ಹಂಪಿಯಲ್ಲಿ ಪ್ರಾಚೀನ ಕಾಲದ ಒಳಚರಂಡಿ ವ್ಯವಸ್ಥೆ, ಆಳ್ವಾರ್ ಪ್ರತಿಮೆ ಪತ್ತೆ ಹಚ್ಚಿದ ASI

ಹೊಸದಾಗಿ ಪತ್ತೆಯಾಗಿರುವ ಒಳಚರಂಡಿ ರಚನೆಯು ವಿಜಯನಗರ ಅವಧಿಯಲ್ಲಿ ಅಭಿವೃದ್ಧಿಪಡಿಸಲಾದ ಸುಧಾರಿತ ನೀರಿನ ನಿರ್ವಹಣೆ ಮತ್ತು ಧಾರ್ಮಿಕ ವ್ಯವಸ್ಥೆಯ ಭಾಗವಾಗಿದೆ ಎಂದು ಹೇಳಿದ್ದಾರೆ.
ASI unearths ancient drainage system in Hampi
ಒಳಚರಂಡಿ ವ್ಯವಸ್ಥೆ - ಆಳ್ವಾರ್ ಪ್ರತಿಮೆ
Updated on

ಹಂಪಿ/ಹೊಸಪೇಟೆ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ASI)ಯ, ಹಂಪಿ ವೃತ್ತವು, ಪ್ರಾಚೀನ ಒಳಚರಂಡಿ ವ್ಯವಸ್ಥೆಗಳಲ್ಲಿ ಒಂದನ್ನು ಪತ್ತೆಹಚ್ಚಿದೆ. ಶುಕ್ರವಾರ ಹಂಪಿಯಲ್ಲಿರುವ ಪ್ರಸಿದ್ಧ ಹಜಾರ ರಾಮ ದೇವಾಲಯದಲ್ಲಿ ನಡೆಯುತ್ತಿರುವ ವೈಜ್ಞಾನಿಕ ಉತ್ಖನನದ ಸಮಯದಲ್ಲಿ ಈ ಒಳಚರಂಡಿ ಪತ್ತೆಯಾಗಿದೆ.

ಐತಿಹಾಸಿಕ ದೇವಾಲಯ ಸಂಕೀರ್ಣದಲ್ಲಿ ASI ತಂಡ, ನಡೆಸುತ್ತಿರುವ ಉತ್ಖನನವು ಇನ್ನೂ ಎರಡು ಆಳ್ವಾರ್ ಶಿಲ್ಪಗಳ ಆವಿಷ್ಕಾರಕ್ಕೂ ಕಾರಣವಾಗಿದ್ದು, ಇದು ಇತ್ತೀಚಿನ ವಾರಗಳಲ್ಲಿ ಈ ಸ್ಥಳದಿಂದ ವರದಿಯಾದ ಮಹತ್ವದ ಸಂಶೋಧನೆಗಳ ಸರಣಿಗೆ ಸೇರ್ಪಡೆಯಾಗಿದೆ.

ಇದಕ್ಕೂ ಮೊದಲು, ದೇವಾಲಯದ ಆವರಣದಲ್ಲಿ ವೈಜ್ಞಾನಿಕ ತೆರವು ಕಾರ್ಯದ ಸಮಯದಲ್ಲಿ ASI ಎರಡು ಆಳ್ವಾರ್ ಪ್ರತಿಮೆಗಳು ಮತ್ತು ಜೈನ ದೇವಾಲಯದ ಛಾವಣಿಯ ರಚನೆಯ ಕುರುಹುಗಳನ್ನು ಬಹಿರಂಗಪಡಿಸಿತ್ತು.

ಹಂಪಿ ವೃತ್ತದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಕೆ. ರಾಮಕೃಷ್ಣನ್ ರೆಡ್ಡಿ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿ, ಹೊಸದಾಗಿ ಪತ್ತೆಯಾಗಿರುವ ಒಳಚರಂಡಿ ರಚನೆಯು ವಿಜಯನಗರ ಅವಧಿಯಲ್ಲಿ ಅಭಿವೃದ್ಧಿಪಡಿಸಲಾದ ಸುಧಾರಿತ ನೀರಿನ ನಿರ್ವಹಣೆ ಮತ್ತು ಧಾರ್ಮಿಕ ವ್ಯವಸ್ಥೆಯ ಭಾಗವಾಗಿದೆ ಎಂದು ಹೇಳಿದ್ದಾರೆ.

ASI unearths ancient drainage system in Hampi
ವಿಜಯನಗರ ಸಾಮ್ರಾಜ್ಯದ ವೈಭವಕ್ಕೆ ಹೊಸ ಸಾಕ್ಷಿ: ಹಂಪಿಯಲ್ಲಿ ಶತಮಾನಗಳಷ್ಟು ಹಳೆಯ ದೇವಾಲಯದ ಮೇಲ್ಛಾವಣಿ ಪತ್ತೆ..!

ಬೃಹತ್ ಕಲ್ಲಿನಿಂದ ಕೂಡಿದ ಚಾನಲ್ ಅನ್ನು ಮಳೆಗಾಲದಲ್ಲಿ ನೀರನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಗರ್ಭಗುಡಿಯಿಂದ ದೇವಾಲಯ ಸಂಕೀರ್ಣದ ಹೊರ ಭಾಗಗಳಿಗೆ ದೇವಾಲಯದ ವಿಗ್ರಹಗಳ ಧಾರ್ಮಿಕ ಶುದ್ಧೀಕರಣ ಮತ್ತು ವಿಸರ್ಜನೆಗೆ ಸಹ ಬಳಸಲಾಗಿದೆ ಎಂದು ಪುರಾತತ್ತ್ವಜ್ಞರು ಶಂಕಿಸಿದ್ದಾರೆ.

ಸೂಕ್ಷ್ಮವಾಗಿ ಕೆತ್ತಿದ ಗ್ರಾನೈಟ್ ಕಲ್ಲಿನ ಚಪ್ಪಡಿಗಳನ್ನು ಬಳಸಿ ನಿರ್ಮಿಸಲಾದ ಒಳಚರಂಡಿ ಜಾಲವು ವಿಜಯನಗರ ವಾಸ್ತುಶಿಲ್ಪಿಗಳ ಗಮನಾರ್ಹ ಎಂಜಿನಿಯರಿಂಗ್ ಕೌಶಲ್ಯಗಳನ್ನು ಪ್ರತಿಬಿಂಬಿಸುತ್ತದೆ.

ಈ ಆವಿಷ್ಕಾರವು ದೇವಾಲಯದ ಆಚರಣೆಗಳು, ನೀರಿನ ಪರಿಚಲನೆ ವ್ಯವಸ್ಥೆಗಳು ಮತ್ತು ಮಧ್ಯಕಾಲೀನ ದಕ್ಷಿಣ ಭಾರತದ ದೇವಾಲಯಗಳಲ್ಲಿ ಅಳವಡಿಸಿಕೊಂಡಿರುವ ವಾಸ್ತುಶಿಲ್ಪ ಯೋಜನೆಗಳ ಬಗ್ಗೆ ಹೊಸ ಒಳನೋಟಗಳನ್ನು ಒದಗಿಸುತ್ತದೆ ಎಂದು ತಜ್ಞರು ನಂಬಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com