IPL 2026: Namma Metro-BMTC ಬಸ್‌ ಸಂಚಾರ ಅವಧಿ ವಿಸ್ತರಣೆ

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಏಪ್ರಿಲ್ 15 ಮತ್ತು 24 ರಂದು ನಡೆಯಲಿರುವ ಐಪಿಎಲ್ ಪಂದ್ಯಗಳಿಗಾಗಿ ಮೆಟ್ರೋ ಸೇವೆಯ ಅವಧಿಯನ್ನು ವಿಸ್ತರಿಸಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಐಪಿಎಲ್ 2026 ಪಂದ್ಯಗಳ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಮತ್ತು ಬಿಎಂಟಿಸಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿವೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಏಪ್ರಿಲ್ 15 ಮತ್ತು 24 ರಂದು ನಡೆಯಲಿರುವ ನೈಟ್ ಪಂದ್ಯಗಳಿಗಾಗಿ ಮೆಟ್ರೋ ಸೇವೆಯ ಅವಧಿಯನ್ನು ವಿಸ್ತರಿಸಿದೆ. ಆ ದಿನಗಳಲ್ಲಿ ಅಂತಿಮ ರೈಲು ಸೇವೆಗಳು ಮುಂದಿನ ದಿನ ಬೆಳಗಿನ 2 ಗಂಟೆಯವರೆಗೆ ಲಭ್ಯವಿರಲಿವೆ.

ನಾಡಪ್ರಭು ಕೆಂಪೇಗೌಡ (ಮಜೆಸ್ಟಿಕ್) ನಿಲ್ದಾಣದಿಂದ ಎಲ್ಲಾ ದಿಕ್ಕುಗಳಿಗೆ ರಾತ್ರಿ 1.30ರವರೆಗೆ ರೈಲುಗಳು ಸಂಚರಿಸಲಿವೆ. ಆದರೆ, ಏಪ್ರಿಲ್ 18 ರಂದು ಮಧ್ಯಾಹ್ನ ಪಂದ್ಯ ಇರುವುದರಿಂದ ಆ ದಿನ ಸಾಮಾನ್ಯ ವೇಳಾಪಟ್ಟಿಯೇ ಅನ್ವಯವಾಗಲಿದೆ.

ಐಪಿಎಲ್ ಟಿಕೆಟ್ ಹೊಂದಿರುವವರಿಗೆ ಡಿಜಿಟಲ್ ಟಿಕೆಟ್‌ನಲ್ಲಿರುವ QR ಕೋಡ್ ಮೂಲಕ ಎರಡು ದಿಕ್ಕಿನ ಮೆಟ್ರೋ ಪ್ರಯಾಣ ಸೌಲಭ್ಯ ನೀಡಲಾಗುತ್ತಿದೆ.

File photo
IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ವೀಕ್ಷಣೆಗೆ ಆಗಮಿಸುವ ಪ್ರಯಾಣಿಕರಿಗೆ BMTC ಬಸ್ ವ್ಯವಸ್ಥೆ!

ಅಭಿಮಾನಿಗಳು ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಪ್ರವೇಶಿಸಲು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.

ಇದಲ್ಲದೆ, ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ದ್ವಿಚಕ್ರ ವಾಹನಗಳಿಗೆ ರೂ30 ಮತ್ತು ಕಾರುಗಳಿಗೆ ರೂ.60 ನಿಗದಿತ ಶುಲ್ಕ ವಿಧಿಸಲಾಗಿದೆ.

ಇತ್ತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೂಡ ವಿಶೇಷ ಬಸ್ ಸೇವೆಗಳನ್ನು ಘೋಷಿಸಿದೆ. ಪಂದ್ಯ ಮುಗಿದ ಬಳಿಕ ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಯಲಹಂಕ, ಹೊಸಕೋಟೆ ಮತ್ತು ಬನಶಂಕರಿ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ವಿಶೇಷ ಬಸ್‌ಗಳನ್ನು ನಿಯೋಜಿಸಲಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಈ ಸೇವೆಗಳು ಲಭ್ಯವಿರಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com