ಪುಟ್ಟ ಆವಾಜ್

Updated on: 

ಆ ಮನೆಗೆ ಕಳ್ಳ ನುಗ್ಗಿದ. ಬೇಕಾದ್ದನ್ನೆಲ್ಲ ಮೂಟೆಯಲ್ಲಿ ತುರುಕಿ, ಹೊರಡುವ ವೇಳೆಗೆ ಆತನಿಗೊಂದು ಪುಟ್ಟ ದನಿ ಕೇಳಿತು, 'ಇದರ ಜೊತೆಗೆ ಸ್ಕೂಲ್ ಬ್ಯಾಗನ್ನೂ ತಗೊಂಡ್ ಹೋಗ್ಲಿಲ್ಲ ಅಂದ್ರೆ ಅಪ್ಪ- ಅಮ್ಮನ್ನ ಎಬ್ಬಿಸ್ತೀನಿ'!

ಪ್ರಾಣ ಉಳಿಸ್ತಿದ್ದೆ!
ಡಾಕ್ಟರ್: ಒಂದು ಗಂಟೆ ಮುಂಚೆ ಕರ್ಕೊಂಡ್ ಬಂದಿದ್ರೆ ಪ್ರಾಣ ಉಳಿಸ್ತಿದ್ದೆ.
ಕೋಲ್ಯ: ಸರ್, ಆಕ್ಸಿಡೆಂಟ್ ಆಗಿದ್ದೇ 15 ನಿಮಿಷದ ಹಿಂದೆ.

ಮಗ ಮುಂದೇನಾಗ್ತಾನೆ?
ಕೋಲ್ಯ: ನನ್ನ ಮಗ ಮುಂದೆ ಏನಾಗ್ತಾನೆ ಅಂತ ಹೇಳಿ ಗುರೂಜಿ.
ಗುರೂಜಿ: ಈಗ ಸೀದಾ ಮನೆಗೆ ಹೋಗಿ, ಆತನ ಟೇಬಲ್ ಮೇಲೆ 1 ಬಾಟಲ್ ಬಿಯರು, 1 ಸಿಗರೇಟು, ಮತ್ತೊಂದು ಬುಕ್ ಇಡಿ. ಅವನು ಯಾವ್ದನ್ನು ಆಯ್ಕೆ ಮಾಡ್ತಾನೋ ಆಮೇಲೆ ನಾನು ಹೇಳ್ತೀನಿ.
ಕೋಲ್ಯ ಮನೆಗೆ ಹೋಗಿ, ಗುರೂಜಿ ಹೇಳಿದ ಹಾಗೆ ಮಾಡಿದ.
ಮರಿಕೋಲ್ಯ ಬಂದವನೇ ಮೊದಲು ಬಿಯರ್ ಬಾಟಲ್ ಒಡೆದ. ಸಿಗರೇಟು ಹಚ್ಚಿಕೊಂಡ, ನಂತರ ಪುಸ್ತಕ ಹಿಡಿದು ಎಲ್ಲೋ ಹೊರಟ.
ಕೋಲ್ಯ ಗುರೂಜಿ ಬಳಿ ಬಂದ.
ಕೋಲ್ಯ: ಎಲ್ಲವನ್ನೂ ಮಗ ಎಲ್ಲವನ್ನೂ ಆಯ್ಕೆ ಮಾಡ್ಕೊಂಡ.
ಗುರೂಜಿ: ಅಭಿನಂದನೆಗಳು, ನಿಮ್ಮ ಮಗ ಸಾಫ್ಟ್‌ವೇರ್ ಎಂಜಿನಿಯರ್ ಆಗ್ತಾನೆ.

ಸೆಕ್ಸಿ ಬೆರಳು
ಸೆಕ್ಸಿ ಹುಡುಗಿ ಬಂದು ಹೋಟೆಲ್ ಮ್ಯಾನೇಜರನ ಎದುರು ವಯ್ಯಾರದಲ್ಲಿ ಬೆರಳಾಡಿಸಿದಳು. ಆ ಮ್ಯಾನೇಜರ್ ತಡಮಾಡದೆ ಆಕೆಯ ಬೆರಳುಗಳಿಗೆ ಮುತ್ತಿಕ್ಕಿದ. ಆಕೆ ಅಂದಳು, 'ಓಕೆ ನೆಕ್ಕಿದ್ದು ಸಾಕು. ಟಾಯ್ಲೆಟ್‌ನಲ್ಲಿ ಪೇಪರ್ ಇಡೋದಿಕ್ಕೆ ನಿನ್ನ ಬಾಸ್‌ಗೆ ಹೇಳು'!

---
ಕೋಟ್ ಆಂಡ್ ಬೋಲ್ಡ್

ಶಾರೂಖ್‌ಖಾನ್ ತುಟಿಗಳಲ್ಲಿ ಅದೇನೋ ಮಾಂತ್ರಿಕತೆ ಇದೆ. ಅವು ಉಸಿರು ಊದಿದರೆ ನನ್ನ ಪ್ರಜ್ಞೆ ತಪ್ಪುತ್ತದೆ.
- ಪ್ರಿಯಾಂಕಾ ಚೋಪ್ರಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com