A scientist using a digital tablet working in a modern medical research laboratory, analysing DNA information.
ಆಧುನಿಕ ವೈದ್ಯಕೀಯ ಸಂಶೋಧನಾ ಪ್ರಯೋಗಾಲಯದಲ್ಲಿ ಡಿಜಿಟಲ್ ಟ್ಯಾಬ್ಲೆಟ್ ಬಳಸಿ ಡಿಎನ್‌ಎ ಮಾಹಿತಿಯನ್ನು ವಿಶ್ಲೇಷಿಸುತ್ತಿರುವ ವಿಜ್ಞಾನಿ

ಕರ್ನಾಟಕದ Biotechnology ಉದ್ಯಮ ಮೌಲ್ಯ 39.2 ಬಿಲಿಯನ್ ಡಾಲರ್‌ಗೆ ಏರಿಕೆ; ರಾಜ್ಯದ ಆಂತರಿಕ ಉತ್ಪನ್ನದ ಶೇ.10 ಪಾಲು

ದೇಶದ ಒಟ್ಟು ಉತ್ಪಾದನೆಯಲ್ಲಿ ಸುಮಾರು 21 ಶೇಕಡಾ ಪಾಲು ಹೊಂದಿರುವ ಕರ್ನಾಟಕದ ಬಯೋಎಕಾನಮಿ, 2023ರ 31 ಬಿಲಿಯನ್‌ ಡಾಲರ್ ನಿಂದ ಹೆಚ್ಚಾಗಿ 26.5% ಸಂಯೋಜಿತ ಬೆಳವಣಿಗೆಯನ್ನು ದಾಖಲಿಸಿದೆ.
Published on

ಬೆಂಗಳೂರು: ಕರ್ನಾಟಕದ ಜೈವಿಕ ತಂತ್ರಜ್ಞಾನ (Biotech) ಕ್ಷೇತ್ರದ ಆರ್ಥಿಕ ಮೌಲ್ಯವು 39.2 ಬಿಲಿಯನ್ ಡಾಲರ್‌ಗಳಿಗೆ (ಸುಮಾರು 3.25 ಲಕ್ಷ ಕೋಟಿ ರೂಪಾಯಿ) ಏರಿಕೆಯಾಗಿ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ಶೇಕಡಾ 10ಕ್ಕಿಂತ ಹೆಚ್ಚು ಪಾಲು ಹೊಂದಿದೆ ಎಂದು ಕರ್ನಾಟಕ ಬಯೋಎಕಾನಮಿ ವರದಿ 2025 ತಿಳಿಸಿದೆ.

ವರದಿ ಪ್ರಕಾರ, ದೇಶದ ಒಟ್ಟು ಉತ್ಪಾದನೆಯಲ್ಲಿ ಸುಮಾರು 21 ಶೇಕಡಾ ಪಾಲು ಹೊಂದಿರುವ ಕರ್ನಾಟಕದ ಬಯೋಎಕಾನಮಿ, 2023ರ 31 ಬಿಲಿಯನ್‌ ಡಾಲರ್ ನಿಂದ ಹೆಚ್ಚಾಗಿ 26.5% ಸಂಯೋಜಿತ ಬೆಳವಣಿಗೆಯನ್ನು ದಾಖಲಿಸಿದೆ.

ಪ್ರತಿ ತ್ರೈಮಾಸಿಕದಲ್ಲೂ ಸುಮಾರು 10 ಬಿಲಿಯನ್ ಡಾಲರ್ ಮೌಲ್ಯವನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ಸೇರ್ಪಡೆ ಮಾಡುತ್ತಿದೆ. ಬಯೋಲಾಜಿಕ್ಸ್, ಬಯೋಸಿಮಿಲರ್ಸ್, ಲಸಿಕೆಗಳು ಮತ್ತು ಡಯಾಗ್ನೋಸ್ಟಿಕ್ಸ್‌ಗಳ ನೆರವಿನಿಂದ ಬಯೋಫಾರ್ಮಾ ಕ್ಷೇತ್ರವು ಸುಮಾರು 16.44 ಬಿಲಿಯನ್ ಡಾಲರ್ ಕೊಡುಗೆಯೊಂದಿಗೆ ಪ್ರಮುಖ ವಲಯವಾಗಿ ಮುಂದುವರಿದಿದೆ.

ಕೈಗಾರಿಕಾ ಜೈವಿಕ ತಂತ್ರಜ್ಞಾನವು 11.46 ಬಿಲಿಯನ್ ಡಾಲರ್ ಕೊಡುಗೆಯೊಂದಿಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿದ್ದು, ಫರ್ಮೆಂಟೇಶನ್ ಆಧಾರಿತ ಕೈಗಾರಿಕೆಗಳು, ಬಯೋಫ್ಯೂಯೆಲ್ಸ್, ಎನ್ಜೈಮ್ಸ್ ಮತ್ತು ಪರಿಸರ ಸ್ನೇಹಿ ವಸ್ತುಗಳು ಇದಕ್ಕೆ ಪ್ರಮುಖ ಕಾರಣವಾಗಿವೆ.

ಬೆಂಗಳೂರಿನ ಪ್ರಮುಖ ಪಾತ್ರ

ಕರ್ನಾಟಕದ ಬಯೋಎಕಾನಮಿಯಲ್ಲಿ ಬೆಂಗಳೂರು ನಗರ ಜಿಲ್ಲೆ 54 ಶೇಕಡಾ ಪಾಲು ಹೊಂದಿದೆ. ಮೈಸೂರು 8.7% ಪಾಲು ಹೊಂದಿದ್ದರೆ, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಒಟ್ಟಾಗಿ 9% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿವೆ.

2025ರಲ್ಲಿ 218 ಹೊಸ ಬಯೋಟೆಕ್ ಸ್ಟಾರ್ಟ್‌ಅಪ್‌ಗಳು ಸೇರ್ಪಡೆಯಾಗಿದ್ದು, ಒಟ್ಟು ಸಂಖ್ಯೆ 1,451ಕ್ಕೆ ಏರಿದೆ. ಇದರಲ್ಲಿ 75 ಶೇಕಡಾಕ್ಕಿಂತ ಹೆಚ್ಚು ಸಂಸ್ಥೆಗಳು ಜೀವ ವಿಜ್ಞಾನ ಮತ್ತು ಹೆಲ್ತ್-ಟೆಕ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ.

A scientist using a digital tablet working in a modern medical research laboratory, analysing DNA information.
ಕರ್ನಾಟಕದಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರ ಉತ್ತೇಜನಕ್ಕೆ ಹೊಸ ನೀತಿ ಅನಾವರಣ!

ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, “ಕರ್ನಾಟಕದ ಬಯೋಎಕಾನಮಿ 39 ಬಿಲಿಯನ್ ಡಾಲರ್ ದಾಟಿ GSDPಗೆ 10 ಶೇಕಡಾಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಜೈವಿಕ ತಂತ್ರಜ್ಞಾನ ಈಗ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಿಲ್ಲ; ಇದು ಆರ್ಥಿಕ ಬೆಳವಣಿಗೆ, ಕೈಗಾರಿಕಾ ನವೀನತೆ ಮತ್ತು ಸಾಮಾಜಿಕ ಪರಿಣಾಮಗಳ ಪ್ರಮುಖ ಚಾಲಕವಾಗಿದೆ ಎಂದು ಹೇಳಿದರು.

ಈ ವರದಿಯನ್ನು ಐಟಿ/ಬಿಟಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ಇನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (KITS) ಮತ್ತು ಅಸೋಸಿಯೇಷನ್ ಆಫ್ ಬಯೋಟೆಕ್ನಾಲಜಿ ಲೆಡ್ ಎಂಟರ್‌ಪ್ರೈಸಸ್ (ABLE) ಸಂಯುಕ್ತವಾಗಿ ಪ್ರಕಟಿಸಿವೆ. ವರದಿಯನ್ನು ಸಚಿವ ಪ್ರಿಯಾಂಕ್ ಖರ್ಗೆ, ಐಟಿ/ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್ ಮತ್ತು KITS ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರು ಬಿಡುಗಡೆ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com