- ಸಾವಿರಾರು ಮೈಲುದೂರದ ಪಯಣ ಶುರುವಾಗುವುದೇ 'ಗ್ಯಾಸ್ ಆಫ್ ಮಾಡಿದೀಯಾ?' ಎಂಬ ಪ್ರಶ್ನೆಯೊಂದಿಗೆ!
- ಇಮೇಲ್ ಅಕೌಂಟಿಗೆ ಹೆಸರು ಮತ್ತು ಪಾಸ್‌ವರ್ಡ್ ಕೊಡೋ ಕಷ್ಟ ಅನುಭವಿಸಿದವನಿಗೆ, ಮಗೂಗೆ ಹೆಸರಿಡೋದು ದೊಡ್ಡ ಕಷ್ಟ ಅನಿಸೋದಿಲ್ಲ.
- ಏಕಾಂತವನ್ನು ಇಷ್ಟಪಡೋ ಹುಡುಗಿಗೆ, ಅಟ್ಯಾಚ್‌ಮೆಂಟ್ ಇರೋ ಮೇಲ್ ಕಳಿಸೋದು ವ್ರತಭಂಗ ಮಾಡಿದಂತಲ್ಲ.
- ಸ್ಕೂಲಿರೋದು ನಿದ್ದೆ ಮಾಡೋಕಲ್ಲ ಅಂತಾದ್ರೆ, ಮನೆ ಇರೋದ್ ಓದೋದಕ್ಕಲ್ಲ ಅಂತಾನೂ ಒಪ್ಕೋಬೇಕು.
- ಬೋನ್‌ಲೆಸ್ ಚಿಕನ್ ಆರ್ಡರ್ ಮಾಡಿದಾಗ ಸರ್ವರ್ ಮೊಟ್ಟೆ ತಂದುಕೊಟ್ಟರೆ ಅದು ತಪ್ಪು ಅನ್ನೊಂಗಿಲ್ಲ.
- ಪ್ರೇಮಿಗಳ ನಡುವೆ ಅಂತರವಿಡೋ ಶಕ್ತಿ ಈ ಮಾತಿಗಿದೆ: 'ಪೆಟ್ರೋಲ್ ಬೆಲೆ ಏರಿಕೆ'.