ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಹಣ ಒದಗಿಸಲು ಪ್ಲಾಟ್‌ಫಾರ್ಮ್‌ಗಳಿಗೆ ಶೇ. 1 ರಷ್ಟು ಶುಲ್ಕ

ಸ್ವಿಗ್ಗಿ, ಜೊಮಾಟೊ, ಓಲಾ, ಉಬರ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ಲಾಟ್‌ಫಾರ್ಮ್ ಆಧಾರಿತ ಸೇವೆಯ ವೇದಿಕೆಗಳಿಂದ ಪ್ರತಿ ವಹಿವಾಟಿನ ಮೇಲೆ ಶೇ. 1 ರಷ್ಟು ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
1 per cent fee on gig platforms to fund social security in Karnataka
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ವರ್ಕರ್ಸ್(ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ, 2025 ರ ಅಡಿಯಲ್ಲಿ ಅಗ್ರಿಗೇಟರ್‌ಗಳು ಮಾಡುವ ಪಾವತಿಗಳ ಮೇಲೆ ಶೇ. 1 ರಷ್ಟು ಗಿಗ್ ವರ್ಕರ್ಸ್ ಕಲ್ಯಾಣ ಶುಲ್ಕ ಸಂಗ್ರಹಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸ್ವಿಗ್ಗಿ, ಜೊಮಾಟೊ, ಓಲಾ, ಉಬರ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ಲಾಟ್‌ಫಾರ್ಮ್ ಆಧಾರಿತ ಸೇವೆಯ ವೇದಿಕೆಗಳಿಂದ ಪ್ರತಿ ವಹಿವಾಟಿನ ಮೇಲೆ ಶೇ. 1 ರಷ್ಟು ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಫೆಬ್ರವರಿ 13 ರ ಸರ್ಕಾರಿ ಆದೇಶದಲ್ಲಿ, ಕಾಯ್ದೆಯಡಿಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಮತ್ತು ಅಗ್ರಿಗೇಟರ್‌ಗಳು ತಮ್ಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಕೈಗೊಳ್ಳುವ ಪ್ರತಿಯೊಂದು ವಹಿವಾಟಿಗೂ ಗಿಗ್ ಕಾರ್ಮಿಕರಿಗೆ ಮಾಡಿದ ಪಾವತಿಗಳ ಮೇಲೆ ಕ್ಷೇಮಾಭಿವೃದ್ಧಿ ಶುಲ್ಕವನ್ನು ಕಡಿತಗೊಳಿಸಬೇಕು ಮತ್ತು ಅದನ್ನು ಪಾವತಿಸಬೇಕು ಎಂದು ಕಾರ್ಮಿಕ ಇಲಾಖೆ ನಿರ್ದೇಶಿಸಿದೆ. ಈ ಕ್ರಮವು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹಣಕಾಸು ಒದಗಿಸುವ ಗುರಿಯನ್ನು ಹೊಂದಿದೆ.

1 per cent fee on gig platforms to fund social security in Karnataka
ಗಿಗ್ ಕಾರ್ಮಿಕರ ಬೇಡಿಕೆ: ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಸಂಸದ ರಾಘವ್ ಚಡ್ಡಾ; Video

ರೈಡ್-ಹೇಲಿಂಗ್ ಸೇವೆಗಳಿಗೆ, ಶುಲ್ಕವನ್ನು ದ್ವಿಚಕ್ರ ವಾಹನಗಳಿಗೆ ಶೇ. 1 ರಿಂದ 0.50 ರೂ., ತ್ರಿಚಕ್ರ ವಾಹನಗಳಿಗೆ 0.75 ರೂ. ಮತ್ತು ನಾಲ್ಕು ಚಕ್ರ ವಾಹನಗಳಿಗೆ 1 ರೂ. ಮಿತಿಗೊಳಿಸಲಾಗುತ್ತದೆ.

ದ್ವಿಚಕ್ರ ವಾಹನಗಳನ್ನು ಬಳಸುವ ಆಹಾರ ಮತ್ತು ದಿನಸಿ ವಿತರಣಾ ಸೇವೆಗಳಿಗೂ ಇದೇ ರೀತಿಯ ದರಗಳು ಅನ್ವಯಿಸುತ್ತವೆ. ಲಾಜಿಸ್ಟಿಕ್ಸ್ ಸೇವೆಗಳಲ್ಲಿ, ದ್ವಿಚಕ್ರ ವಾಹನಗಳಿಗೆ 0.50 ರೂ., ತ್ರಿಚಕ್ರ ವಾಹನಗಳಿಗೆ 0.75 ರೂ., ಲಘು ವಾಣಿಜ್ಯ ವಾಹನಗಳಿಗೆ 1 ರೂ. ಮತ್ತು ಭಾರೀ ವಾಣಿಜ್ಯ ವಾಹನಗಳಿಗೆ 1.50 ರೂ. ಮಿತಿಗೊಳಿಸಲಾಗುತ್ತದೆ. ಇ-ಮಾರುಕಟ್ಟೆ ಸೇವೆಗಳು ಮತ್ತು ವೃತ್ತಿಪರ ಚಟುವಟಿಕೆ ಪೂರೈಕೆದಾರರು ಸಹ ನಿರ್ದಿಷ್ಟ ಮಿತಿಗಳೊಂದಿಗೆ ಶೇ. 1 ರಷ್ಟು ಶುಲ್ಕವನ್ನು ಸಂಗ್ರಹಿಸಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com