ಹುಡುಗಿಯೊಬ್ಬಳು ಫೇಸ್‌ಬುಕ್ಕಲ್ಲಿ- 'ತುಂಬಾ ದಿನಗಳ ನಂತರ ಬಸ್ಸಲ್ಲಿ ಟ್ರಾವೆಲ್ ಮಾಡಿದೆ' ಅಂತ ಅಪ್‌ಡೇಟ್ ಹಾಕ್ತಾಳೆ ಅಂದ್ಕೊಳ್ಳಿ. ಅದಕ್ಕೆ ಹುಡುಗರ ಕಾಮೆಂಟ್ ಹೇಗಿರುತ್ತೆ ಗಮನಿಸಿ.
- 'ವಾವ್... ಸೂಪರ್ ಕಣ್ರೀ'.
- 'ಮುಂದಿನ ಸಲ ನಾನೂ ನಿಮ್‌ಜೊತೆ ಬರ್ತೀನಿ ಡಿಯರ್'.
- 'ನಂಗೂ ಒಂದ್ಸಲ ಬಸ್ಸಲ್ಲಿ ಹೋಗ್ಬೇಕು ಅಂತ ಆಸೆ ಆಗ್ತಿದೆ ಚಿನ್ನಾ'.
- 'ನನ್ನ ಬಿಟ್ ಹೋಗಿದ್ಯಾ? ವೆರಿ ಬ್ಯಾಡ್.. ಠೂಠೂ ನಿಂಜೊತೆ'.
- 'ಸೂಪರ್ ಲೈಕ್ಸ್ ಸ್ವೀಟ್‌ಹಾರ್ಟ್'.
- 'ಹುಡ್ಗೀರಂದ್ರೆ ನಿಮ್ ಥರ ಇರ್ಬೇಕು ಕಣ್ರೀ'.
ಅದೇ ಪೋಸ್ಟ್ ಹುಡುಗನೊಬ್ಬ ಹಾಕ್ತಾನೆ ಅಂದ್ಕೊಳ್ಳಿ. ಆಗ ಹುಡುಗ್ರು ಏನೆಲ್ಲಾ ಕಾಮೆಂಟ್ ಹಾಕ್ತಾರೆ ನೋಡಿ.
- 'ಅಯ್ಯೋ.. ಅದಕ್ಕೆ ನಾವೇನ್ ಮಾಡ್ಬೇಕು ಈಗ'
- 'ನಿನ್ ಯೋಗ್ಯತೆಗೆ ಇನ್ನೇನ್ ಏರೋಪ್ಲೇನಲ್ಲಿ ಬರೋಕಾಗತ್ತಾ?'
- 'ನಿಮ್ ಅಪ್ಪಂಗೆ ಒಂದ್ ಸೈಕಲ್ ಆದರೂ ಕೊಡ್ಸೋಕೆ ಹೇಳೋ ಮಗಾ'
- 'ನೀನು ಅದೇ ಬಸ್ಸಿಗೆ ಕಂಡಕ್ಟರ್ ಆಗೋ ಹಾಗಾಗಲಿ'.
- 'ಇದನ್ನೂ ಫೇಸ್‌ಬುಕ್ಕಲ್ಲಿ ಹಾಕ್ತೀಯಲ್ಲೋ, ನಿನ್ ಯೋಗ್ಯತೆಗಿಷ್ಟು..!'
- 'ಟಿಕೆಟ್ ತಗೊಂಡ್ಯೋ ಇಲ್ವೋ ಕಳ್ನನ್ಮಗನೇ'.