ಷೇರಿನಲ್ಲಿ ಅಧಿಕ ಲಾಭದಾಸೆ ತೋರಿಸಿ ಕೋಟ್ಯಾಂತರ ರೂ. ವಂಚನೆ: ಬ್ಯಾಂಕ್ ಮ್ಯಾನೇಜರ್ ಸೇರಿ 8 ಮಂದಿ ಬಂಧನ

ಆರೋಪಿಗಳು 1.5 ಕೋಟಿ ರೂ. ಹೂಡಿಕೆ ಮಾಡಿದ್ದ ಒಬ್ಬರಿಗೆ ವಂಚನೆ ಮಾಡಿದ್ದು, ತನಿಖೆ ಬಳಿಕ ಸೈಬರ್ ಕ್ರೈಂ ಠಾಣೆಯಲ್ಲಿ ಈ ವಿಚಾರವಾಗಿ 254ಕ್ಕೂ ಅಧಿಕ ದೂರುಗಳು ದಾಖಲಾಗಿರುವುದು ಪತ್ತೆಯಾಗಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಷೇರ್ ಟ್ರೇಡಿಂಗ್ ನಲ್ಲಿ ಅಧಿಕ ಲಾಭದಸೆ ತೋರಿಸಿ ಜನರಿಂದ ಹಣ ಪಡೆದು ವಂಚಿಸುವ ಜಾಲಕ್ಕೆ ಸಹಕರಿಸಿದ್ದ ಆರೋಪದ ಮೇರೆಗೆ ಖಾಸಗಿ ಬ್ಯಾಂಕ್'ನ ವ್ಯವಸ್ಥಾಪಕ ಸೇರಿ 8 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಬ್ಯಾಂಕ್ ಮ್ಯಾನೇಜರ್ ಕಿಶೋರ್, ಸೇಲ್ಸ್‌ಮೆನ್ ಮನೋಹರ್, ರಾಕೇಶ್, ಕಾರ್ತಿಕ್, ಅಕೌಂಟ್ ಹೋಲ್ಡರ್ ಕೆಂಚೇಗೌಡ, ರಘುರಾಜ್, ಲಕ್ಷ್ಮೀಕಾಂತ್, ಮಾಲಾ ಎಂದು ಗುರುತಿಸಲಾಗಿದೆ.

ಆರೋಪಿಗಳು 1.5 ಕೋಟಿ ರೂ. ಹೂಡಿಕೆ ಮಾಡಿದ್ದ ಒಬ್ಬರಿಗೆ ವಂಚನೆ ಮಾಡಿದ್ದು, ತನಿಖೆ ಬಳಿಕ ಸೈಬರ್ ಕ್ರೈಂ ಠಾಣೆಯಲ್ಲಿ ಈ ವಿಚಾರವಾಗಿ 254ಕ್ಕೂ ಅಧಿಕ ದೂರುಗಳು ದಾಖಲಾಗಿರುವುದು ಪತ್ತೆಯಾಗಿದೆ.

ಯಲಹಂಕ ಮೂಲದ ವ್ಯಕ್ತಿಗೆ ಷೇರು ಟ್ರೇಡಿಂಗ್​ನಲ್ಲಿ ಹಣ ಹೂಡಿದರೆ ಹಣ ದ್ವಿಗುಣ ಮಾಡುವುದಾಗಿ ಆಮಿಷವೊಡ್ಡಿ ವಂಚಕರು ಆರಂಭದಲ್ಲಿ 50 ಸಾವಿರ ಕಟ್ಟಿಸಿಕೊಂಡಿದ್ದರು. ಹಣ ದ್ವಿಗುಣವಾಗಿದೆ ಎಂದು ವಾಟ್ಸ್​ಆ್ಯಪ್​ ಮಾಡಿ ಕಳೆದ ಮಾರ್ಚ್​ನಿಂದ ಜೂನ್ ವರೆಗೂ ಹಂತ-ಹಂತವಾಗಿ 1.50 ಕೋಟಿ ಪಾವತಿಸಿಕೊಂಡು ವಂಚಿಸಿದ್ದರು. ಬಳಿಕ ಉದ್ಯಮಿ ಹಣ ಡ್ರಾ ಮಾಡಲು ಮುಂದಾದಾಗ ರೂ.75 ಲಕ್ಷ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಉದ್ಯಮಿ ಈ ಸಂಬಂಧ ದೂರು ನೀಡಿದ್ದಾರೆ.

File photo
1.22 ಕೋಟಿ ರೂ ಮೌಲ್ಯದ ಚಿನ್ನಾಭರಣ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಆರೋಪಿತರ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಎನ್​ಸಿಆರ್ ಪೋರ್ಟಲ್​ನಲ್ಲಿ ವಂಚಕರ ವಿರುದ್ಧ 254 ಪ್ರಕರಣ ದಾಖಲಾಗಿರುವುದು ಹಾಗೂ ಸುಮಾರು 97 ಕೋಟಿ‌ ರೂ.ವಹಿವಾಟು ನಡೆದಿರುವುದು ಕಂಡುಬಂದಿದೆ.

ನಾಗರಭಾವಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಹೋಗಿ ಪರಿಶೀಲಿಸಿದಾಗ ಆರೋಪಿತರ ಬೆಂಗಳೂರು ನಗರದಲ್ಲಿನ ವಾಸ ಹಾಗೂ ಬಿಸೆನೆಸ್ ನಡೆಸುತ್ತಿರುವ ದಾಖಲಾತಿಯನ್ನ ಬ್ಯಾಂಕ್ ಸಿಬ್ಬಂದಿ ಪಡೆದುಕೊಂಡಿರದಿರುವುದು ಕಂಡು ಬಂದಿದೆ. ಅಲ್ಲದೆ‌, ಇದೇ ಶಾಖೆಯಲ್ಲಿ ಇನ್ನೂ‌ ನಾಲ್ಕು ಅಕೌಂಟ್ ಸೇರಿ‌ ಒಟ್ಟು 6 ಖಾತೆಗಳಿಂದ ಸುಮಾರು 97 ಕೋಟಿ ಹಣ ವಹಿವಾಟು ನಡೆದಿರುವುದು ಕಂಡುಬಂದಿದೆ‌‌. ತನಿಖೆಯಲ್ಲಿ ಬ್ಯಾಂಕ್ ನೌಕರರ ಅಕ್ರಮ ಕೂಡ ಬೆಳಕಿಗೆ ಬಂದಿದೆ.

ಬ್ಯಾಂಕ್ ನೌಕರರು ನೀಡಿದ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ. ವಂಚನೆ ಕೃತ್ಯದಲ್ಲಿ ಇನ್ನೂ 9 ಮಂದಿ‌ ಆರೋಪಿಗಳು ಭಾಗಿಯಾಗಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧಕಾರ್ಯ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com