ಖುಷಿ

ಪೆಂಟಗಾನಲ್ಲಿ ತಮ್ಮಾ- ತಿಮ್ಮಾ!

ಪೆಂಟಗಾನಲ್ಲಿ ತಮ್ಮಾ- ತಿಮ್ಮಾ!
Published On :

ತಿಮ್ಮಾ: ಸರ್ ನಮಸ್ತೆ... ನಾವು ಇಂಟ್ರೊಡ್ಯೂಸ್ ಮಾಡಕೋತೇವಿರಿ...
ಒಬಾಮಾ: ಬೇಡ... ಬೇಡ...  i know... ನೀವು ತಿಮ್ಮಾ... ಇವರು ತಮ್ಮಾ... ನಿಮ್ಮ ಮೇಲ್ It khullamkullabevubella@gmail.com... ನಿಮ್ಮ ಫೋನ್ ನಂ. ್ಢ11920110311... ನೀವು ಸಿಲಿಕಾನ್ ವ್ಯಾಲಿಯಲ್ಲಿದಿರಾ... ಅಲ್ವಾ?
ತಮ್ಮಾ: ಎಲ್ಲ ಬರೋಬ್ಬರಿ ಐತಲರಿ... ಹ್ಯಾಂಗ ಗೊತ್ತಾತು?
ಒಬಾಮಾ: ನಮ್ಮ ಏಜನ್ಸಿ ಹಾಗಿದೆ... ಎಲ್ಲ ಗೊತ್ತಾಗುತ್ತೆ!
ತಿಮ್ಮಾ: ಹೌದ ಬಿಡರಿ. ನಮ್ಮ ಅಡ್ಡ ಉದ್ದ ಸೇರಿ ಎಲ್ಲ ಗೊತ್ತಿರಬೇಕು ನಿಮಗಡಡ...
ಒಬಾಮಾ: ya... ya... ನೀವು ಇಂಟರ್‌ವ್ಯೂ ಶುರುಮಾಡಿ.
ತಮ್ಮಾ: ಥ್ಯಾಂಕ್ಯು ಸರ್...
(ಅಷ್ಟರಲ್ಲೇ ಒಬಾಮಾನ ಅಸಿಸ್ಟೆಂಟೊಬ್ಬ ಬಂದು ಅವರ ಕಿವಿಯಲ್ಲಿ ಏನೋ ಹೇಳುವನು)
ಒಬಾಮ: sorry guys... ಹೋಗಬೇಕು. ಅದ್ಯಾರೋ ನನ್ನ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಮಾಡಿದ್ದಾರಂತೆ...
ತಿಮ್ಮಾ: ಹೌದಾ ಸರ್.... ಅಧ್ಯಾಕಂಗ್ ಹ್ಯಾಕ ಮಾಡಿದರು?
ಒಬಾಮ: ಅದನ್ನ ತಿಳಕೊಳ್ಳಬೇಕು ಅಂತ ಹೋಗ್ತಾಯಿದ್ದೆ...
ತಮ್ಮಾ: ಆಗಿದ್ದ ಆಗಿ ಹೋಗಲಿ ಬಿಡ್ರಿ ಸರ್... ಅಷ್ಟ್ಯಾಕ್ ಸೀರಿಯಸ್ ಆಗ್ತಿರಿ?
ಒಬಾಮಾ: ಅಂದ್ರೆ ತಿಳಕೊಳ್ಳೋದು ಬೇಡ ಅಂತೀರಾ?
ತಿಮ್ಮಾ: ಅಲ್ಲ ಸರ್ ಜಗತ್ತಿನಾಗಿರೋ ಎಲ್ಲ ಫೋನು, ಫೇಸ್, ಇಮೇಲ್ ಅಕೌಂಟು ಎಲ್ಲಾನೂ ನಿಮ್ಮ ಮಂದಿ ಟ್ಯಾಪ್ ಮಾಡ್ತಾರ...
ತಮ್ಮಾ: ನಾವು ಅದನ್ನ ನೀವು ಹ್ಯಾಂಗ ಮಾಡ್ತೀರಿ ಅಂತ ತಿಳಕೊಂಡೆವಿರಿ...
ಒಬಾಮಾ: (ಸುಮ್ಮನಿದ್ದು ತಲೆ ಕೆರೆದುಕೊಳ್ಳುವರು)
ತಮ್ಮಾ: ನಮ್ಮಲ್ಲೆ ಹಿರೇರು ಹೇಳ್ಯಾರು, ಆದದ್ದೆಲ್ಲ ಒಳ್ಳೇದಕ್ಕ ಅಂತ...
ತಿಮ್ಮಾ: ಮತ್ತ ನಮ್ಮ ಭಗವತ್‌ಗೀತಾದಾಗ ಸ್ಪಷ್ಟ ಬರದಾರ ಆಗೋದನ್ನು ತಪ್ಪಿಸಿಲಿಕ್ಕ ಆಗುದಿಲ್ಲ ಅಂತ....
ಒಬಾಮ: ಅಂದ್ರೆ ಏನೇನು worry ಬೇಡವಾ...
ತಮ್ಮಾ: Don't worry ಮಾಡಬ್ಯಾಡರಿ...
ತಿಮ್ಮಾ: ಆದರ ಒಂದು ಹೇಳರಿ ಸರ್... ಇಂಗ್ಲಿಷಿನ್ಯಾಗ ಫೋನ್ ಟ್ಯಾಪ್ ಆಗಿದ್ದನ್ನ ನೀವು, ನಿಮ್ಮ ದೇಶದವರು ತಿಳಕೂಬಹುದು, ನಮ್ಮ ಲೋಕಲ್ ಭಾಷಾದ್ದು ಹ್ಯಾಂಗ್ ತಿಳಕೂತಿರಿ...
ಒಬಾಮಾ: ಓ ಅದಕ್ಕೆಲ್ಲ ಪೆಂಟಗಾನಲ್ಲಿ ಎಕ್ಸ್‌ಪರ್ಟ್ ಇದಾರೆ...
ತಿಮ್ಮಾ: ಅಂದರ ತೆಲುಗುಕ್ಕ ಒಬ್ಬರು, ಗುಜರಾತಿಗೆ ಒಬ್ಬರು... ಕನ್ನಡಕ್ಕ ಒಬ್ಬರು...
ಒಬಾಮಾ: ಯೆಸ್ ಯೆಸ್...
ತಮ್ಮಾ: ಹವ್ಯಕ ಮಾಣಿ ಭಾಷಾಕ್ಕ ಯಾರಿದ್ದಾರ ಸರ್?
ತಿಮ್ಮಾ: ಅದ್ಯಾಕ ಬೇಕೊಲೆ...?
ತಮ್ಮಾ: ಯಾಕಂದರ ಹೆಚ್ಚು ಕಡಿಮೆ ಕರ್ನಾಟಕದ ಜರ್ನಲಿಸಂನ್ಯಾಗ ಅವರ ಅದಾರಪಾ... ಎಲ್ಲಾದರಾಗೂ ಹೆಡ್ ಅವರಡಡ...
ತಿಮ್ಮಾ: ಹೋಗಲಿ ಬಿಡಲೆ ಯಾರಿದ್ದರೇನು? ನಿಂ... ಹವ್ಯಕ ಹುಡುಗರಿಗೆ ಕನ್ಯಾ ಸಿಗಲೊಲ್ಲವು... any solution ಸರ್...
ಒಬಾಮಾ: ನನ್ನ ಹತ್ರ ಏನೂ ಸಲುಷನ್ ಇಲ್ಲ... ಆದರೆ ಅದನ್ಯಾಕೆ ನನ್ನನ್ನು ಕೇಳ್ತೀರಾ?
ತಮ್ಮಾ: ಯಾಕಂದರ ಸಿಗಲಾರದ್ದನ್ನೆಲ್ಲ ನೀವು ಹುಡುಕಿ ತಗೀತಿರಲಾ... ಒಬಾಮಾನ್ನ ನೀವು ಹುಡುಕಿದಿರಿ...
ತಿಮ್ಮಾ: ಮತ್ತೆ ನಿಮ್ಮ ಸೈನಿಕರು ಒಬಾಮಾ ಬಾಯಿ, ಕಿವಿ, ಮೂಗು ಎಲ್ಲ ಕಡೆ ಬಾಂಬ ಹುಡುಕಿದರು...
ತಮ್ಮಾ: ವಿಡಿಯೋ ನೋಡೆವರಿ ಸರ್... ಭಾರಿ ಪ್ರೊಫೆಷನಲ್ ನಿಮ್ಮ ಮಂದಿ ಅದಕ್ಕ ಹವ್ಯಕ ಹುಡುಗರಿಗೆ ಕನ್ಯಾ ಹುಡುಕತಾರೇನು ಅಂತ!
ಒಬಾಮಾ: I will try my best...
ತಿಮ್ಮಾ: ಸರ್ ಹ್ಯಾಂಗಾ ಮಾಡಿ ಇದನ್ನೊಂದು ಮಾಡಲೇಬೇಕು. ನಿಮಗೆ ಎಲ್ಲ ಗೊತ್ತು ಸರ್... ಟ್ಟಡಡಿ ್ಡಠಜಛಡಿಜಜ ನೀವು...
ತಮ್ಮಾ: ಹೌದು ಸರ್ ದಾವುದ ಎಲ್ಲಿದ್ದಾನೆ ಅಂತ ಗೊತ್ತು. ದೇವಯಾನಿ ಸ್ಟೋರಿ ಫುಲ್ ಗೊತ್ತು. ಮೋದಿಯವರಿಗೆ ವೀಸಾ ಯಾಕ ಕೊಡುದಿಲ್ಲ ಅಂತನೂ ಗೊತ್ತು.
ಒಬಾಮಾ: ಥ್ಯಾಂಕ್ ಯು.... ಥ್ಯಾಂಕ್ ಯು... ನಮ್ಮ ಬಗ್ಗೆನೂ ನೀವು ತುಂಬಾ ತಿಳಕೊಂಡಿದಿರಿ. ಇನ್ನು ನಿಮಗೆ 'ಒಬಾಮಾ ಕೇರ್‌' ಬಗ್ಗೆ ಹೇಳ್ತೀನಿ.
(ಮತ್ತೊಬ್ಬ ಅಸಿಸ್ಟೆಂಟ್ ಬಂದು ಒಬಾಮಾನ ಕಿವಿಯಲ್ಲಿ ಏನೋ ಹೇಳುವನು)
ಒಬಾಮಾ: ನಮ್ಮ ದೇಶ ಎಷ್ಟು ಮುಂದುವರೆದದ್ದು ಅಂತ ನಿಮಗೆ ತಿಳಿಸಿಕೊಡೋದಕ್ಕೆ ಒಂದು ಡೆಮೋ ಇದೆ. ಬನ್ನಿ ನನ್ನ ಜೊತೆ...
ತಿಮ್ಮಾ: ನಿಮ್ಮ ವೈಟ್‌ಹೌಸ್ ಅಂಗಳ ಭಾಳ ಮಸ್ತ್ ಐತಿ ಬಿಡ್ರಿ...
ತಮ್ಮಾ: ಆದರ ಇಷ್ಟು ಎತ್ತಎತ್ತರ ಗಿಡಗಳನ್ನ ಯಾಕ್ ಹಚ್ಚಿರಿ... ದೂರಿಂದ ನಿಮ್ಮ ಛಂದ ಬಿಲ್ಡಿಂಗ್ ಕಾಣಂಗಿಲ್ಲ...
ಒಬಾಮಾ: ಅದು ಯಾರಿಗೂ ಕಾಣಿಸಬಾರದು ಅಂತಲೇ ಹೀಗೆ ಮರಗಳನ್ನ ಬೆಳೆಸಿರೋದು...
ತಮ್ಮಾ: ಕಂಡರ ಏನಾಕ್ಕೆತೈತಿ ಸರ್..?
(ಒಬಾಮಾ ಹೇಗೆ ಉತ್ತರಿಸಬೇಕೆಂದು ಯೋಚಿಸುತ್ತಿರುವಾಗಲೇ... ತಿಮ್ಮಾ ಹೇಳಿಬಿಡುತ್ತಾನೆ)
ತಿಮ್ಮಾ: ಕೆಲವು ಮಂದಿ ಇಮಾನ ತಂದು ಹಾಯಿಸಿ ಬಿಡ್ತಾರಲೇ...
ಒಬಾಮಾ: ಸರಿ ಮಿ. ತಿಮ್ಮಾ ಆ್ಯಂಡ್ ತಮ್ಮಾ... ಇದೋ ನೋಡಿ ಈ ಭೂಮಿಯನ್ನು ಅಗೇದಿದೀವಿ.
ತಿಮ್ಮಾ: ಹೌದ ಬಿಡರಿ. ಇರಬೇಕು ಈ ನೂರಡಿ... ಏನೂ ಕಾಣೂದಿಲ್ಲ ಕತ್ತಲಿ ಗವಿ!
ಒಬಾಮಾ: ಲೈಟ್ ಬಿಡ್ತೀವಿ... ನೀವಿಬ್ಬರೂ ಅದರಲ್ಲಿಳಿದು ಅಲ್ಲಿ ಏನಿದೆ ಅಂತ ಹೇಳ್ತೀರಾ?
ತಿಮ್ಮಾ: ಯಾಕಾಗಲೊಲ್ಲದು... ಹೋಗ್ತೀವಿ ಸಾರ್...
(ಇಬ್ಬರೂ ಇಳಿದು ತಳ ತಲುಪಿದರು. ಒಂದೆರಡು ಮೂರು ವೈರ್ ತುಣುಕುಗಳು ಸಿಕ್ಕವು. ಮೇಲೆ ಬಂದು ಹೇಳಿದರು)
ತಮ್ಮಾ: ಈ ಒಂದೆರಡು ವೈರು ಸಿಕ್ಕವು ಸಾರ್... ಹಳೇಕಾಲದಾಗ ಹುಗದದ್ದು ಇರಬೇಕು.
ಒಬಾಮಾ: ನೋಡಿದರಾ... ನೂರು ಅಡಿ ಅಂದರೆ ನೂರು ವರುಷ. ನೂರು ವರುಷದ ಹಿಂದೆನೇ ನಮ್ಮ ದೇಶ ಎಷ್ಟು ಮುಂದುವರಿದಿತ್ತು ಅಂದರೆ ಆಗಲೇ ನಾವು ಕೇಬಲ್ ಬಳಸಿದ್ವಿ.
ತಿಮ್ಮಾ: ಏಯ್, ಹೌದಾ ಬಿಡರಿ ಸರ್... ಭಾಳ ಮುಂದುವರದದ್ದು ನಿಮ್ಮ ದೇಶ...
ಒಬಾಮಾ: ಇದಕ್ಕಿಂತ ಹೆಚ್ಚು ನನಗೇನು ಹೇಳೂದಿಲ್ಲ. ನೀವಿನ್ನು ಹೊರಡಬಹುದು...
ತಮ್ಮಾ/ ತಿಮ್ಮಾ: ಥ್ಯಾಂಕ್ಯು ಬರತೀವಿ. ಆದರ, ನಮ್ಮ ದೇಶಕ್ಕೂ ಬರಬೇಕ ಸರ ನೀವು...
ಒಬಾಮಾ: ಬರತೀನಿ. ಖಂಡಿತಾ. ಐ ವಿಲ್ ಕಮ್, ಆ್ಯಂಡ್ ಕಾಲ್ ಯು ಬೋತ್! ಬೈ...
(ಮುಂದೆ ಕೆಲವು ವರುಷಗಳಲ್ಲಿ ಒಬಾಮಾ ಇಂಡಿಯಾಕ್ಕೆ ಬಂದರು. ತಮ್ಮಾ/ ತಿಮ್ಮನಿಗೆ ಫೋನು ಬಂತು)
ಒಬಾಮಾ: ಹೌ ಆರ್ ಯು ಬಾಯ್ಸ್?
ತಿಮ್ಮಾ: ಫೈನ್ ಸರ್. ನೀವು ಹೇಗಿದ್ದೀರಿ ಸರ್... ಹೆಂಡ್ತಿ ಮಕ್ಕಳು...?
ಒಬಾಮಾ: ಚೆನ್ನಾಗಿದಾರೆ...
ತಿಮ್ಮಾ: ಮೊನ್ನೆ ಮಕ್ಕಳಿಗೆ ಡೇಟಿಂಗ್ ಬಗ್ಗೆ ತಿಳಿಸಿಕೊಟ್ರಿ ಅಂತ ಸುದ್ದಿ ಇತ್ತು ಸರ್...
ಒಬಾಮಾ: ಓ ಅದಾಡಡ... ಹೌದು ಹೌದು. ಮಕ್ಕಳು ಏನೇ ಮಾಡಿದರೂ ಸರಿಯಾಗಿ ಮಾಡ್ಬೇಕಲ್ಲವಾ...?
ತಿಮ್ಮಾ: ಹೌದ ಬಿಡರಿ... ಅವ್ವ ಅಪ್ಪ ಮಾಡಿದ ತಪ್ಪು ಮಕ್ಕಳು ಮಾಡಬಾರದು...
ಒಬಾಮಾ: ನೀವು ಇಂಡಿಯಾಕ್ಕೆ ಬಂದಾಗ ಏನೋ ಹೇಳ್ತೀವಿ ಅಂತ ಹೇಳಿದ್ರಿ...
ತಮ್ಮಾ: ಅದಾಡಡ... ಸರ್... ನಮ್ಮ ದೇಶ ಎಷ್ಟು ಮುಂದವರಿದಿದೆ ಅಂತ ನಿಮಗೆ ಡೆಮೋ ಕೊಡಬೇಕು ಅಂತ ಇದ್ದವಿ ಸರ್...
ಒಬಾಮಾ: ಓ ಅದಾ... ಎಲ್ಲ ರೆಡಿ ಇದೆಯಾ...
ತಿಮ್ಮಾ: ಹೌದು ಸರ್...
(ಬಯಲು ಪ್ರದೇಶಕ್ಕೆ ಬರುವರು)
ಒಬಾಮಾ: ಓ ಸೇಮ್. ನೀವೂ ಡಿಗ್ ಮಾಡಿದಿರಾ? (ಅಂತ ತಮ್ಮ ಪೆನ್ ತೆಗೆದು ಅದರ ಬಟನ್ ಒತ್ತಿದರು. ಅದರಿಂದ ಒಂದು ಲೈಟು ತೆಗ್ಗಿನ ಒಳಗೆ ನುಗ್ಗಿತು. ಪೆನ್ನಿನ ಮೇಲೆ 400 ಫೀಟ್ ಅಂತ ಅಂಕಿ ಮೂಡಿತು) ನಾನೂರು ಫೀಟ್ ಆಳ ಇದೆ...
ತಮ್ಮಾ: ಹೌದು ಸರ್... ನೀವು ದಯವಿಟ್ಟು ಕೆಳಗಿಳಿದು ಪರೀಕ್ಷಿಸಬೇಕು ಸರ್...
(ಒಬಾಮಾ ಇಳಿಯುವರು. ತಳದಲ್ಲಿ ಹುಡುಕುವರು. ಏನೂ ಸಿಗುವುದಿಲ್ಲ. ಸುಮಾರು ಸಮಯದ ನಂತರ ಸುಸ್ತಾಗಿ ಮೇಲೆ ಬರುವರು)
ಒಬಾಮಾ: ಅಲ್ಲಿ ಏನೇನೂ ಇಲ್ಲ.
ತಿಮ್ಮಾ: ಸರ್, ನಾನೂರು ಫೀಟ್ ಅಂದರ...
ಒಬಾಮಾ: 400 ಇಯರ್ಸ್ ಅಂತ ಅರ್ಥ ಅಲ್ಲವೇ?
ತಮ್ಮಾ: ಕರೆಕ್ಟ್ ಸರ್...
ಒಬಾಮಾ: ಆದರೆ, ಅಲ್ಲೇನು ಇಲ್ಲವಲ್ಲ!!
ತಿಮ್ಮಾ: ಅದೇ ನಾನೂರು ವರುಷದ ಹಿಂದೆ ನಮ್ಮ ದೇಶ ಎಷ್ಟು ಮುಂದುವರಿದಿತ್ತು ಅಂದರೆ ಆಗಲೇ ನಮ್ಮದು ವೈರ್‌ಲೆಸ್ ಸರ್!
(ಒಬಾಮಾ ಏನೂ ಮಾತನಾಡ್ಲಿಲ್ಲ. ತಮ್ಮಾ ತಿಮ್ಮಾ ಗಂಭೀರವಾಗಿದ್ದರು ಅಷ್ಟ... ಬೀಳ್ಕೊಡುಗೆಯಂದು ಹ್ಯಾಪಿ ನ್ಯೂ ಇಯರ್ ಅಂದರು...)


-ಯಶವಂತ ಸರದೇಶಪಾಂಡೆ
allthebest01@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.