ಅವನು ಒದ್ದ, ಭೂಮಿ ತಿರುಗಿತು!

ಅಪ್ಪಟ ವ್ಯಾಪಾರಿ ಚಿತ್ರಗಳ ಹೀರೋಗಳಾಗಿ, ಗಲ್ಲಾಪೆಟ್ಟಿಗೆಯನ್ನು ದೋಚಬಲ್ಲವರಾಗಿ, ಅಭಿಮಾನಿಗಳ ದೇವತೆಗಳಾಗಿ ಪರಿವರ್ತಿತರಾದವರು ಇಬ್ಬರು- ಭಾರತದ ರಜನಿಕಾಂತ್ ಹಾಗೂ ಅಮೆರಿಕದ ಚಕ್ ನೋರಿಸ್. ಇಬ್ಬರ ಬಗ್ಗೆಯೂ ಸೃಷ್ಟಿಯಾದ ಜೋಕ್ಗಳು ಲೆಕ್ಕವಿಲ್ಲದಷ್ಟು. ಅಪ್ಪಟ ಹಾಸ್ಯಪ್ರಜ್ಞೆಯಿಂದ, ಸಿಕ್ಕಾಪಟ್ಟೆ ಅಭಿಮಾನದಿಂದ, ಕೊಂಚ ಮೂರ್ಖತನದಿಂದ... ಹೀಗೆ ಬೇರೆ ಬೇರೆ ರೀತಿಯಲ್ಲಿ ಜೋಕುಗಳು ಸೃಷ್ಟಿಯಾಗಿವೆ. ನೋರಿಸ್ ಅಭಿಮಾನಿಗಳು ರಜನಿ ಜೋಕ್ಗಳನ್ನೂ, ಇವರು ಅವರದ್ದನ್ನೂ ಸಾಕಷ್ಟು ಕದ್ದಿದ್ದಾರೆ. ಏನಿದ್ದರೂ ಒಂದು ಸಲ ಓದಿ ನಗಲು ಮೋಸವಿಲ್ಲ. ಈ ಜೋಕ್ಗಳನ್ನು ಸೀರಿಯಸ್ ಆಗಿ ತಗೊಂಡಿದ್ದರೆ ಇಬ್ಬರೂ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಕೊಡುತ್ತಿದ್ದರೇನೋ ಎಂಬುದು ಈ ಜೋಕ್ಗಳ ಬಗ್ಗೆಯೇ ಮಾಡಬಹುದಾದ ಜೋಕ್!
ರಜನಿ ಇಂಡಿಯನ್ ಏರ್ಲೈನ್ಸ್ಗೆ ಕರೆ ಮಾಡಿದ.
'ಚೆನ್ನೈಯಿಂದ ಕೋಲ್ಕತ್ತಾಗೆ ಹೋಗೋಕೆ ಎಷ್ಟು ಹೊತ್ತು ಬೇಕು?'
'ಒಂದು ಗಂಟೆ ಸರ್'
'ಹೌದೆ? ಹಾಗಾದ್ರೆ ನಾನು ನಡ್ಕೊಂಡೇ ಹೋಗ್ತೀನಿ ಬಿಡಿ'
ರಜನಿ ಶಾಲೆಗೆ ಹೋಗುತ್ತಿದ್ದಾಗ, ಪ್ರಶ್ನೆಪತ್ರಿಕೆ ಹೀಗಿತ್ತು- '150 ಪ್ರಶ್ನೆಗಳಲ್ಲಿ ಯಾವುದಾದರೂ ನೂರಕ್ಕೆ ಉತ್ತರಿಸಿ'.
ರಜನಿ ಎಲ್ಲ 150ನ್ನೂ ಉತ್ತರಿಸಿ, 'ಯಾವುದಾದರೂ 100ಕ್ಕೆ ಅಂಕ ಹಾಕಿಕೊಳ್ಳಿ' ಎಂದು ಬರೆದಿದ್ದ.
ಒಮ್ಮೆ ರಜನಿ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ.
ಅಮಿತಾಭ್ ಕಂಪ್ಯೂಟರ್ಗೆ ಹೇಳಿದರು- 'ಕಂಪ್ಯೂಟರ್ಜೀ, ರಜನೀಜಿಗೆ ಮೊದಲ ಪ್ರಶ್ನೆ ಕೇಳಿ..'
ಕಂಪ್ಯೂಟರ್ ಹೇಳಿತು- 'ನಾನು ಲೈಫ್ಲೈನ್ ಬಳಸಲು ಇಚ್ಛಿಸುತ್ತೇನೆ'
ಒಮ್ಮೆ ರಜನಿಕಾಂತ್ ಗ್ರೆನೇಡ್ ಎಸೆದರು. ಅದು 50 ಜನರನ್ನು ಕೊಂದ ಮೇಲೆ ಸ್ಫೋಟಗೊಂಡಿತು.
ರಜನಿಗೆ ಡ್ಯೂಪ್ ಅಗತ್ಯ ಬೀಳುವುದು ಅಳುವ ಸೀನ್ ಇದ್ದಾಗ ಮಾತ್ರ.
ರಜನಿ ತನ್ನ ಫೋನ್ಗೆ ತಾನೇ ಮಿಸ್ಸ್ಡ್ ಕಾಲ್ ಕೊಟ್ಟುಕೊಳ್ಳಬಲ್ಲ.
ಕೆಲವರು ಅದೃಷ್ಟವಂತರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುತ್ತಾರೆ. ರಜನಿ ನಾಲ್ಕು ಹಕ್ಕಿ ಹೊಡೆಯುತ್ತಾನೆ, ಅರ್ಧ ಕಲ್ಲಿನಲ್ಲಿ.
ದೇವರು ಆರು ದಿನಗಳಲ್ಲಿ ಭೂಮಿ ಸ್ವರ್ಗ ಪಾತಾಳಗಳನ್ನು ಸೃಷ್ಟಿಸಿದ. 7ನೇ ದಿನ ರೆಸ್ಟ್ ತಗೊಂಡು 8ನೇ ದಿನ ರಜನಿಯನ್ನು ಸೃಷ್ಟಿಸಿದ.
ರಜನಿ ನಿಸರ್ಗದ ಕರೆಗೆ ಉತ್ತರಿಸುವುದಿಲ್ಲ. ನಿಸರ್ಗವೇ ರಜನಿಯ ಕರೆಗೆ ಉತ್ತರಿಸುತ್ತದೆ.
ತಾನು ಕಾರ್ಯಾಚರಿಸುತ್ತಿರುವುದಕ್ಕಾಗಿ ಭಾರತ ಸರಕಾರ ರಜನಿಗೆ ತೆರಿಗೆ ಪಾವತಿಸುತ್ತದೆ.
ಬೆಳಕಿಗಿಂತ ವೇಗವಾಗಿ ಯಾರೂ ಚಲಿಸಲಾರರು ಎಂದು ಐನ್ಸ್ಟೈನ್ ಹೇಳಿದ್ದ. ಅದಕ್ಕೆ ಕಾರಣ, ಆತನಿಗೆ ರಜನಿ ಕಾಲಿನಿಂದ ಒದೆ ತಿಂದು ಗೊತ್ತಿರಲಿಲ್ಲ.
ರಜನಿಯ ಹವ್ಯಾಸಗಳಲ್ಲೊಂದು- ಸುನಾಮಿ ಬಂದಾಗ ಈಜುವುದು.
ರಜನಿಗೆ ಆಪರೇಶನ್ ಮಾಡಬೇಕಾದಾಗ, ಡಾಕ್ಟರ್ಗಳಿಗೆ ಅನಸ್ತೇಷಿಯಾ ಕೊಡಲಾಗುತ್ತದೆ.
ರಜನಿಕಾಂತ್ ತನಗೆ ಗಿಫ್ಟ್ ಕೊಡುತ್ತಾನೆಂದು ಪ್ರತಿವರ್ಷ ಸಾಂತಾಕ್ಲಾಸ್ ಕಾಯುತ್ತಾನೆ.
ಒಮ್ಮೆ ರಜನಿ ಫುಲ್ ಬಾಟಲ್ ನಿದ್ರೆ ಮಾತ್ರೆಗಳನ್ನು ತಿಂದ. ಆತ ಒಮ್ಮೆ ಕಣ್ಣು ಮಿಟುಕಿಸಬೇಕಾಯಿತು ಅಷ್ಟೆ.
ಒಮ್ಮೆ ರಜನಿ ಪಾನ್ ತಿಂದು ಎಂಜಲನ್ನು ಒಂದು ಬಿಲ್ಡಿಂಗಿನ ಮೇಲೆ ಉಗಿದ. ಅದನ್ನೇ ಈಗ ಕೆಂಪು ಕೋಟೆ ಅಂತ ಕರೀತಾರೆ.
ಒಮ್ಮೆ ಸ್ಪೈಡರ್ಮ್ಯಾನ್, ಸೂಪರ್ಮ್ಯಾನ್, ಬ್ಯಾಟ್ಮ್ಯಾನ್ ಮೂವರೂ ರಜನಿ ಮನೆಗೆ ಭೇಟಿ ನೀಡಿದರು. ಅಂದು ಶಿಕ್ಷಕರ ದಿನವಾಗಿತ್ತು.
ನೋರಿಸ್ ಜೋಕ್ಸ್
ಚಕ್ ನೋರಿಸ್ ಹತ್ತಿರ ಒಂದು ಡೈರಿಯಿದೆ. ಅದನ್ನು ಗಿನ್ನೆಸ್ ದಾಖಲೆ ಪುಸ್ತಕ ಅಂತ ಕರೀತಾರೆ.
ತಪ್ಪುಗಳು ಚಕ್ ನೋರಿಸ್ ಬಳಿ ಪಾಠ ಕಲಿಯುತ್ತವೆ.
ನೋರಿಸ್ ಒಂದು ಬಾರಿ ಮಂಗಳನಲ್ಲಿಗೆ ಹೋದ. ಆ ಬಳಿಕ ಅಲ್ಲಿ ಜೀವದ ಕುರುಹೂ ಇಲ್ಲ.
ಅಲೆಕ್ಸಾಂಡರ್ ಬೆಲ್ ದೂರವಾಣಿ ಆವಿಷ್ಕರಿಸಿದ. ಆ ಕ್ಷಣವೇ ಅದರಲ್ಲಿ ನೋರಿಸ್ನ ಮೂರು ಮಿಸ್ಸ್ಡ್ ಕಾಲ್ಗಳಿದ್ದವು.
ಫಸ್ಟ್ ಏಯ್ಡ್ ಬಾಕ್ಸ್ ಬಳಸಿ ಕ್ಯಾನ್ಸರ್ ಗುಣಪಡಿಸಬಲ್ಲವನು ನೋರಿಸ್.
ಒಮ್ಮೆ ನೋರಿಸ್ ಒಂದು ಬಿಲ್ಡಿಂಗ್ ಮೇಲೆ ಕಾಲಿಟ್ಟು ತನ್ನ ಶೂ ಲೇಸ್ ಕಟ್ಟಿಕೊಂಡ. ಈಗ ಅದನ್ನೇ ಪೀಸಾ ವಾಲು ಗೋಪುರ ಎಂದು ಕರೆಯಲಾಗುತ್ತದೆ.
ಒಮ್ಮೆ ಒಂದು ಮಗುವಿಗೆ ನೋರಿಸ್ ಒಂದು ಜೋಕ್ ಹೇಳಿದ. ಆತನನ್ನೇ ಈಗ ಲಾಫಿಂಗ್ ಬುದ್ಧ ಎನ್ನಲಾಗುತ್ತದೆ.
ನೋರಿಸ್ನ ನಾಯಿ ತನ್ನ ಬಾಲ ಬಳಸಿ ಪೈಪನ್ನೂ ಬಗ್ಗಿಸಬಲ್ಲುದು.
ನೋರಿಸ್ನ ಮನೆಯಲ್ಲಿ ಹುಲಿ ಚರ್ಮದ ಕಾರ್ಪೆಟ್ ಇದೆ. ಆ ಹುಲಿಯೇನೂ ಸತ್ತಿಲ್ಲ, ಆದಕ್ಕೆ ನೋರಿಸ್ ಬಗ್ಗೆ ಹೆದರಿಕೆ ಅಷ್ಟೆ.
ನೋರಿಸ್ 20 ವರ್ಷ ಹಿಂದೆಯೇ ಸತ್ತಿದ್ದಾನೆ. ಅದನ್ನು ನೋರಿಸ್ಗೆ ಹೇಳಲು ಮೃತ್ಯುದೇವತೆಗೆ ಭಯ.
ಕೆಲವು ಜಾದೂಗಾರರು ನೀರಿನ ಮೇಲೆ ನಡೆಯಬಲ್ಲರು. ನೋರಿಸ್ ನೆಲದ ಮೇಲೆ ಈಜಬಲ್ಲ.
ನೋರಿಸ್ ಮತ್ತು ಸೂಪರ್ಮ್ಯಾನ್ ಒಮ್ಮೆ ಹೊಡೆದಾಡಿದರು. ಅವರ ಬೆಟ್ ಏನಿತ್ತು ಗೊತ್ತಾ? 'ಸೋತವರು ಪ್ಯಾಂಟ್ ಮೇಲೆ ಚಡ್ಡಿ ತೊಡಬೇಕು!'
ನೋರಿಸ್ ಒಮ್ಮೆ ಒಂದು ಕುದುರೆಯ ಗದ್ದದ ಮೇಲೆ ಒದ್ದ. ಈಗ ಅದರ ಮೊಮ್ಮಕ್ಕಳೇ ಜಿರಾಫೆಗಳೆಂದು ಕರೆಸಿಕೊಳ್ಳುತ್ತಿದ್ದಾರೆ.
ನೋರಿಸ್ ವಾಚ್ ಕಟ್ಟಿಕೊಳ್ಳುವುದಿಲ್ಲ. ಈಗ ಸಮಯ ಏನಿರಬೇಕೆಂದು ಅವನೇ ನಿರ್ಧರಿಸುತ್ತಾನೆ.
ವಿಕಾಸವಾದ ಎಂಬುದೇ ಇಲ್ಲ. ನೋರಿಸ್ ಬದುಕಲು ಬಿಟ್ಟ ಪ್ರಾಣಿಗಳು ಎಂಬ ಪಟ್ಟಿ ಮಾತ್ರ ಇದೆ.
ನ್ಯೂಟನ್ನ ತಲೆಯ ಮೇಲೆ ಬಿದ್ದ ಸೇಬು, ನೋರಿಸ್ ಎಸೆದದ್ದು.ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


