ತಾಂತ್ರಿಕ ದೋಷ: 4 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಟ; ಪ್ರಯಾಣಿಕರಿಗೆ ಸಾವಿನ ದರ್ಶನ ಮಾಡಿಸಿದ FLY91 ವಿಮಾನ..!

ಏಕಾಏಕಿ ವೇಗದ ನಿಯಂತ್ರಣ ಕಳೆದುಕೊಂಡ ಫ್ಲೈಟ್ ನನ್ನು ಸೇಫ್ ಆಗಿ ಲ್ಯಾಂಡ್ ಮಾಡಲು ಪೈಲಟ್​​ ಹರಸಾಹಸ ಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ಫ್ಲೈಟ್ 4 ಗಂಟೆ ತಡವಾಗಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ.
File photo
ಸಂಗ್ರಹ ಚಿತ್ರ
Updated on

ಹುಬ್ಬಳ್ಳಿ: ವಿಮಾನ ದುರಂತಗಳ ಸಂಖ್ಯೆ ಹೆಚ್ಚುತ್ತಿರುವಾಗಲೇ ರಾಜ್ಯದಲ್ಲಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಹೈದರಾಬಾದ್​ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನ ಏಕಾಏಕಿ ನಿಯಂತ್ರಣ ಕಳೆದುಕೊಂಡಿದ್ದು, ಬಳಿಕ ಆಗಸದಲ್ಲೇ ಸುಮಾರು 3 ಗಂಟೆಗಳ ಸುತ್ತಾಡಿ, ಪ್ರಯಾಣಿಕರಿಗೆ ಸಾವಿನ ದರ್ಶನ ಮಾಡಿಸಿದೆ.

ಏಕಾಏಕಿ ವೇಗದ ನಿಯಂತ್ರಣ ಕಳೆದುಕೊಂಡ ಫ್ಲೈಟ್ ನನ್ನು ಸೇಫ್ ಆಗಿ ಲ್ಯಾಂಡ್ ಮಾಡಲು ಪೈಲಟ್​​ ಹರಸಾಹಸ ಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ಫ್ಲೈಟ್ 4 ಗಂಟೆ ತಡವಾಗಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ.

ಹೈದರಾಬಾದ್​ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನದಲ್ಲಿ ಈ ಅವಘಡ ಸಂಭವಿಸಿದೆ. Fly91 ಏರ್ ಲೈನ್ಸ್ IC3401( ATRTURBOPROP AT7) ಸಂಖ್ಯೆಯ ಫ್ಲೈಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ನಿನ್ನೆ ಮಧ್ಯಾಹ್ನ 4 ಗಂಟೆ ಹೈದರಾಬಾದ್ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಿಂದ ಟೆಕ್ ಆಫ್ ಆದ ಈ ವಿಮಾನ ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಹುಬ್ಬಳ್ಳಿ ಸಮೀಪ ವಿಮಾನ ನಿಯಂತ್ರಣ ಕಳೆದುಕೊಂಡಿತ್ತು.

File photo
Su-30 MKI ಯುದ್ಧ ವಿಮಾನದಲ್ಲಿ ಅಡಚಣೆ; ಹಾರಾಟ ಸೇವೆ ವ್ಯತ್ಯಯ: ಪುಣೆ ವಿಮಾನ ನಿಲ್ದಾಣ ರನ್‌ವೇ ಮರು ಕಾರ್ಯಾಚರಣೆ

ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ನಿಯಂತ್ರಣ ಕಳೆದುಕೊಂಡ ವಿಮಾನ ಆಕಾಶದಲ್ಲೇ ಸುಮಾರು 4 ಗಂಟೆ ಕಾಲ ಸುತ್ತಾಡಿದೆ. ಮುಂಡಗೋಡ, ದಾವಣಗೆರೆ, ಶಿವಮೊಗ್ಗದಲ್ಲಿ ಸುತ್ತಾಡಿ ಫ್ಲೈಟ್​ ಎಲ್ಲಿಯೂ ಲ್ಯಾಂಡ್ ಆಗಿಲ್ಲ. ಬಳಿಕ ಸಂಜೆ 7.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

ಈ ನಡುವೆ ಆತಂಕಕೊಂಡ ಪ್ರಯಾಣಿಕರು ವಿಮಾನದಲ್ಲಿ ಕಣ್ಣೀರಿಡುತ್ತಾ, ದೇವರಿಗೆ ಕೈಮುಗಿದು ಬೇಡಿದ್ದಾರೆ. ಪ್ರಯಾಣಿಕರು ಅಳುತ್ತಿರುವ ದೃಶ್ಯ ಈಗ ಎಲ್ಲಾ ಕಡೆ ವೈರಲ್‌ ಆಗಿದೆ.

ಇದೇ ವೇಳೆ ವಿಮಾನದ ಸಿಬ್ಬಂದಿಗಳು ಹವಾಮಾನ ವೈಪರೀತ್ಯದ ಕಾರಣಕ್ಕೆ ಲ್ಯಾಂಡಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮೆಲ್ಲರ ಸುರಕ್ಷತೆಯೇ ನಮ್ಮೆಲ್ಲರ ಮೊದಲ ಆದ್ಯತೆ. ಯಾರೂ ಸಹ ಆತಂಕಕ್ಕೆ ಒಳಗಾಗಬೇಡಿ ಎಂದು ಹೇಳುತ್ತಿರುವುದೂ ಕಂಡು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com