

ತುಂಬಾ ಚಳಿ. ಮಾರುತದ ಹೊಡೆತಗಳಿಗೆಲ್ಲ ಬ್ಲೇಡಿನ ಚೂಪು. ಕೊಯ್ದದ್ದೇ ಗೊತ್ತಾಗದು. ಮೈಕೈಗೆ ಗಾಳಿ ಸೋಕದಂತೆ ರಕ್ಷಿಸುವ ಕೆಲಸ ಆಗಲೇಬೇಕು. ಮನೆಯಲ್ಲಿರುವಾಗ ದೊಡ್ಡ ರಗ್ಗು, ಕಂಬಳಿ ಹೊದ್ದು ಬೆಚ್ಚಗಿರಬಹುದು. ಹಾಗಂತ ಹೊರಗಡೆ ಓಡಾಡುವಾಗ, ಕಚೇರಿಗಳಿಗೆ ಹೋಗುವಾಗ ಕಂಬಳಿ ಹೊದ್ದು ಹೋಗಲು ಸಾಧ್ಯವಿಲ್ಲ.
ಹಾಗಾಗಿ, ಚಳಿಗಾಲಕ್ಕೂ ಫ್ಯಾಶನ್ ಬೇಕು. ಸ್ವೆಟರ್, ಜೆರ್ಕಿನ್ ಇತ್ಯಾದಿ ಧಾರಣಾಸ್ತ್ರಗಳು ಇದ್ದರೂ ಕಂಫರ್ಟೆಬಲ್ ಎನಿಸುವುದಿಲ್ಲ ಎಂಬ ಕೂಗಿದೆ. ಅವುಗನ್ನು ಹಾಕಿ ನಡೆಯುತ್ತಿದ್ದರೆ 'ಹಿಮಾಲಯ ಪರ್ವತ ಹತ್ತುವುದು ಬಿಟ್ಟು ಇಲ್ಲೇಕೆ ಬಂದಿರಿ?' ಎಂದು ಯಾರಾದರೂ ಕೇಳಿದರೂ ಕೇಳಬಹುದು.
ಚಳಿಗೆ ಚಾಟಿ ಬೀಸಬೆಕು. ಆದರೆ ಹಗ್ಗ ಒರಟಾಗಿರಬಾರದು. ಟ್ರೆಂಡ್‌ಗೆ ಹೊಂದುವಂಥ ಬೆಚ್ಚಗಿನ ವಸ್ತ್ರಗಳಿದ್ದರೇನೇ ಸೊಬಗು. ಅಂದದ ಬಣ್ಣಗಳಿದ್ದರಂತೂ ದೇಹಕ್ಕೆ ಮೆರಗು. ಕಂದು, ಕಪ್ಪು ಬಣ್ಣಗಳಲ್ಲಿ ಡಿಸೈನ್‌ಗಳಿದ್ದರಂತೂ ಕಣ್ಣಿಗೊಂದು ಹಬ್ಬ. ಅಂಥ ಜಾಕೆಟ್ ಧರಿಸಿ ನಡೆಯುತ್ತಿದ್ದರೆ ಅದೇ ಹೆಮ್ಮೆಯ ದಿರಿಸು! ಹೊಂದಿಕೊಳ್ಳುವ, ಟ್ರೆಂಡಿ ಲುಕ್ ನೀಡುವ, ಸುಲಭವೆನಿಸುವ ಜಾಕೆಟ್‌ಗಳಿಗೆ ಮುಗಿಬೀಳುವುದು ಹೆಚ್ಚು. ಧರಿಸಲು ಸುಲಭವೆನಿಸುವ ಜೀನ್ಸ್ ಜೊತೆಯ ಲೈಟ್‌ವೈಟ್ ಹ್ಯಾರಿಂಗ್‌ಟನ್, ಲೈಟ್‌ವೈಟ್ ಮೆರಿನ್ನೋ ಸ್ವೆಟರ್, ಜಾಂಟಿ ಶಾಲ್ ಕಾಲರ್, ವಿ ನೆಕ್ ಮತ್ತು ಪ್ಲೇನ್ ಕಾಟನ್ ಪ್ಯಾಂಟ್‌ಗಳು ಉತ್ತಮ್ ಲುಕ್ ನೀಡುತ್ತವೆ. 'ದಿ ಕಲೆಕ್ಟಿವ್' ಚಳಿಗಾಲಕ್ಕೆಂದೇ ವಿಶೇಷವಾಗಿ ತಯಾರಿಸಿರುವ ವಾರ್ಮ್‌ಅಪ್ ಸಂಗ್ರಹ ಅಭಿರುಚಿಗೆ ಅನುಗುಣವಾಗಿ ಬೆಚ್ಚಗಿರಿಲು ಸೂಕ್ತವಾಗಿವೆ. ಬ್ರಿಗೇಡ್ ಗೇಟ್ ವೇನಲ್ಲಿರುವ 'ಓರಿಯನ್' ಮಳಿಗೆಗಳಲ್ಲೂ ಫ್ಯಾಷನೇಬಲ್ ಬೆಚ್ಚಗಿನ ದಿರಿಸು ಲಭ್ಯ.
ಟೆಡ್ ಬೇಕರ್, ಲಿಯು ಡೋ ಟ್ರೆಂಚ್, ಹ್ಯಾಕೆಟ್, ಅಲೆಕ್ಸಾಂಡರ್ ಮೆಕ್‌ಕ್ವೀನ್ ಹೆಸರಿನ ಕಾವು ನೀಡುವ ವಸ್ತ್ರಗಳು ಯುವ ಜನತೆಯಲ್ಲಿ ಸಾಕಷ್ಟು ಮೋಡಿ ಮಾಡಿವೆ. ಹಿತವೆನಿಸುವ ಧಾರಣೆಯೊಂದಿಗೆ ಫ್ಯಾಷನ್ ಇರುವ ಸ್ವೆಟರ್‌ಗಳನ್ನು ಧರಿಸಿ ಆಫೀಸಿಗೆ ಲಗ್ಗೆ ಇಟ್ಟರೆ ಪೆಂಗ್ವಿನ್‌ಗಳಂತೆ ಮುದ್ದಾಗಿ ಕಾಣುವುದರಲ್ಲಿ ಎರಡು ಮಾತಿಲ್ಲ.
- ಮಂಜುನಾಥ್ ಎಲ್.ಕೆ.
mhk963@gmail.com