ಈ ಕೆಳಗಿನವರು!

Updated on: 

ತಿಮ್ಮ: ಬೆಳ್ಳಗಿರೋದೆಲ್ಲಾ ಹಾಲಲ್ಲ. ಬಿಳಿ ಕೂದಲಿರುವವರೆಲ್ಲಾ ಮುದುಕರಲ್ಲವೋ ತಮ್ಮಾ.
ತಮ್ಮ: ಹಾಗೆಂಗೆ ಹೇಳ್ತೀಯೋ ತಿಮ್ಮಾ?
ತಿಮ್ಮ: ಅಸರಾಂ ಭಾಪು ಮತ್ತು ತರುಣ್ ತೇಜ್‌ಪಾಲ್‌ರನ್ನು ನೋಡಿದರೇ ಗೊತ್ತಾಗಲ್ವೇನೋ ತಮ್ಮಾ?
ತಮ್ಮ: ಹೌದು ತಿಮ್ಮಾ ಹೌದು. ಅದು ಅವರ ಹಳೇ ಚಾಳಿ ಇರಬೇಕಲ್ವಾ? ಮಾತಿನ್ಯಾಗ ಒಂದು ಹೊರಗಿನ್ನೊಂದು. ಹೀಗೆ ಬ್ಯಾರೆ ಬ್ಯಾರೇನು ಇರ್ತಾರಲ್ಲೋ ಇವರು.
ತಿಮ್ಮ: ಹೌದಲೇ ಮ್ಯಾಲೆ ನೋಡಕ್ಕೆ ಇವರು ಇಬ್ಬರೂ ಸಾಚಾಗಳು. ಇವರ ಕೆಳಗಿನ ಹಕೀಕತ್ತೇ ಬ್ಯಾರೆ ಇರತೈತಿ...
ತಮ್ಮ: ಅದು ಹ್ಯಾಂಗ ಹೇಳ್ತೀಯಾ?
ತಿಮ್ಮ: ಮ್ಯಾಲ ನೋಡಾಕ ಇವರು ಎದುರು ಇದ್ದವರ ಡ್ರೆಸ್ ವರ್ಣನಾ ಮಾಡಿದರೂ ಕೆಳಗಿನ ಇವರ ವಿಚಾರತನ ಬ್ಯಾರೆ ಇರತೈತಿ.
ತಮ್ಮ: ಹ್ಯಾಂಗಂತಿ?
ತಿಮ್ಮ: ಮ್ಯಾಲೆ ಇವರು ತಮ್ಮ 'ಶಿಕಾರ'ಕ್ಕೂ ಎಷ್ಟ್ ಸಹಾಯ ಮಾಡಿದರೂ ಕೆಳಗೆ 'ಶಿಕಾರಿ' ತಮ್ಮಾ. ಮಂಚಕ್ಕೆ ಯಾವಾಗ ಬಂದು ಬೀಳತಾರ ಅಂತ ಲೆಕ್ಕಾ ಹಾಕತಿರತಾರ.
ತಮ್ಮ: ಅಂದರಾ ಇವರದು ಕೆಳಗೆ ಬ್ಯಾರೆ, ಮ್ಯಾಲೆ ಬೇರೆ ಅಂತ ಆತಲಾ?
ತಿಮ್ಮ: ಮತ್ತಿದು ಇಂದು ನೆನ್ನೆ ವಿಷಯ ಅಲ್ಲಲೇ? ಬಾಳ ವರ್ಷದಾಗ ನಡಕೊಂಡು ಬಂದೈತಿ. ಎಂಥವರನ್ನೂ ಬಿಟ್ಟಿಲ್ಲಾ!
ತಮ್ಮ: ಹೌದಾ?
ತಿಮ್ಮ: ಹೌದಲೇ ಬಿಲ್ ಕ್ಲಿಂಟನ್ ಸಾಯೇಬರು ಎಂಥ ಮ್ಯಾಲಿನ ಹುದ್ದೆನಾಗ ಇದ್ದರೂ ಈ ಕೆಳಗಿನ ವಿಷಯದಾಗ ಎಡವಿದರು. ಟೈಗರ್ ವುಡ್‌ನ 'ಹೋಲ್‌' ಸ್ಟೋರಿ 'ಅನ್ ಹೋಲಿ'ಯಾಗಿದ್ದು ಈ ಕೆಳಗಿನ ಪ್ರಕರಣದಿಂದ.
ತಮ್ಮ: ಭಾಳ ಡೇಂಜರ್ ಬಿಡು ಈ ಕೆಳಗಿನ ವಿಚಾರ!
ತಿಮ್ಮ: ಹೌದಲೇ, ಅದಕ್ಕೆ ಈ ವಿಷಯದಾಗ ಕೇರ್‌ಫುಲ್ ಆಗಿರಬೇಕು. ಕೆಳಗಿಂದು ಎಲ್ಲಾ ಬರೋಬ್ಬರಿ ಇಟಕೋಬೇಕು. ಮತ್ತಾ ಸಣ್ಣವರಿದ್ದಾಗ ನಮ್ಮ ಶಾಲ್ಯಾಗ ಹೇಳಿಕೊಟ್ಟಾರ ನಮಗ.
ತಮ್ಮ: ಸಣ್ಣವರಿದ್ದಾಗ ಕೆಳಗಿನ ವಿಚಾರ ಹೇಳ್ಯಾರ ನಿಮಗಾ?
ತಿಮ್ಮ: ಹೌದು ನೀ ಸಾಲೆ ಕಾಲ್ಯಾಜ್ಯಾಗ ವಾರ್ಷಿಕ ಪರೀಕ್ಷಾ ಬರೆದೀಯೋ ಇಲ್ಲೋ?
ತಮ್ಮ: ಬರೆದೀನಿ. ನಾ ಒಬ್ಬನೆ ಯಾಕೆ ಎಲ್ಲಾರು ಬರೆದೀವಿ.
ತಿಮ್ಮ: ಹ್ಯಾಂಗಿರುತ್ತಿತ್ತು ಪ್ರಶ್ನೆ?
ತಮ್ಮ: ಹ್ಯಾಂಗಿರತೈತಿ?
ತಿಮ್ಮ: ಈ ಕೆಳಗಿನ ಸಮಸ್ಯೆಗಳನ್ನು ಬಿಡಿಸಿರಿ, ಈ ಕೆಳಗಿನ ಬಿಟ್ಟ ಸ್ಥಳ ತುಂಬಿರಿ, ಈ ಕೆಳಗಿನವುಗಳನ್ನು ಹೊಂದಿಸಿರಿ!
ತಮ್ಮ: ಅರೆ, ಹೌದಲ್ಲೋ!
ತಿಮ್ಮ: ಅದಕ್ಕಲೇ ತಮ್ಮಾ, ಕೆಳಗಿನ ವಿಚಾರ ಬರೋಬ್ಬರಿ ಇರಬೇಕಾಗೇತಿ. ಕೆಳಗಿನ ಸಮಸ್ಯೆಗಳ್ನ ಪಬ್ಲಿಕ್‌ನ್ಯಾಗೆ ಬಿಡಿಸಬಾರದು. ಪಬ್ಲಿಕ್‌ನ್ಯಾಗ ತುಂಬಬಾರದು, ಪಬ್ಲಿಕ್‌ನ್ಯಾಗ ಹೊಂದಿಸಬಾರದು.



- ಯಶವಂತ ಸರದೇಶಪಾಂಡೆ
allthebest01@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com