News headlines 13-12-2025 | ಸಿಎಂ OSD ಪುತ್ರನ ವಿರುದ್ಧ ವಂಚನೆ ಆರೋಪ, FIR; ಆಳಂದ ಮತಗಳ್ಳತನ: ಬಿಜೆಪಿ ಮಾಜಿ ಶಾಸಕನ ವಿರುದ್ಧ ಚಾರ್ಜ್ ಶೀಟ್; ರಾಜ್ಯದಲ್ಲಿ ಇನ್ನೂ 5 ದಿನ ಶೀತಗಾಳಿ
ಮೋದಿ-ಅಮಿತ್ ಶಾರನ್ನೇ ಧೈರ್ಯವಾಗಿ ಎದುರಿಸಿ ಜೈಲಿಗೆ ಹೋಗಿ ಬಂದಿದ್ದೇನೆ; ನನ್ನನ್ನು ಹೆದರಿಸಲು ಬರಬೇಡಿ: ಡಿ.ಕೆ ಶಿವಕುಮಾರ್ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಧೈರ್ಯವಾಗಿ ಎದುರಿಸಿದ್ದೇನೆ. ನನ್ನನ್ನು ಹೆದರಿಸಲು ಬರಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್, ಅಪಾರ್ಟ್ಮೆಂಟ್ ಮಾಲೀಕರ ಸಂಘದ ಪದಾಧಿಕಾರಿ ಕಿರಣ್ ಹೆಬ್ಬಾರ್ ಎಂಬಾತನಿಗೆ ಎಚ್ಚರಿಕೆಗೆ ನೀಡಿದ್ದಾರೆ.
ಬೆಂಗಳೂರು 2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ!ರಾಜಧಾನಿಯ ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಸ್ಥಳದ ಅನುಕೂಲ ಮತ್ತು ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಪರಿಣತ ಸಲಹಾ ಸಂಸ್ಥೆಯ ಆಯ್ಕೆಗಾಗಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ...
ಬೆಂಗಳೂರು: ವಿವಾಹಿತ ಪೊಲೀಸಪ್ಪನ ಜೊತೆ ಆಂಟಿ ಎಸ್ಕೇಪ್: 2ನೇ ಗಂಡನಿಗೂ ಕೈಕೊಟ್ಟ ಮಹಿಳೆ!ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ನೋಡಿ ಪರಿಚಯವಾಗಿದ್ದ ಗೃಹಿಣಿಯೊಬ್ಬಳು ಪೊಲೀಸ್ ಕಾನ್ಸ್ ಟೇಬಲ್ ಜೊತೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ HSR ಪೊಲೀಸ್ ಠಾಣೆಯಲ್ಲಿ ಹೊಯ್ಸಳ ವಾಹನ ಚಲಾಯಿಸುತ್ತಿದ್ದ ಪೊಲೀಸ್ ಪೇದೆ ರಾಘವೇಂದ್ರ ಜೊತೆ ಎರಡು ಮದುವೆಯಾಗಿದ್ದ ಮೋನಿಕಾ ಪರಾರಿಯಾಗಿದ್ದಾಳೆ.
17.5 ಕೋಟಿ ರೂ ವಂಚನೆ ಪ್ರಕರಣ: ಸಿದ್ದರಾಮಯ್ಯ ವಿಶೇಷ ಕರ್ತವ್ಯಾಧಿಕಾರಿ ಪುತ್ರನ ಹೆಸರು; NRI ದೂರು!ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಮತ್ತು OSD ವೆಂಕಟೇಶ್ ಅವರ ಪುತ್ರ ರಜತ್ ವೆಂಕಟೇಶ್ ಹಾಗೂ ಅವರ ಉದ್ಯಮಿಗಳಾದ ಸ್ನೇಹಾ ರಾಕೇಶ್ ಮತ್ತು ರಾಬಿನ್ ಫ್ರಾನ್ಸಿಸ್ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಡಿಸೆಂಬರ್ 16ರಂದು ಸುತ್ತೂರು ಜಯಂತೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ: ಮಳವಳ್ಳಿಯಲ್ಲಿ ವ್ಯಾಪಕ ಭದ್ರತೆಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಡಿ. 16ರಿಂದ 21ರವರೆಗೆ ಆದಿ ಜಗದ್ಗುರು ಶಿವರಾತ್ರೀಶ್ವರ ಶ್ರೀಗಳ 1066ನೇ ಜಯಂತಿ ಮಹೋತ್ಸವವನ್ನು ಆಯೋಜಿಸಲಾಗಿದೆ.
ಬೆಂಗಳೂರು: ರಿಕ್ಕಿ ಕೇಜ್ ಮನೆಯಲ್ಲಿ ಡೆಲಿವರಿ ಬಾಯ್ ಕಳ್ಳತನ; ವಿಡಿಯೋ ಹಂಚಿಕೊಂಡ 'ಗ್ರ್ಯಾಮಿ' ಪುರಸ್ಕೃತ!ಈ ವ್ಯಕ್ತಿ ಯಾರು ಎಂಬ ಬಗ್ಗೆ ಬೆಂಗಳೂರು ಸಿಟಿ ಪೊಲೀಸರಿಗೆ ಮಾಹಿತಿ ನೀಡುವ ಸಾಧ್ಯತೆಯಿದೆಯೇ? ಅಲ್ಲದೆ, ಜನರೇ, ಜಾಗರೂಕರಾಗಿರಿ. ಇದು ನಿಮಗೂ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.
ಮುಂಡಗೋಡುಗೆ ದಲೈಲಾಮಾ ಆಗಮನ: 45 ದಿನಗಳ ವಾಸ್ತವ್ಯ; ಭೇಟಿ ಮಾಡಲು ವಿದೇಶಿ ಪ್ರಜೆಗಳಿಗೆ ವಿಶೇಷ ಪರವಾನಗಿ ಕಡ್ಡಾಯರಾಜ್ಯ ಸರ್ಕಾರದ ಪರವಾಗಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ದಲೈಲಾಮಾ ಅವರನ್ನು ಬರಮಾಡಿಕೊಂಡರು. ದಲೈ ಲಾಮಾ ಅವರು ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರಿನಲ್ಲಿ ಮುಂಡಗೋಡ ಶಿಬಿರಕ್ಕೆ ತೆರಳಿದರು.
'ಕಡತಗಳು ಟೇಬಲ್ನಿಂದ ಟೇಬಲ್ಗೆ ವರ್ಗವಾಗುತ್ತಿರುವಾಗಲೇ ಸುವರ್ಣ ಸಮಯ ಕಳೆದು ಹೋಗುತ್ತಿದೆ': HDKಗೆ ರವಿಕುಮಾರ್ ಟಾಂಗ್ಕೇಂದ್ರ ಸರ್ಕಾರವು ಮೂಲತಃ ಮಂಡ್ಯಕ್ಕೆ ಲೆವೆಲ್-2 ಟ್ರಾಮಾ ಸೆಂಟರ್ ಮಂಜೂರು ಮಾಡಿತ್ತು. ಆದರೆ ಭೂಮಿ ಲಭ್ಯವಿಲ್ಲದ ಕಾರಣ, ಅವರು ಅದನ್ನು ಸುಮಾರು 35-40 ಕಿ.ಮೀ ದೂರದಲ್ಲಿರುವ ಮೈಸೂರಿಗೆ ಸ್ಥಳಾಂತರಿಸಲಾಗಿತ್ತು.
ಶಿವಮೊಗ್ಗ: ಪ್ರೀತಿಸಿದ ಜೋಡಿ ಮನೆಬಿಟ್ಟು ಹೋಗಲು ಸಹಕರಿಸಿದ್ದಕ್ಕೆ ಡಬಲ್ ಮರ್ಡರ್; ಐವರು ಆರೋಪಿಗಳು ಅಂದರ್ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೈ ಭೀಮ್ ನಗರದ ಪ್ರೇಮಿಗಳಿಬ್ಬರು ಮೊನ್ನೆ ದಿನ ಮನೆಯಿಂದ ನಾಪತ್ತೆಯಾಗಿದ್ದರು.
ಕನಾಟಕದ ಒಳನಾಡು ಜಲಸಾರಿಗೆಗೆ ಕೇಂದ್ರದಿಂದ ಪ್ರಮುಖ ಉತ್ತೇಜನದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿನ ಪ್ರಮುಖ ನದಿಗಳ ಉದ್ದಕ್ಕೂ ಜೆಟ್ಟಿಗಳನ್ನು ನಿರ್ಮಿಸಲು ಅಥವಾ ನವೀಕರಿಸಲು ಕ್ರಿಯಾ ಯೋಜನೆಯನ್ನು ರೂಪಿಸಿದೆ ಎಂದು ಹೇಳಿದರು.
ನಾಳೆ ದೆಹಲಿಯಲ್ಲಿ 'ವೋಟ್ ಚೋರಿ' ಪ್ರತಿಭಟನೆಯಲ್ಲಿ ಭಾಗಿ, ಹೈಕಮಾಂಡ್ ಭೇಟಿ ಮಾಡಿ ರಾಜಕೀಯ ಚರ್ಚೆ ಇಲ್ಲ: ಡಿ.ಕೆ ಶಿವಕುಮಾರ್ಕರ್ನಾಟಕದಿಂದ 100ಕ್ಕೂ ಹೆಚ್ಚು ಶಾಸಕರು, ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರು ಹಾಜರಾಗುವಂತೆ ನಾವು ಕೇಳಿಕೊಂಡಿದ್ದೇವೆ, ಇದು ರಾಷ್ಟ್ರವ್ಯಾಪಿ ಪ್ರತಿಭಟನೆಯಾಗಿರುತ್ತದೆ ಎಂದರು.
ಬೆಂಗಳೂರು: ಕನಕಪುರ ರಸ್ತೆಯಲ್ಲಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು!ನಾಗೇಂದ್ರ ಮತ್ತು ಮನೋಜ್ ಕನಕಪುರದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದರೆ, ಲೋಕೇಶ್ ಮತ್ತು ಗಣೇಶ್ ಕನಕಪುರ ಕಡೆಗೆ ಹೋಗುತ್ತಿದ್ದರು. ಗಣೇಶ್, ನಾಗೇಂದ್ರ ಮತ್ತು ಮನೋಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗ್ರಾಮ ಪಂಚಾಯಿತಿ ಗ್ರಂಥಾಲಯ ಸಿಬ್ಬಂದಿಗೆ DBT ಮೂಲಕ ವೇತನ ಪಾವತಿ: ಸಂತೋಷ್ ಲಾಡ್ರಾಜ್ಯದ ಕನಿಷ್ಠ ವೇತನ ಅಧಿಸೂಚನೆಯ ಪ್ರಕಾರ ಗ್ರಾಮ ಪಂಚಾಯಿತಿ ಗ್ರಂಥಾಲಯ ಸಿಬ್ಬಂದಿಗೆ ವೇತನ ನೀಡದಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಹಲವಾರು ದೂರುಗಳು ಬಂದಿವೆ.
ಜನೌಷಧಿ ಕೇಂದ್ರಗಳಿಗೆ ಶಕ್ತಿ ತುಂಬಿದ ಕರ್ನಾಟಕ, ಕೇರಳ, ತಮಿಳುನಾಡು!ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಜನೌಷಧಿ ಕೇಂದ್ರ(JAK) ಸಾಂದ್ರತೆ ಮತ್ತು ವ್ಯವಹಾರದ ಪ್ರಮಾಣದಲ್ಲಿ ಮುಂಚೂಣಿಯಲ್ಲಿವೆ. ಆದರೆ ಮಧ್ಯಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳು ಜನಸಂಖ್ಯಾ ಅಥವಾ ಆರ್ಥಿಕ ಬಲದ ಹೊರತಾಗಿಯೂ ಹಿಂದುಳಿದಿವೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video