ಬಾಣಸವಾಡಿ- ತುಮಕೂರು ನಡುವೆ ಒಂದು ಟ್ರಿಪ್‌ ಮೆಮು ವಿಶೇಷ ರೈಲು ಸೇವೆ!

ಬಾಣಸವಾಡಿ- ತುಮಕೂರು ಮೆಮು ವಿಶೇಷ ರೈಲು (ರೈಲು ಸಂಖ್ಯೆ 06589 ) ಭಾನುವಾರ ಮಧ್ಯಾಹ್ನ 03.30 ಗಂಟೆಗೆ ಬಾಣಸವಾಡಿಯಿಂದ ಹೊರಟು ಸಾಯಂಕಾಲ 05.15 ಗಂಟೆಗೆ ತುಮಕೂರನ್ನು ತಲುಪಲಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು, ನೈರುತ್ಯ ರೈಲ್ವೆಯು ಬಾಣಸವಾಡಿ ಮತ್ತು ತುಮಕೂರು ನಡುವೆ ದಿನಾಂಕ 22.03.2026ರಂದು ಒಂದು ಟ್ರಿಪ್ ಮೆಮು ವಿಶೇಷ ರೈಲು ಸೇವೆಯ ವ್ಯವಸ್ಥೆ ಮಾಡಿದೆ.

ಬಾಣಸವಾಡಿ- ತುಮಕೂರು ಮೆಮು ವಿಶೇಷ ರೈಲು (ರೈಲು ಸಂಖ್ಯೆ 06589 ) ಭಾನುವಾರ ಮಧ್ಯಾಹ್ನ 03.30 ಗಂಟೆಗೆ ಬಾಣಸವಾಡಿಯಿಂದ ಹೊರಟು ಸಾಯಂಕಾಲ 05.15 ಗಂಟೆಗೆ ತುಮಕೂರನ್ನು ತಲುಪಲಿದೆ.

ತುಮಕೂರು- ಬಾಣಸವಾಡಿ ಮೆಮು ವಿಶೇಷ ರೈಲು (ರೈಲು ಸಂಖ್ಯೆ 06590 ) ಭಾನುವಾರ ಸಾಯಂಕಾಲ 05.45 ಗಂಟೆಗೆ ತುಮಕೂರಿನಿಂದ ಹೊರಟು ರಾತ್ರಿ 07.40 ಗಂಟೆಗೆ ಬಾಣಸವಾಡಿಯನ್ನು ತಲುಪಲಿದೆ.

Casual Images
ಯುಗಾದಿ, ರಂಜಾನ್ ರಜೆ: ವಿಶೇಷ ರೈಲು ಸೇವೆ, ವೇಳಾಪಟ್ಟಿ ಹೀಗಿದೆ...

ಈ ಮೆಮು ವಿಶೇಷ ರೈಲಿಗೆ ಹೆಬ್ಬಾಳ, ಚಿಕ್ಕಬಾಣಾವರ, ಗೊಲ್ಲಹಳ್ಳಿ, ದೊಡ್ಡಬೆಲೆ, ನಿಡವಂದ, ಹಿರೇಹಳ್ಳಿ ಮತ್ತು ಕ್ಯಾತ್ಸಂದ್ರ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com