ಉದ್ಯಮಿ ಮನೆಯಲ್ಲಿ 1.09 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ: ಮೂವರ ಬಂಧನ

ಆರೋಪಿಗಳಿಂದ 1.8 ಕೆಜಿ ಚಿನ್ನಾಭರಣ ಹಾಗೂ 18,000 ರೂ ಹಣ ಸೇರಿ ಒಟ್ಟು 1.09 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಧನ (ಸಾಂಕೇತಿಕ ಚಿತ್ರ)
ಬಂಧನ (ಸಾಂಕೇತಿಕ ಚಿತ್ರ)
Updated on

ಬೆಂಗಳೂರು: ಕೆಲಸದಿಂದ ವಜಾಗೊಳಿಸಿದ್ದಕ್ಕೆ ಮಾಲೀಕನ ಮನೆಯಿಂದ 1.09 ಕೋಟಿ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿ ಹಾಗೂ ಆತನ ಇಬ್ಬರು ಸಹಚರರನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಪ್ರಮುಖ ಆರೋಪಿ ಸನ್ಯಾಸಿ ಮಠ ನಂದೀಶ್, ಹೆಚ್.ಎಂ.ನಂದೀಶ್ ಹಾಗೂ ಪ್ರತಾಪ್ ಕುಮಾರ್ ಎಂದು ಗುರ್ತಿಸಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಹನುಮೇಗೌಡ ಪತ್ತೆಗೆ ಹುಡುಕಾಟ ಮುಂದುವರೆದಿದೆ.

ಆರೋಪಿಗಳಿಂದ 1.8 ಕೆಜಿ ಚಿನ್ನಾಭರಣ ಹಾಗೂ 18,000 ರೂ ಹಣ ಸೇರಿ ಒಟ್ಟು 1.09 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಮಾರುತಿ ಎಕ್ಸ್‌ಟೆನ್ಶನ್‌ನ 3ನೇ ಮುಖ್ಯ ರಸ್ತೆಯಲ್ಲಿರುವ ಆಭರಣ ವ್ಯಾಪಾರಿ ಭಾಸ್ಕರ್ ಅವರ ಮನೆಯಲ್ಲಿ ಸೆಪ್ಟೆಂಬರ್ 21 ರಂದು ಕಳ್ಳತನ ನಡೆದಿತ್ತು. ಭಾಸ್ಕರ್ ಅವರು ಸುಬ್ರಹ್ಮಣ್ಯನಗರದಲ್ಲಿ ಆಭರಣ ಮಳಿಗೆ ಹೊಂದಿದ್ದು, ಕುಟುಂಬದೊಂದಿಗೆ ಮಂತ್ರಾಲಯಕ್ಕೆ ಹೋಗಿದ್ದಾಗ ಮನೆಯಲ್ಲಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ತಮ್ಮ ಬಳಿ ಕೆಲಸಕ್ಕಿದ್ದವರ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ.

ಬಂಧನ (ಸಾಂಕೇತಿಕ ಚಿತ್ರ)
ಬೆಂಗಳೂರು: ವ್ಯಾಪಾರದಲ್ಲಿ ನಷ್ಟ, ಸಾಲ ತೀರಿಸಲು 50 ಲ್ಯಾಪ್‌ಟಾಪ್ ಕಳ್ಳತನ, ವ್ಯಕ್ತಿಯ ಬಂಧನ

ಆರೋಪಿ ನಂದೀಶ್ ಈ ಹಿಂದೆ ಭಾಸ್ಕರ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಅಸಮರ್ಥತೆಯ ಕಾರಣದಿಂದ ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಕುಪಿತನಾಗಿದ್ದ ನಂದೀಶ್ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಈ ನಡುವೆ ಭಾಸ್ಕರ್ ಅವರ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ನೆರೆಮನೆಯವರೊಂದಿಗೆ ಮಾತನಾಡುವಾಗ ಭಾಸ್ಕರ್ ಹಾಗೂ ಅವರ ಕುಟುಂಬ ಮಂತ್ರಾಲಯಕ್ಕೆ ಹೋಗುತ್ತಿರುವ ವಿಚಾರವನ್ನು ತಿಳಿದುಕೊಂಡಿದ್ದಾನೆ.

ಬಳಿತ ತನ್ನ ಸಹಚರರೊಂದಿಗೆ ಸೇರಿ ಸಂಚು ರೂಪಿಸಿ, ಮನೆಯ ಮೊದಲ ಮಹಡಿಯಲ್ಲಿದ್ದ ಕಿಟಕಿಯ ಗ್ರಿಲ್‌ಗಳನ್ನು ಕತ್ತರಿಸಿ, ಕಳ್ಳತನ ಮಾಡಿದ್ದಾರೆ.

ಮರುದಿನ ಮನೆಗೆ ಹಿಂದಿರುಗಿದ ಭಾಸ್ಕರ್ ಅವರಿಗೆ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದುಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಭಾಸ್ಕರ್ ಅವರ ಅನುಮಾನದ ಮೇಲೆಗೆ ಮೊದಲಿಗೆ ನಂದೀಶ್ ನನ್ನು ಪತ್ತೆ ಮಾಡಿ, ಬಂಧಿಸಿದ್ದಾರೆ. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಬಳ್ಳಾರಿಯಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com