'ಬೆಂಗ್ಳೂರಿಗೆ ಬಂದ MLAಗಳು ಕೂಡ ಎರಡೆರಡು ಮದುವೆ ಮಾಡ್ಕೊಂಡಿದ್ದಾರೆ, ಅಂಥವರ ಡಜನ್ ಪಟ್ಟಿ ನನ್ನಲ್ಲಿದೆ..ಬೇಕಾದ್ರೆ ಹೇಳ್ತೀನಿ': ಡಿ ಕೆ ಶಿವಕುಮಾರ್

ಬೆಂಗಳೂರಿಗೆ ಬಂದವರು ನಂತರ ಬಿಟ್ಟು ಹೋಗುವುದಿಲ್ಲ, ಅಷ್ಟೇ ಏಕೆ ಬೆಂಗಳೂರಿಗೆ ಬಂದು ನೆಲೆಸಿದ ಬೇರೆ ಜಿಲ್ಲೆಗಳ ಹಲವು ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಸದನದಲ್ಲಿದ್ದವರ ಗಮನ ಸೆಳೆದರು.
D K Shivakumar
ಡಿ ಕೆ ಶಿವಕುಮಾರ್
Updated on: 

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ, ಬೆಂಗಳೂರು ನಗರದ ಬೆಳವಣಿಗೆ, ಜನಸಂಖ್ಯೆ ಬಗ್ಗೆ ಮಾತನಾಡುವ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಸಕರ ವೈಯಕ್ತಿಕ ಬದುಕಿನ ಕುರಿತು ನೀಡಿದ ನಿನ್ನೆ ಸ್ಫೋಟಕ ಹೇಳಿಕೆ ನೀಡಿದರು.

ಬೆಂಗಳೂರಿಗೆ ಬಂದವರು, ಇಲ್ಲಿ ನೆಲೆ ನಿಂತವರು ಇಲ್ಲಿನ ಜನಸಂಖ್ಯೆ, ಟ್ರಾಫಿಕ್ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ, ಆದರೆ ಬೆಂಗಳೂರು ಬಿಟ್ಟು ಹೋಗುವುದಿಲ್ಲ, ಅಷ್ಟೇ ಏಕೆ ಬೆಂಗಳೂರಿಗೆ ಬಂದು ನೆಲೆಸಿದ ಬೇರೆ ಜಿಲ್ಲೆಗಳ ಹಲವು ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಸದನದಲ್ಲಿದ್ದವರ ಗಮನ ಸೆಳೆದರು. ಬೆಂಗಳೂರು ನಗರ ಬೆಳೆಯುತ್ತಿರುವ ವೇಗ ಹಾಗೂ ಇಲ್ಲಿನ ಜಲ ಮತ್ತು ವಾತಾವರಣದ ಪ್ರಭಾವದ ಕುರಿತು ಮಾತನಾಡುತ್ತಾ ಶಿವಕುಮಾರ್ ಈ ವಿಚಾರವನ್ನು ವಿಧಾನಸಭೆಯಲ್ಲಿ ಹೇಳಿದರು.

D K Shivakumar
ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಅನ್ನದಾತನಿಗಿಂತ ಅದಾನಿ ಹೆಚ್ಚು ಮುಖ್ಯವಾಗಿದೆ: ವಿ ಸುನಿಲ್ ಕುಮಾರ್ ಟೀಕೆ

ಕಾವೇರಿ ನೀರು, ವಾತಾವರಣದ ಪ್ರಭಾವ

ನಿನ್ನೆ ವಿಧಾನಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, 'ಒಮ್ಮೆ ಬೆಂಗಳೂರಿಗೆ ಬಂದವರು ಯಾರೂ ವಾಪಸ್ ತಮ್ಮ ಊರುಗಳಿಗೆ ಹೋಗುವುದೇ ಇಲ್ಲ. ಲಾಯರ್ ಗಳಂತೂ ವಾಪಸ್ ಹೋಗಲ್ಲ, ಇಲ್ಲಿನ ಕಾವೇರಿ ನೀರು ಹಾಗೂ ಇಲ್ಲಿನ ಹವಾಮಾನವೇ ಹಾಗಿದೆ. ಬೆಂಗಳೂರಿನ ಜನಸಂಖ್ಯೆ ಹಿಂದೆ ಶೇ. 35 ರಷ್ಟಿತ್ತು, ಈಗ ಶೇ. 47 ಕ್ಕೆ ಏರಿಕೆಯಾಗಿದೆ.

ರಾಜಕೀಯಕ್ಕಾಗಿ ಬೆಂಗಳೂರಿಗೆ ಬಂದ ಶಾಸಕರು ಕೂಡ ಆಮೇಲೆ ಈ ನಗರವನ್ನು ಬಿಟ್ಟು ಎಲ್ಲೂ ಹೋಗುತ್ತಿಲ್ಲ' ಬೆಂಗಳೂರಿಗೆ ಬಂದ ಶಾಸಕರೆಲ್ಲರೂ ಎರಡೆರಡು ಮದುವೆಯಾಗಿದ್ದಾರೆ! ನನ್ನ ಬಳಿ ಅಂತಹ ಡಜನ್‌ಗಟ್ಟಲೆ ಶಾಸಕರ ಸಂಪೂರ್ಣ ಲಿಸ್ಟ್ ಇದೆ. ಅದನ್ನೆಲ್ಲ ಇಲ್ಲಿ ಹೇಳೋಕೆ ಹೋಗಲ್ಲ, ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಿಂದ ಬಂದವರ ಹಿಸ್ಟರಿಯನ್ನೂ ನಾನು ಹೇಳಬಲ್ಲೆ. ಆದರೆ ಈಗ ಆ ಇತಿಹಾಸವನ್ನೆಲ್ಲಾ ಬಿಚ್ಚಿಡುವುದು ಬೇಡ ಎಂದರು.

D K Shivakumar
KPSC ಹಗರಣ: ಹೈಕೋರ್ಟ್ ನೇಮಿಸಿದ SIT ಕಂಡರೆ ಸರ್ಕಾರಕ್ಕೆ ಇಷ್ಟೊಂದು ಭಯವೇಕೆ? ಯಾರನ್ನು ರಕ್ಷಿಸಲು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ..?

ಡಿ.ಕೆ. ಶಿವಕುಮಾರ್ ಅವರ ಈ 'ಎರಡು ಮದುವೆ' ಹೇಳಿಕೆ ಬರುತ್ತಿದ್ದಂತೆ ಶಾಸಕ ಬಿ.ಪಿ. ಹರೀಶ್ ತಕ್ಷಣವೇ ಮಧ್ಯಪ್ರವೇಶಿಸಿ ಕಾಲೆಳೆದರು. "ಸರ್ ಅದೇನೋ ಎರಡು-ಮೂರು ಮದುವೆ ಅಂತ ಹೇಳ್ತಿದ್ದೀರಲ್ಲ, ಯಾರದ್ದು ಸರ್ ಅದು? ಅವರ ಎರಡು-ಮೂರು ಮದುವೆಯ ಕಥೆ ನಿಮಗೆ ಹೇಗೆ ಗೊತ್ತು ಸರ್? ಅದನ್ನು ಹುಡುಕಿಕೊಂಡು ಹೊರಟಿದ್ದೀರಲ್ಲ, ಅದನ್ನು ನೋಡಿದರೆ ನೀವು ಎಂತಾ ಮಹಾನ್ ಕಲಾವಿದ ಇರಬೇಕು ಸರ್!" ಎಂದು ತಮಾಷೆಯಾಗಿ ಹೇಳಿದರು.

ಶಾಸಕ ಹರೀಶ್ ಅವರ ಈ ಹಾಸ್ಯಮಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, "ಅದೆಲ್ಲಾ ಈಗ ಬೇಡ ಬಿಡಿ, ವೈಯಕ್ತಿಕ ವಿಷಯಗಳನ್ನು ಸದನದಲ್ಲಿ ಚರ್ಚಿಸುವುದು ಬೇಡ. ಅದನ್ನೆಲ್ಲಾ ಆಮೇಲೆ ಪರ್ಸನಲ್ ಆಗಿ ಕುಳಿತು ಮಾತನಾಡೋಣ," ಎಂದು ನಗುತ್ತಾ ವಿಷಯಕ್ಕೆ ತೆರೆ ಎಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com