ಖುಷಿ

ಸರಳ ವಾಸ್ತು

ಸರಳ ವಾಸ್ತು
Published On :

ಸರಳವಾಸ್ತು ಆಧಾರಿತ ನಕ್ಷೆ ತೆಗೆದುಕೊಂಡರೆ 10 ತಿಂಗಳಲ್ಲಿ ಮನೆ ನಿರ್ಮಾಣ ಖಚಿತ. ವಿಶೇಷತೆ- ಮನೆ ನಿರ್ಮಾಣ ಕಾರ್ಯಪ್ರಾರಂಭದ ದಿನದಿಂದ ಎಷ್ಟೇ ಸಮಸ್ಯೆಗಳಿದ್ದರೂ 8 ರಿಂದ 10 ತಿಂಗಳೊಳಗೆ ಮುಕ್ತಾಯ. ಇದು ಗುರೂಜಿಯವರ ಪ್ರತಿಜ್ಞೆ. ಈ ವಾರ ಮನೆ ನಿರ್ಮಾಣದ ನಕ್ಷೆ ಬಗ್ಗೆ ಗುರೂಜಿ ವಿವರಿಸಿದ್ದಾರೆ...

ನೀವು ಸರಕಾರಿ ನೌಕರರೆ? ಖಾಸಗಿ ನೌಕರರೆ? ವ್ಯವಹಾರಸ್ಥರೆ? ದಿನಗೂಲಿಗಳೇ? ಬಹುದಿನಗಳಿಂದ ಮನೆ ಕಟ್ಟಲು ಕನಸು ಕಾಣುತ್ತಿದ್ದೀರಿ. ಅದಕ್ಕಾಗಿ ಜೀವಮಾನದ ಬೆವರು ಸುರಿಸಿ ದುಡಿದ ದುಡ್ಡು ಸಂಗ್ರಹಸಿ, ಕೂಡಿಟ್ಟು ಸೈಟ್ ಅಥವಾ ಮನೆ ಕೊಳ್ಳುತ್ತೀರಿ. ಕೆಲವರು ವಾಸ್ತು ಕುರಿತು ತಲೆ ಕೆಡಿಸಿಕೊಂಡರೆ, ಕೆಲವರು ಅದರ ಗೋಜಿಗೇ ಹೋಗುವುದಿಲ್ಲ. ಕೆಲವು ವಿಶಿಷ್ಟ ವಿಚಾರಗಳನ್ನು ನಿಮಗೆ ತಿಳಿಸುತ್ತೇನೆ.

1. ಬಾಡಿಗೆ ಮನೆಯಲ್ಲಿಯೇ ಇದ್ದು ಸಾಕಷ್ಟು ಹಣ ಗಳಿಸಿರುತ್ತಾರೆ. ಆದರೆ ಸ್ವಂತ ಮನೆಗೆ ಹೋದಾಗ ಸಂಪತ್ತೆಲ್ಲ ಕರಗಿ ಹೋಗುತ್ತದೆ. ಏಕೆ?

2. ತಂದೆಯ ಕಾಲದಲ್ಲಿ ಸುಖವಾಗಿ ವಾಸವಾಗಿದ್ದ ಕುಟುಂಬ ಮಗನ ಆಡಳಿತ ಬಂದಾಗ ಮನೆಗೆ ಹೋದ ಕೂಡಲೇ ಗಳಿಕೆ ಕಡಿಮೆಯಾಗುತ್ತದೆ. ಸುಖವೇ ಇಲ್ಲದಂತಾಗುತ್ತದೆ. ಏಕೆ?
ಇದಕ್ಕೆ ಸರಳವಾಸ್ತುವಿನಲ್ಲಿ ಉತ್ತರವಿದೆ.

ಉತ್ತರ ಅಥವಾ ಪೂರ್ವ ದಿಕ್ಕನ್ನು ಹೊಂದಿರುವ ಸೈಟ್, ಮನೆ ಅಧಿಕ ಬೆಲೆಗೆ; ದಕ್ಷಿಣಕ್ಕೆ ಇದ್ದರೆ ಕಡಿಮೆ ಬೆಲೆಗೆ ಮಾರಾಟವಾಗುತ್ತವೆ. ಅಷ್ಟೇ ಅಲ್ಲ, ಈಶಾನ್ಯ ದಿಕ್ಕಿಗೆ ಮುಖ್ಯದ್ವಾರ ಇದ್ದ ಮನೆಯನ್ನು ಮಾಲೀಕರು ಎಷ್ಟೇ ದುಡ್ಡು ಹೇಳಿದರೂ ಅದನ್ನು ತೆಗೆದುಕೊಳ್ಳುತ್ತಾರೆ. ಕಾರಣ ಈಶಾನ್ಯ ಕುಬೇರನ ಸ್ಥಾನ. ಆ ಮನೆಯಲ್ಲಿದ್ದರೂ ಸಾಕಷ್ಟು ಹಣ ಬರುತ್ತದೆ ಎಂದು ಎಷ್ಟೋ ಜನರು ವಾಸ್ತು ತಜ್ಞರ ಮಾತು ನಂಬಿ ಮೋಸ ಹೋಗಿದ್ದಾರೆ. ಈಶಾನ್ಯ ದಿಕ್ಕಿನ ಮನೆಯನ್ನು ತೆಗೆದುಕೊಂಡು ಅಭಿವೃದ್ಧಿಯೇ ಆಗದೇ ಮನೆ ಮಾರಿದ ಘಟನೆಗಳಿವೆ.
ಎರೆ ಮಣ್ಣು ಹೊಂದಿರುವ ಸೈಟು ಮತ್ತು ಪೂರ್ವಕ್ಕೆ ಎತ್ತರ ಇದ್ದರೆ ಅದು ಒಳ್ಳೆಯದಲ್ಲ ಎಂಬ ಮೂಢ ವಿಚಾರಗಳನ್ನು ಸಾಮಾನ್ಯ ವಾಸ್ತು ಜನರಲ್ಲಿ ಹುಟ್ಟಿಸಿದೆ. ಸರಳವಾಸ್ತು ಈ ವಿಚಾರಗಳನ್ನು ದೂರ ಮಾಡುವ ಉದ್ದೇಶದಿಂದ ಜನರಲ್ಲಿ ತಿಳಿವಳಿಕೆ ಮೂಡಿಸುತ್ತಿದೆ. ಸರಳವಾಸ್ತುವಿನ ಪ್ರಕಾರ ಸೈಟಾಗಲಿ, ಮನೆಯಾಗಲಿ, ಕೇವಲ ಋಣಾತ್ಮಕ ಶಕ್ತಿಗಳ ಉತ್ಪಾದನಾ ಕೇಂದ್ರಗಳಿಂದ ದೂರ ಇರಬೇಕು ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಬೇಕು. ಇನ್ನು ಋಣಾತ್ಮಕ ಕೇಂದ್ರಗಳಾದ ಸ್ಮಶಾನ, ದೇವಸ್ಥಾನ, ಮಗಳ ಕಾರ್ಯಾಲಯ, ಹೈಟೆನ್ಶನ್ ವಿದ್ಯುತ್ ಲೈನ್‌ಗಳಿಂದ ದೂರವಿರಬೇಕು ಎನ್ನುವುದು ಸರಳವಾಸ್ತುವಿನಲ್ಲಿದೆ. ಉದಾಹರಣೆಗೆ ಮನೆ ನಿರ್ಮಿಸುವಾಗ ಮಾಡುವ ಪೂಜೆ ಋಣಾತ್ಮಕ ಶಕ್ತಿಯನ್ನು ದೂರ ಮಾಡುವ ಉದ್ದೇಶ ಹೊಂದಿರುತ್ತದೆ. ಸರಳವಾಸ್ತುವಿನಂತೆ, ಮನೆಯ ಮುಖ್ಯದ್ವಾರವು ಆ ಮನೆಯಲ್ಲಿ ವಾಸ ಮಾಡುವ ಕುಟುಂಬದ ಸದಸ್ಯರ ಉನ್ನತಿ, ಅವನತಿಯ ಮೇಲೆ ಪರಿಣಾಮ ಬೀರುವುದು. ಮನೆಯ ಕಂಪೌಂಡ್ ಯಾವ ದಿಕ್ಕಿಗೆ ಬೇಕಾದರೂ ಇರಬಹುದು.
ಪ್ರಚಲಿತ ವಾಸ್ತು ತಜ್ಞರು ಉತ್ತರ-ಪೂರ್ವಕ್ಕೆ ಮುಖ್ಯದ್ವಾರ, ಆಗ್ನೇಯಕ್ಕೆ ಅಡುಗೆ ಮನೆ, ನೈಋತ್ಯಕ್ಕೆ ಬೆಡ್‌ರೂಮ್ ಇರಬೇಕು. ಈಶಾನ್ಯಕ್ಕೆ ಮೆಟ್ಟಿಲು ಇರಬಾರದು ಎಂದು ಹೇಳಿ ಶೇ. 95ರಷ್ಟು ಜನರಲ್ಲಿ ಭೀತಿ ಹುಟ್ಟಿಸಿದ್ದಾರೆ. ಇದು ಸಲ್ಲದು. ಸರಳವಾಸ್ತುವಿನ ಮೂಲಕ ಖುಷಿ, ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದೇವೆ. ಸರಳವಾಸ್ತು ಎಂದರೆ 'ವಾತಾವರಣದ ಜೊತೆ ಸಾಮರಸ್ಯದಿಂದ ಬಾಳಿ ಬದುಕುವ ಕಲೆ'.

ಮನೆ ನಿರ್ಮಿಸುವಾಗ ನೀವು ಸರಳವಾಸ್ತು ನೆರವನ್ನು ಹೇಗೆ ಪಡೆಯಬಹುದು?

ಹಂತ 1
ಸರಳವಾಸ್ತು ಕಚೇರಿಗೆ ದೂರವಾಣಿಯ ಮೂಲಕ ಸಂಪರ್ಕಿಸಿದರೆ ಮನೆಯ ನಕ್ಷೆಯ ಮಹತ್ವ, ಅದು ಮನುಷ್ಯನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸುತ್ತಾರೆ. ಜೊತೆಗೆ ನಿಮ್ಮ ವಿಳಾಸ ಪಡೆಯಲಾಗುವುದು. ನೀವು ಯಾವುದೇ ಹಳ್ಳಿ ಅಥವಾ ಪಟ್ಟಣದಲ್ಲಿ ಇದ್ದರೂ ಖುದ್ದಾಗಿ ಬಂದು ನಿಮ್ಮ ಸೈಟ್ ಪರೀಕ್ಷಿಸುತ್ತಾರೆ. ಕುಟುಂಬದ ಎಲ್ಲಾ ಸದಸ್ಯರ ಜನ್ಮದಿನಾಂಕ, ನಿಮ್ಮ ಹೊಸ ಮನೆಯ ಅವಶ್ಯಕತೆಗಳ ಮಾಹಿತಿ ಪಡೆಯುತ್ತಾರೆ.

ಹಂತ 2
ನೀವು ನೀಡಿದ ಮಾಹಿತಿಯ ಅನ್ವಯ ಕಚೇರಿಯಲ್ಲಿ ನುರಿತ ತಾಂತ್ರಿಕ ಸಿಬ್ಬಂದಿ ತಾತ್ಕಾಲಿಕ ನಕ್ಷೆ ತಯಾರಿಸಿ ಗುರೂಜಿಯವರ ಗಮನಕ್ಕೆ ತರುತ್ತಾರೆ. ನಂತರ ತಮ್ಮ ಕೈ ತಲುಪುವ ಮನೆಯ ನಕ್ಷೆಯು ನಿಮ್ಮ ಎರಡು ಮೂರು ತಲೆಮಾರಿನವರೆಗೆ ಯಾವುದೇ ಸಮಸ್ಯೆಗಳು ಸಂಭವಿಸದಂತೆ ಎಚ್ಚರ ವಹಿಸಿ ಸಿದ್ಧಪಡಿಸಿದ್ದಾಗಿರುತ್ತದೆ.

ಹಂತ 3
ನೀವು ಮನೆಯನ್ನು ಸರಳವಾಸ್ತು ಪ್ರಕಾರ ನಿರ್ಮಿಸಿದರೂ ಅದಕ್ಕೆ ಗುರೂಜಿಯವರಿಂದ ಚೈತನ್ಯಗೊಂಡ ಸರಳವಾಸ್ತು ಸಾಮಗ್ರಿಗಳು ಅಷ್ಟೇ ಪ್ರಮುಖವಾಗಿ ಅಳವಡಿಸಲಾಗುವುದು.

- ಡಾ. ಚಂದ್ರಶೇಖರ ಗುರೂಜಿ
guruji@saralvaastu.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.