ನಿದ್ದೆ ಬರ್ತಿಲ್ಲ, ಕಿರಿಕಿರಿ ಆಗ್ತಿದೆ: ನಿತ್ಯ ನರಕ ದರ್ಶನ, ಬ್ಯಾರಕ್ ಬದಲಿಸಿ; ಪವಿತ್ರಾಗೌಡ ಕಣ್ಣೀರು

ಸ್ಥಳಾಂತರ ಮಾಡುವಂತೆ ಜೈಲಾಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿದ್ರೂ ಶಿಫ್ಟ್ ಮಾಡಿಲ್ಲವಂತೆ. ಮಧ್ಯರಾತ್ರಿಯಾದ್ರೂ ನಿದ್ದೆ ಮಾಡಲು ಬಿಡದೇ ಕಾಟ ವಿದೇಶಿ ಪ್ರಜೆಗಳಿ ಕಾಟ ಕೊಡ್ತಿದ್ದಾರೆ ಎಂದು ಪವಿತ್ರಾ ಮತ್ತೆ ಕಣ್ಣೀರು ಹಾಕಿದ್ದಾರೆ.
Pavithra gowda
ಪವಿತ್ರಾ ಗೌಡ
Updated on: 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆಗಿ ಜೈಲು ಪಾಲಾಗಿರೋ ಪವಿತ್ರಾ ಗೌಡಗೆ ನೈಜೀರಿಯಾ ಪ್ರಜೆಗಳ ಕಾಟ ಹೆಚ್ಚಿದೆಯಂತೆ. ಇವರ ಕಾಟಕ್ಕೆ ಬೇಸತ್ತ ಪವಿತ್ರಾ ಗೌಡ ನನ್ನನ್ನು ಬೇರೆ ಬ್ಯಾರಕ್​​​ಗೆ ಶಿಫ್ಟ್ ಮಾಡಿ ಎಂದು ಕೋರ್ಟ್ ಮೊರೆ ಹೋಗಿದ್ರು.

ಸ್ಥಳಾಂತರ ಮಾಡುವಂತೆ ಜೈಲಾಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿದ್ರೂ ಶಿಫ್ಟ್ ಮಾಡಿಲ್ಲವಂತೆ. ಮಧ್ಯರಾತ್ರಿಯಾದ್ರೂ ನಿದ್ದೆ ಮಾಡಲು ಬಿಡದೇ ಕಾಟ ವಿದೇಶಿ ಪ್ರಜೆಗಳಿ ಕಾಟ ಕೊಡ್ತಿದ್ದಾರೆ ಎಂದು ಪವಿತ್ರಾ ಮತ್ತೆ ಕಣ್ಣೀರು ಹಾಕಿದ್ದಾರೆ.

ಸಹ ಕೈದಿಗಳ ಕಾಟಕ್ಕೆ ಬೇಸತ್ತಿರೋ ಕೊಲೆ ಆರೋಪಿ ಪವಿತ್ರಾ ಗೌಡ ದಯವಿಟ್ಟು ಬ್ಯಾರಕ್ ಬದಲಿಸಿ ಅಂತ ಪ್ರತಿನಿತ್ಯವೂ ಮನವಿ ಮಾಡ್ತಿದ್ದಾರೆ. 30 ಜನರು ಇರುವ ಮಹಿಳಾ ಬ್ಯಾರಕ್​​ನಲ್ಲಿ ನೈಜೀರಿಯಾ ಪ್ರಜೆಗಳ ಕಾಟ ತಡೆಯೋಕೆ ಆಗ್ತಿಲ್ಲ ಎಂದು ಪವಿತ್ರಾ ಗೌಡ ಹೇಳ್ತಿದ್ದು, ಅ.13ರಂದು ನಡೆದ ಕೋರ್ಟ್ ವಿಚಾರಣೆಯಲ್ಲೂ ಸಹ ಪವಿತ್ರಗೌಡ ಪರ ನಾರಾಯಣಸ್ವಾಮಿ ಅವರು ಬ್ಯಾರಕ್ ಬದಲಾವಣೆಗೆ ಮನವಿ ಮಾಡಿದ್ರು.

ಒಂದೇ ಬ್ಯಾರಕ್‌ನಲ್ಲಿ 30 ಮಂದಿ ವಿಚಾರಣಾಧೀನ ಕೈದಿಗಳಿದ್ದು, ಮಧ್ಯರಾತ್ರಿವರೆಗೂ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ವಿದೇಶಿ ಪ್ರಜೆಗಳಿಂದ ಮಾನಸಿಕ ಕಿರಿಕಿರಿ ಉಂಟಾಗುತ್ತಿದೆ ಎಂದು ಪವಿತ್ರಾಗೌಡ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Pavithra gowda
Renukaswamy Murder Case: ಪವಿತ್ರಾ ಗೌಡ ಬೇಡಿಕೆಗೆ ಹೈಕೋರ್ಟ್ ಅಸ್ತು; ಬೇರೆ ಬ್ಯಾರಕ್‌ಗೆ ಶಿಫ್ಟ್! ಇಲ್ಲಿದೆ ಕಾರಣ...

ಜೈಲಿನಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿರುವ ಪವಿತ್ರಾಗೌಡ, ಖುದ್ದು ನ್ಯಾಯಾಧೀಶರೇ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಹಿಂದೆ ಕೂಡ ಹಲವು ಬಾರಿ ಬ್ಯಾರಕ್ ಬದಲಾವಣೆ ಮಾಡುವಂತೆ ಪವಿತ್ರಾಗೌಡ ನ್ಯಾಯಾಧೀಶರನ್ನು ಕೋರಿದ್ದರು. ಆಗ ಜೈಲಿನ ಮ್ಯಾನ್ಯುಯಲ್ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪವಿತ್ರಾಗೌಡ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ವರದಿ ಸಲ್ಲಿಸುವಂತೆ ನ್ಯಾಯಾಧೀಶರು ಜೈಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿದೇಶಿ ಪ್ರಜೆಗಳಿಂದ ಈಗಾಗಲೇ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಆರೋಪಿ ಪವಿತ್ರಾ ಗೌಡ ವೈದ್ಯಕೀಯ ರಿಪೋರ್ಟ್ ಕೂಡ ಕೋರ್ಟ್ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ಖುದ್ದು 59 ನೇ ಸಿಸಿಹೆಚ್ ಕೋರ್ಟ್ ನ್ಯಾಯಾಧೀಶರು ಜೈಲಿಗೆ ಭೇಟಿ ನೀಡಿ ಮಹಿಳಾ ಬ್ಯಾರಕ್ ಗಳ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ರು. ಇಂದೇ ಜೈಲು ಅಧಿಕಾರಿಗಳ ವರದಿ ಬಗ್ಗೆ ಮಾಹಿತಿ ಪಡೆಯುದಾಗಿ ಕೋರ್ಟ್ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com