ಖಾಸಗಿ ಬ್ಯಾಂಕ್ ನಿಂದ ಕಿರುಕುಳ ಆರೋಪ: ವಿಧಾನಸೌಧದ ಮುಂದೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ದಂಪತಿ ಯತ್ನ!

ಖಾಸಗಿ ಬ್ಯಾಂಕ್ ನಿಂದ ನಿರಂತರ ಕಿರುಕುಳ ಆಗುತ್ತಿದೆ ಎಂದು ಆರೋಪಿಸಿ ವಿಧಾನಸೌಧದ ಮುಂದೆ ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಗೆ ಕುಟುಂಬವೊಂದು ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ದಂಪತಿಗಳನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು.
ದಂಪತಿಗಳನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು.

ಬೆಂಗಳೂರು: ಖಾಸಗಿ ಬ್ಯಾಂಕ್ ನಿಂದ ನಿರಂತರ ಕಿರುಕುಳ ಆಗುತ್ತಿದೆ ಎಂದು ಆರೋಪಿಸಿ ವಿಧಾನಸೌಧದ ಮುಂದೆ ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಗೆ ಕುಟುಂಬವೊಂದು ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಇಂದು ಬೆಳಿಗ್ಗೆ 11. 45 ಗಂಟೆ ಸುಮಾರಿಗೆ ವಿಧಾನಸೌಧ ಮೂರನೇ ಗೇಟ್ ಬಳಿ ಈ ಘಟನೆ ನಡೆದಿದೆ.

ಕುಟುಂಬ ಸಮೇತ ಬಂದ ಶಾಹಿಸ್ತ ಬಾನು ಎಂಬುವವರು ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು‌ ಅವರನ್ನು ವಶಕ್ಕೆ ಪಡೆದುಕೊಂಡರು.

ಬೆಂಗಳೂರು ಕೋ ಆಪರೇಟಿವ್ ಸೊಸೈಟಿ ಚಾಮರಾಜಪೇಟೆ ಗೌರಿಪಾಳ್ಯದಲ್ಲಿ ಶಾಹಿಸ್ತಾ ಬಾನು ಅವರ ಗಂಡ ಮುನಾಯಿದುಲ್ಲಾ ಸಾಲ ಪಡೆದುಕೊಂಡಿದ್ದರು. ಜೆಜೆ ನಗರದಲ್ಲಿರುವ ಮನೆಗೆ 50 ಲಕ್ಷ ಲೋನ್ ತೆಗೆದುಕೊಂಡಿದ್ದರು. ಒಟ್ಟು 97 ಲಕ್ಷ ಹಣ ಪಾವಸಿದ್ದೇವೆ ಆದರೂ ಕಿರುಕುಳ ನೀಡುತ್ತಿದ್ದಾರೆ ಎಂಬುದು ಆತ್ಮಹತ್ಯೆಗೆ ಯತ್ನಿಸಿದವರ ಆರೋಪವಾಗಿದೆ.

ಈ ಬಗ್ಗೆ ಹಲವು ಬಾರಿ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಖಾನ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಹೇಳಿದೆ.

ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಚಾಮರಾಜಪೇಟೆ ಶಾಖೆಯಲ್ಲಿ ಗೌರಿಪಾಳ್ಯದ ಅನ್ವರ ಹೋಟೆಲ 13 ಸಿ ಕ್ರಾಸ ರಸ್ತೆಯ ನಿವಾಸಿಗಳಾದ ಮುನಾಯಿತವುಲ್ಲಾ (55 ವರ್ಷ) ಅವರ ಪತ್ನಿ ಸಾಹಿಸ್ತಾಬಾನಾ ರವರ ಕುಟುಂಬ 50 ಲಕ್ಷ ರೂ ಸಾಲ ತೆಗೆದುಕೊಂಡಿದ್ದರು. ಅದಕ್ಕೆ ಪರ್ತಿಯಾಗಿ ಈವರೆಗೂ ಸುಮಾರು 97 ಲಕ್ಷ ಹಣವನ್ನು ಬ್ಯಾಂಕ್ ಗೆ ಪಾವತಿಸಿರುತ್ತಾರೆ. ಆದರೆ ಸಾಲ ಬಾಕಿ ಇದೆ ಎಂದು ತಿಳಿಸಿದ ಬ್ಯಾಂಕ್ ನವರು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು 1.41 ಕೋಟಿ ರೂಪಾಯಿಗೆ ಮಾರಾಟ ಮಾಡಿರುತ್ತಾರೆ.. ನಮಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com