ಅಜಿತ್ ಭಾರ್ತಿ ಪ್ರಕರಣ: ನಮ್ಮ ಪೊಲೀಸರು ತಪ್ಪೇನು ಮಾಡಿಲ್ಲ- ಗೃಹ ಸಚಿವ ಪರಮೇಶ್ವರ್

ಉತ್ತರ ಪ್ರದೇಶದಲ್ಲಿ ಕರ್ನಾಟಕ ಪೊಲೀಸರು ಪೇಚಿಗೆ ಸಿಲುಕಿದ ವಿಚಾರದಲ್ಲಿ ಸ್ವಲ್ಪ ಗೊಂದಲವಾಗಿದೆ, ಆದರೆ, ನಮ್ಮ ಪೊಲೀಸರು ತಪ್ಪೇನು ಮಾಡಿಲ್ಲ ಅಂತಾ ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್
Updated on: 

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಕರ್ನಾಟಕ ಪೊಲೀಸರು ಪೇಚಿಗೆ ಸಿಲುಕಿದ ವಿಚಾರದಲ್ಲಿ ಸ್ವಲ್ಪ ಗೊಂದಲವಾಗಿದೆ, ಆದರೆ, ನಮ್ಮ ಪೊಲೀಸರು ತಪ್ಪೇನು ಮಾಡಿಲ್ಲ ಅಂತಾ ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಫ್ತಿಯಲ್ಲಿ ಪೊಲೀಸ್ ಹೋಗಿದ್ದಾರೆ. ಆದರೆ, ಭೇಟಿಗೂ ಮುನ್ನ ಅಲ್ಲಿನ ಪೊಲೀಸ್ಗೆ ಮಾಹಿತಿ ನೀಡಬೇಕಿತ್ತು, ತಿಳಿಸದೇ ಹೋಗಿದ್ದಾರೆ. ಅಲ್ಲಿನ ಪೊಲೀಸ್ ಮೊದಲು ನೋಟಿಸ್ ಕೊಡಿ, ನಂತರ ನೋಡೋಣ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಅಜಿತ್ ಭಾರ್ತಿ ಎಂಬ ಯುಟ್ಯೂಬರನ್ನು ಬಂಧಿಸಲು ರಾಜ್ಯದ ಪೊಲೀಸರು ಉತ್ತರಪ್ರದೇಶಕ್ಕೆ ಹೋಗಿದ್ದರು. ನೋಟಿಸ್ ಕೊಟ್ಟ ಮೇಲೆ ಆ ಯೂಟ್ಯೂಬರ್ ಬಾರದೇ ಹೋದರೆ ವಾರೆಂಟ್ ತೆಗೆದುಕೊಂಡು ಬಂಧಿಸುತ್ತಾರೆ. ಕೆಲವೊಮ್ಮೆ ಇಂತಹ ಗೊಂದಲ ಆಗುತ್ತದೆ. ನಮ್ಮ ಪೊಲೀಸರೇನು ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ಗೃಹ ಸಚಿವ ಪರಮೇಶ್ವರ್
ರಾಹುಲ್ ಗಾಂಧಿ ವಿರುದ್ಧ ಹೇಳಿಕೆ; ಯೂಟ್ಯೂಬರ್‌ ಅಜಿತ್‌ ಭಾರ್ತಿ ವಿರುದ್ಧ ಕ್ರಮಕ್ಕೆ ಮುಂದು, ಸರ್ಕಾರದ ವಿರುದ್ದ ಬಿಜೆಪಿ ವಾಗ್ದಾಳಿ

ಲೋಕಸಭಾ ಚುನಾವಣೆಯ ಸೋಲಿನ ಬಗ್ಗೆ ಎಐಸಿಸಿ ಕಮಿಟಿ ವಿಚಾರವಾಗಿ ಮಾತನಾಡಿ, ಎಐಸಿಸಿ ಮಟ್ಟದಲ್ಲಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಬೇರೆ ಇತ್ತು. 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ನಾವು 15 ಸ್ಥಾನ ಗೆಲ್ಲಲಿಲ್ಲ. ಸರ್ಕಾರ ಇದ್ದು ಕೂಡ ಇಷ್ಟೊಂದು ಕಡಿಮೆ ಆಯ್ತು ಅಂತ ಆತ್ಮಾವಲೋಕನ ಅಥವಾ ಫಾಕ್ಟ್ ಫೈಂಡಿಂಗ್ ಕಮಿಟಿ ರಚನೆ ಮಾಡಿದ್ದಾರೆ. ಎಲ್ಲಾ ರಾಜ್ಯಕ್ಕೂ ಮಾಡಿದ್ದಾರೆ ನಮ್ಮ ರಾಜ್ಯಕ್ಕೂ ಮಾಡಿದ್ದಾರೆ ಎಂದು ತಿಳಿಸಿದರು.

ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿ, ಅದು ಹೈ ಕಮಾಂಡ್ ಗೆ ಬಿಟ್ಟ ವಿಚಾರ. ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತೋ ನಮಗೆ ಗೊತ್ತಾಗಲ್ಲ. ಫ್ಯಾಕ್ಟ್ ಫೈಂಡಿಂಗ್ ಆಧಾರದ ಮೇಲೆ ಕೆಲವೊಮ್ಮೆ ನಿರ್ಧಾರಗಳು ಆಗುತ್ತದೆ. ಎಐಸಿಸಿ ಇರೋದೆ ನಮ್ಮನ್ನ ರೆಗ್ಯುಲೇಟ್ ಮಾಡೋದಕ್ಕೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com