ಕಾಮನ್ಸೆನ್ಸ್ ಎಷ್ಟಿದೆ ಟೆಸ್ಟ್

ಜೀವನವೇ ಒಂದು ಪರೀಕ್ಷೆ ಕೋಣೆ. ಇಲ್ಲಿ ನಿತ್ಯವೂ ಹಲವು ತೆರನಾದ ಪರೀಕ್ಷೆಗಳು. ಇಲ್ಲಿ ಯಾರೂ ಕಾಪಿ ಮಾಡಲು ಸಾಧ್ಯವಿಲ್ಲ. ಸ್ವಂತ ಬುದ್ಧಿ ಇದ್ದರೆ ಮಾತ್ರ ಪಾಸು. ಜ್ಞಾನವನ್ನು ಕಡ ತೆಗೆದುಕೊಳ್ಳಲು ಆಗುವುದಿಲ್ಲವಾದ ಕಾರಣ ನಮ್ಮ ಬುದ್ಧಿಯನ್ನು ನಾವೇ ಪರೀಕ್ಷಿಸಿಕೊಂಡು ನಾವೇ ಅದರ ಬೆಳವಣಿಗೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಸಾಮಾನ್ಯ ಜ್ಞಾನ ನಮ್ಮ ನಿಜವಾದ ಸ್ವಯಾರ್ಜಿತ ಆಸ್ತಿ. ಇಲ್ಲಿ ನಿಮ್ಮ ಸಾಮಾನ್ಯಜ್ಞಾನವನ್ನು ಪರೀಕ್ಷಿಸುವ ಕೆಲವು ಪ್ರಶ್ನೆಗಳಿವೆ. ಆದರೆ, ಹೊಸವರ್ಷದ ಮೊದಲ ದಿನವೇ ಕಾಪಿ ಹೊಡೆಯುವ ದುಷ್ಟ ಸಾಹಸಕ್ಕೆ ಕೈ ಹಾಕಬೇಡಿ. ನಿಮ್ಮ ಉತ್ತರಗಳನ್ನು ಮೊದಲು ಬರೆದಿಟ್ಟುಕೊಳ್ಳಿ. ನಂತರ ತಮಾಷೆ ನೋಡಿ. ಹ್ಞಾಂ... ರಿಸಲ್ಟ್ ನಮಗೆ ಹೇಳಬೇಕೆಂದೇನಿಲ್ಲ. ನೀವು ಬುದ್ಧಿವಂತರು ಎಂದು ನಮಗೆ ಗೊತ್ತು... ಗುಡ್ಲಕ್.
1. ಚಿಹ್ನೆಯೇ ಇಲ್ಲದ ಎರಡು ಪಕ್ಷಗಳು ಯಾವುವು?
2. ಮೂವತ್ತನ್ನು ಅರ್ಧದಿಂದ ಭಾಗಿಸಿ ಹತ್ತು ಕೂಡಿಸಿದರೆ ಬರುವ ಮೊತ್ತ ಎಷ್ಟು?
3. ಬೈಕನ್ನು ಸ್ಟ್ಯಾಂಡ್ ಹಾಕದೇ, ಬೇರೆ ಯಾವುದಕ್ಕೂ ಒರಗಿಸದೇ ನೇರವಾಗಿ ನಿಲ್ಲಿಸಲು ಏನು ಮಾಡಬೇಕು?
4. ಒಂದು ಕತ್ತಲೆಯ ರೂಮಿನಲ್ಲಿ ನೀವು ಪ್ರವೇಶಿಸಿದ್ದೀರಿ. ನಿಮ್ಮ ಬಳಿ ಒಂದೇ ಒಂದು ಬೆಂಕಿಕಡ್ಡಿ ಇರುವ ಬೆಂಕಿ ಪೊಟ್ಟಣವಿದೆ. ರೂಮಿನಲ್ಲಿ ಒಂದು ಮೊಂಬತ್ತಿ, ಒಂದು ಚಿಮಣಿ ದೀಪ ಇದೆ. ಯಾವುದನ್ನು ಮೊದಲು ಹಚ್ಚಬೇಕು?
5. 1989ರಲ್ಲಿ ಭಾರತದ ರಾಷ್ಟ್ರಪತಿಯ ಹೆಸರು ಏನಿತ್ತು?
6. ಎಳೆದಂತೆ ಉದ್ದವಾಗುವುದು ರಬ್ಬರ್. ಎಳೆದಂತೆ ಗಿಡ್ಡವಾಗೋದು ಸಿಗರೇಟ್. ಎಳೆದಂತೆ ಪುಡಿಯಾಗೋದು ಯಾವುದು?
7. ಎರಡು ಕುದುರೆಗಳು ಯಾವತ್ತೂ ಒಂದಕ್ಕೊಂದು ವಿರುದ್ಧ ದಿಕ್ಕಿಗೇ ತಲೆ ಹಾಕಿ ನಿಲ್ಲವುದು. ಒಂದು ಪೂರ್ವಕ್ಕೆ ಅಭಿಮುಖವಾಗಿ ನಿಂತರೆ ಇನ್ನೊಂದು ಪಶ್ಚಿಮಕ್ಕೆ. ನಿಮಗೆ ಒಂದೇ ಬಕೆಟ್ ಕೊಡಲಾಗಿದೆ. ಒಮ್ಮೆಗೇ ಎರಡು ಕುದುರೆಗಳಿಗೂ ನೀರು ಕುಡಿಸಬೇಕು. ಹೇಗೆ?
8. ಎರಡು ಮಕ್ಕಳು ತಮ್ಮ ಅಪ್ಪಂದಿರ ಜೊತೆ ಬೇಟೆಗೆ ಹೋಗುತ್ತಾರೆ. ಎಲ್ಲರೂ ಒಂದೊಂದು ಹಕ್ಕಿಯನ್ನು ಬೇಟೆಯಾಡುತ್ತಾರೆ. ಆದರೂ ಕೊನೆಗೆ ಮೂರೇ ಹಕ್ಕಿಗಳು ಸತ್ತಿರುತ್ತವೆ. ಯಾಕೆ?
9. ಇಬ್ಬರಿಗೆ ಹೊದೆಸುವಷ್ಟು ಕಂಬಳಿ ಅಗಲವೇನೋ ಇದೆ. ಆದರೆ, ಸಮಸ್ಯೆಯೆಂದರೆ ಅದು ಚೂರು ಗಿಡ್ಡ. ಕಾಲು ಮುಚ್ಚಿದರೆ ತಲೆ ಹೊರಗೆ. ತಲೆ ಮುಚ್ಚಿದರೆ ಕಾಲು ಹೊರಗೆ. ಹೀಗಿರುವಾಗ, ತಲೆ ಮತ್ತು ಕಾಲೆರಡೂ ಮುಚ್ಚುವಂತೆ ಅವರನ್ನು ಹೇಗೆ ಮಲಗಿಸುತ್ತೀರಿ?
10. ಕೆಲವು ತಿಂಗಳು 30 ದಿನಗಳಿದ್ದರೆ, ಇನ್ನು ಕೆಲವು ತಿಂಗಳು 31 ದಿನಗಳನ್ನು ಹೊಂದಿವೆ. ಹಾಗಿದ್ದರೆ ಎಷ್ಟು ತಿಂಗಳು 28 ದಿನಗಳನ್ನು ಹೊಂದಿವೆ?
11. ಅರ್ಧ ಗಂಟೆಗೊಂದರಂತೆ ಮೂರು ಮಾತ್ರೆ ತೆಗೆದುಕೊಳ್ಳಬೇಕು. ಎಲ್ಲ ಮಾತ್ರೆಗಳನ್ನು ತೆಗೆದುಕೊಂಡಾಗ ಎಷ್ಟು ಅವಧಿಯಾಗಿರುತ್ತದೆ?
12. ಒದೆಯುವಾಗ ಒಮ್ಮೆಗೆ ಒಂದು ಕಾಲಿನಲ್ಲಿ ಮಾತ್ರ ಒದೆಯಲು ಸಾಧ್ಯ. ಆದರೆ ಎರಡೂ ಕಾಲನ್ನು ಎತ್ತಿ ಜೋರಾಗಿ ಒದೆಯಬೇಕು. ಹೇಗೆ?
13. ಒಬ್ಬ ವ್ಯಕ್ತಿಗೆ ಒಂದು ಕೈಗೆ 6 ಬೆರಳು ಮತ್ತು ಇನ್ನೊಂದು ಕೈಗೆ 7 ಬೆರಳುಗಳಿತ್ತು. ಆತನನ್ನು ಎಲ್ಲರೂ ಆಂಜನೇಯ ಎಂದು ಕರೆಯುತ್ತಿದ್ದರು. ಯಾಕೆ?
14. ಮೊಟ್ಟ ಮೊದಲು ಆಲೂಗಡ್ಡೆಯನ್ನು ಎಲ್ಲಿ ಕಂಡುಹಿಡಿಯಲಾಯಿತು?
15. ಜಪಾನ್ನ ಯಾವ ಭಾಗ ಲಂಡನ್ನಲ್ಲಿದೆ?
16. ಒಂದು ವೇಳೆ ನಿಮ್ಮ ಮೂಗು 12 ಇಂಚು ಉದ್ದ ಬೆಳೆದರೆ ಆಗ ಅದು ಏನಾಗುತ್ತದೆ?
17. ದೇವಾಲಯದಿಂದ ದೇವನನ್ನೇ ಕಿತ್ತು ತೆಗೆದು ಬಿಟ್ರೆ ಏನಾಗುತ್ತದೆ?
18. ಜೇನುನೊಣ ಅಕ್ರಮವಾಗಿ ಅಮೆರಿಕದ ಗಡಿದಾಟಿ ಹೋದರೆ ಅದನ್ನು ಏನೆಂದು ಕರೆಯಬಹುದು?
19. ಕಾಂಗರೂ ಐಫೆಲ್ ಟವರ್ಗಿಂತಲೂ ಮೇಲೆ ಜಿಗಿಯಬಲ್ಲುದು. ಹೇಗೆ?
20. ಕಾರು ಅಪಘಾತದಿಂದ ಬಚಾವಾಗಲು ಇರುವ ಮಾರ್ಗ ಯಾವುದು?
(ಎಢ್ಯ್ಜ್ಯಾ 29ಥಿವ್ರಿ ದ್ಯಲಟಣ್ಯ್ಪೌ)
ಉತ್ತರಗಳು
1. ಶುಕ್ಲಪಕ್ಷ ಮತ್ತು ಕೃಷ್ಣ ಪಕ್ಷ
2. 70. (30/0.5 60 ಪ್ಲಸ್ 1070).
3. ಮೂರನೇ ಚಕ್ರವನ್ನು ಜೋಡಿಸಿದರೆ ಸ್ಟ್ಯಾಂಡ್ ಇಲ್ಲದೇ ನಿಲ್ಲಿಸಬಹುದು.
4. ಬೆಂಕಿ ಕಡ್ಡಿಯನ್ನು ಹಚ್ಚಬೇಕು.
5. ಪ್ರಣವ್ ಮುಖರ್ಜಿ. (ವರ್ಷಕ್ಕೊಂದೊಂದು ಹೆಸರಿಟ್ಟುಕೊಳ್ಳುತ್ತಾರಾ ಯಾರಾದರೂ)
6. ಧಾರಾವಾಹಿ. ಎಳೆದಂತೆ ಅದು ಹಿಟ್ ಆಗುತ್ತದೆ.
7. ಇಬ್ಬರ ಮುಖವೂ ಪರಸ್ಪರ ಎದುರುಬದುರು ಬರುವಂತೆ ನಿಲ್ಲಿಸಿಕೊಂಡರಾಯಿತು.
8. ಹೋದವರೇ ಮೂವರು. ಅಜ್ಜ, ಅಪ್ಪ ಮತ್ತು ಮಗ. ಮಗ ತನ್ನ ಅಪ್ಪನೊಂದಿಗೆ ಹೋದರೆ, ಅಪ್ಪ ತನ್ನ ಅಪ್ಪನೊಂದಿಗೆ ಹೋಗಿರುತ್ತಾನೆ.
9. ಒಬ್ಬರ ತಲೆಯ ಕಡೆ ಇನ್ನೊಬ್ಬನ ಕಾಲು ಬರೋ ಹಾಗೆ ಮಲಗಿಸಿದರೆ ಕಾಲು ತಲೆ ಎರಡೂ ಮುಚ್ಚಿದಂತಾಗುತ್ತದೆ.
10. ಎಲ್ಲ ತಿಂಗಳಲ್ಲೂ ಇದೆ.
11. ಒಂದು ಗಂಟೆ
12. ಸೋಫಾದಲ್ಲಿ ಕುಳಿತು ಪ್ರಯತ್ನಿಸಿ.
13. ಏಕೆಂದರೆ ಅವನ ಹೆಸರು ಆಂಜನೇಯ ಎಂದಾಗಿತ್ತು.
14. ನೆಲದಲ್ಲಿ.
15. ಃ (ಒಆಕಿಆಃ- ಔಕಃಉಕಃ)
16. ಆಗ ಅದು ಒಂದು ಫೂಟ್ ಆಗುತ್ತದೆ.
17. ದೇವಾಲಯದಿಂದ ದೇವನನ್ನು ತೆಗೆದರೆ ಆಗ ಅದು ಆಲಯ ಮಾತ್ರ ಆಗುತ್ತದೆ.
18. ಯು.ಎಸ್.ಬಿ
19. ಹೇಗೆಂದರೆ ಐಫೆಲ್ ಟವರ್ ಜಿಗಿಯುವುದಿಲ್ಲವಲ್ಲ ಹಾಗಾಗಿ.
20. ಬಸ್ನಲ್ಲಿ ಪ್ರಯಾಣಿಸುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


