ಚಿಕ್ಕಮಗಳೂರು: ನಡು ರಸ್ತೆಯಲ್ಲಿ ಲಾಂಗ್​ನಿಂದ ಕೇಕ್‌ ಕತ್ತರಿಸಿ ಬರ್ತಡೇ ಸೆಲೆಬ್ರೇಷನ್‌; ಪುಡಾರಿ ವಿರುದ್ಧ FIR

ನಿನ್ನೆ ಮಧ್ಯರಾತ್ರಿ ಮಹಮದ್ ಸಮೀರ್ ಎಂಬ ಯುವಕ ರೌಡಿ ಸ್ಟೈಲ್‌ನಲ್ಲಿ ಕಾರಿನಿಂದ ಕೆಳಗಿಳಿದು ಲಾಂಗ್‌ನಿಂದ ಕೇಕ್ ಕತ್ತರಿಸಿದ್ದಾನೆ.
Youth Celebrates Birthday Using Sword to Cut Cake in Chikkamagaluru
ನಡು ರಸ್ತೆಯಲ್ಲಿ ಲಾಂಗ್​ನಿಂದ ಕೇಕ್‌ ಕತ್ತರಿಸಿ ಬರ್ತಡೇ ಸೆಲೆಬ್ರೇಷನ್‌
Updated on

ಚಿಕ್ಕಮಗಳೂರು: ಚಿಕ್ಕಮಗಳೂರಿನ ವಾಜಪೇಯಿ ಲೇಔಟ್‌ನಲ್ಲಿ ಯುವಕರ ಗುಂಪೊಂದು ನಡು ರಸ್ತೆಯಲ್ಲಿ ಲಾಂಗ್​ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಡಿದ್ದು, ಪುಂಡಾಟ ಮೆರೆದ ಪುಡಾರಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ನಿನ್ನೆ ಮಧ್ಯರಾತ್ರಿ ಮಹಮದ್ ಸಮೀರ್ ಎಂಬ ಯುವಕ ರೌಡಿ ಸ್ಟೈಲ್‌ನಲ್ಲಿ ಕಾರಿನಿಂದ ಕೆಳಗಿಳಿದು ಲಾಂಗ್‌ನಿಂದ ಕೇಕ್ ಕತ್ತರಿಸಿದ್ದಾನೆ. ನಡು ರಸ್ತೆಯಲ್ಲೇ ಸುಮಾರು 5 ಕೆಜಿಗೂ ಅಧಿಕ ತೂಕದ ಬೃಹತ್ ಕೇಕ್ ಕತ್ತರಿಸಲಾಗಿದ್ದು, ಈ ವೇಳೆ 10ಕ್ಕೂ ಹೆಚ್ಚು ಯುವಕರು ಸ್ಥಳದಲ್ಲಿದ್ದರು. ಇದನ್ನು ವಿಡಿಯೋ ಮಾಡಿದ್ದ ಯುವಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು, ಸಾರ್ವಜನಿಕ ರಸ್ತೆಯಲ್ಲಿ ತಲ್ವಾರ್ ಪ್ರದರ್ಶನ ಮಾಡಿದ ಆರೋಪದ ಮೇಲೆ ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Youth Celebrates Birthday Using Sword to Cut Cake in Chikkamagaluru
ಚಿಕ್ಕಮಗಳೂರು: ಮಹಿಳೆ ನಿಗೂಢ ಸಾವು; ರಿವಾಲ್ವರ್‌ನಿಂದ ಶೂಟ್ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆ

ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ಹಿಡಿದು ಜನರಲ್ಲಿ ಭೀತಿ ಹುಟ್ಟಿಸಿ, ಶಾಂತಿ ಭಂಗ ಮಾಡಿದ ಆರೋಪದ ಮೇಲೆ ಯುವಕನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com