173 ಬಿಲಿಯನ್ ಡಾಲರ್ ರಫ್ತಿನೊಂದಿಗೆ ಸಾಫ್ಟ್‌ವೇರ್-ಸರ್ವೀಸ್ ರಫ್ತಿನಲ್ಲಿ ಕರ್ನಾಟಕ ಅಗ್ರಸ್ಥಾನ: CM ಡಿ.ಕೆ ಶಿವಕುಮಾರ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ವಾಣಿಜ್ಯ ಗುಪ್ತಚರ ಮತ್ತು ಅಂಕಿಅಂಶಗಳ ಮಹಾನಿರ್ದೇಶನಾಲಯ ಅಂಕಿಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು ಸಾಫ್ಟ್‌ವೇರ್, ಸೇವೆಗಳು ಮತ್ತು ಸರಕು ರಫ್ತುಗಳಲ್ಲಿ 9.3 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತು ಕ್ಷೇತ್ರದಲ್ಲಿ ಕರ್ನಾಟಕವು ಭಾರತದ ರಾಜ್ಯಗಳ ಪೈಕಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ಸುಮಾರು 173 ಬಿಲಿಯನ್ ಡಾಲರ್ ಮೌಲ್ಯದ ರಫ್ತನ್ನು ದಾಖಲಿಸಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ವಾಣಿಜ್ಯ ಗುಪ್ತಚರ ಮತ್ತು ಅಂಕಿಅಂಶಗಳ ಮಹಾನಿರ್ದೇಶನಾಲಯ(Directorate General of Commercial Intelligence and Statistics) ನೀಡಿರುವ ಅಂಕಿಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು ಸಾಫ್ಟ್‌ವೇರ್, ಸೇವೆಗಳು ಮತ್ತು ಸರಕು ರಫ್ತುಗಳಲ್ಲಿ 9.3 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

2025-26ರಲ್ಲಿ ಕರ್ನಾಟಕದ ಒಟ್ಟು ರಫ್ತು ಮೌಲ್ಯ ಸುಮಾರು ₹19.7 ಲಕ್ಷ ಕೋಟಿ ತಲುಪಿದೆ.ಅದೇ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕದ ಪಾಲು 41% ಆಗಿದ್ದು, ಇತರೆ ರಾಜ್ಯಗಳಿಗಿಂತ ಬಹಳ ಮುಂದಿದೆ.

  • ಮಹಾರಾಷ್ಟ್ರ – 16 ಶೇ

  • ತಮಿಳು ನಾಡು – 12.5 ಶೇ

  • ಉತ್ತರ ಪ್ರದೇಶ – 5 ಶೇ

  • ಆಂಧ್ರ ಪ್ರದೇಶ – 1 ಶೇ

  • ಗುಜರಾತ್ – 0.9 ಶೇ

Representational image
ಕರ್ನಾಟಕದ ಬೆಳವಣಿಗೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬದ್ಧರಾಗಿದ್ದಾರೆ: Biocon ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ

ಸರಕು ರಫ್ತು ವಿಭಾಗದಲ್ಲಿ ಕಬ್ಬಿಣದ ಅದಿರು ಮತ್ತು ಖನಿಜಗಳ ರಫ್ತು ಅತ್ಯಧಿಕ 61 ಶೇಕಡಾ ಏರಿಕೆ ಕಂಡಿದೆ. ಅದರ ನಂತರ:

  • ರಾಸಾಯನಿಕ ಮತ್ತು ಸಂಬಂಧಿತ ಉತ್ಪನ್ನಗಳು – 56 ಶೇ

  • ಎಂಜಿನಿಯರಿಂಗ್ ಉತ್ಪನ್ನಗಳು – 28.9 ಶೇ

  • ಚರ್ಮದ ಉತ್ಪನ್ನಗಳು – 28.5 ಶೇ

  • ಮಸಾಲೆ ಪದಾರ್ಥಗಳು – 24.5 ಶೇ

ಕರ್ನಾಟಕದ ಉತ್ಪನ್ನಗಳು, ಸೇವೆಗಳು ಮತ್ತು ಆಲೋಚನೆಗಳು ವಿಶ್ವದ ವಿವಿಧ ಮಾರುಕಟ್ಟೆಗಳಿಗೆ ತಲುಪುತ್ತಿರುವ ಸಂದರ್ಭದಲ್ಲಿ, ಹೂಡಿಕೆ, ಕೈಗಾರಿಕೆ, ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳನ್ನು ಮತ್ತಷ್ಟು ವೃದ್ಧಿಸುವ ಮೂಲಕ ಕರ್ನಾಟಕವನ್ನು ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಶಕ್ತಿಯಾಗಿ ಬಲಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ,” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com