊಟ ಮಾಡಿದ್ದಾರೆ. ಊಟದ ವೇಳೆ ಸುರೇಶ್ ಸಾರು ರುಚಿಕರವಾಗಿಲ್ಲ ಎಂದು ಬೈದಿದ್ದಾನೆ. ಬಳಿಕ ಎಲ್ಲರೂ ಶೆಡ್ ನಲ್ಲಿ ಮಲಗಿದ್ದಾರೆ. ಈ ಮಧ್ಯೆ ರವಿಯವರಿಗೆ ರಾತ್ರಿ ಎಚ್ಚರವಾಗಿದ್ದು, ಸುರೇಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಹಾಗೂ ಇತರರು ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾಪತ್ತೆಯಾಗಿರುವ ಕಾರ್ಮಿಕರೇ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com