ಚಿಕ್ಕಮಗಳೂರು: ಈದ್ ಮಿಲಾದ್ ಮೆರವಣಿಗೆಗೆ 40 ಅಡಿ ಟಿಪ್ಪು ಕಟೌಟ್; ಮುಜಾಹಿದ್ ಬೆಂಬಲಿತ ಹಾಡು ಬಳಕೆ; 7 ಮಂದಿ ಬಂಧನ

ಟಿಪ್ಪು ನಗರದಲ್ಲಿ ಈದ್ ಮಿಲಾದ್ ಹಬ್ಬಕ್ಕಾಗಿ ಅಳವಡಿಸಲಾಗಿದ್ದ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಿನ್ನೆಲೆಗೆ, "ಪಾಕಿಸ್ತಾನ್ ಮುಜಾಹಿದ್ದೀನ್ ಸೈನಿಕರು" ಎಂಬ ದೇಶವಿರೋಧಿ ಗೀತೆಯನ್ನು ಎಡಿಟ್ ಮಾಡಿ ಇನ್‌ಸ್ಟಾಗ್ರಾಮ್ ರೀಲ್ಸ್ ಹಾಗೂ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಹಂಚಿಕೊಳ್ಳಲಾಗಿತ್ತು.
Tippu
ಟಿಪ್ಪು ಕಟೌಟ್
Updated on

ಚಿಕ್ಕಮಗಳೂರು: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಹಾಡು ಬಳಸಿ ವಿಡಿಯೋ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಪೊಲೀಸರು ಒಟ್ಟು ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ.

ಬುಧವಾರ ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್-ಉನ್-ನಬಿ ಹಬ್ಬವನ್ನು ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಟಿಪ್ಪು ನಗರದಲ್ಲಿ ಈದ್ ಮಿಲಾದ್ ಹಬ್ಬಕ್ಕಾಗಿ ಅಳವಡಿಸಲಾಗಿದ್ದ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಿನ್ನೆಲೆಗೆ, "ಪಾಕಿಸ್ತಾನ್ ಮುಜಾಹಿದ್ದೀನ್ ಸೈನಿಕರು" ಎಂಬ ದೇಶವಿರೋಧಿ ಗೀತೆಯನ್ನು ಎಡಿಟ್ ಮಾಡಿ ಇನ್‌ಸ್ಟಾಗ್ರಾಮ್ ರೀಲ್ಸ್ ಹಾಗೂ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಹಂಚಿಕೊಳ್ಳಲಾಗಿತ್ತು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಮುಖ್ಯ ಆರೋಪಿ ರೋಷನ್‌ನನ್ನು ಬಂಧಿಸಿದ್ದು, ವಿಡಿಯೋ ಎಡಿಟಿಂಗ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಸಾಥ್ ನೀಡಿದ ಇಬ್ಬರು ಅಪ್ರಾಪ್ತರು ಸೇರಿದಂತೆ ಏಳು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಡಿಯೋದಲ್ಲಿದ್ದ ಹಾಡನ್ನು ಯಾರು ಪೋಸ್ಟ್ ಮಾಡಿದ್ದರು ಹಾಗೂ ಅದನ್ನು ಪೋಸ್ಟ್ ಮಾಡಲು ಯಾರಾದರೂ ಪ್ರಚೋದನೆ ನೀಡಿದ್ದರೇ ಎಂಬುದರ ಕುರಿತು ಪೊಲೀಸರು ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.

Tippu
ಚಿಕ್ಕಮಗಳೂರು: ಟಿಪ್ಪು ಕಟೌಟ್‌ಗೆ ಪಾಕಿಸ್ತಾನದ ಮುಜಾಹಿದ್ ಹಾಡು ಬಳಕೆ; ಕಿಡಿಗೇಡಿ ಬಂಧನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com