ಖುಷಿ

ಟಾಪ್ ಟೆನ್

Published On :

ಮಹಾನ್ ಇತಿಹಾಸಕಾರರು (ಮರು ಅವಲೋಕನ)
ಅರುಣ್ ಶೌರಿ
ಅನು: ಮಂಜುನಾಥ ಅಜ್ಜಂಪುರ
ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಬೆಲೆ: ರೂ. 200/-
ಸಮಗ್ರ ಕಾವ್ಯ (ಜಿ.ಎಸ್. ಶಿವರುದ್ರಪ್ಪನವರ ಸಮಗ್ರ ಕಾವ್ಯ)
ಜಿ.ಎಸ್. ಶಿವರುದ್ರಪ್ಪ
ಕಾಮಧೇನು ಪುಸ್ತಕ ಭವನ, ಬೆಂಗಳೂರು
ಬೆಲೆ: ರೂ. 450/-
ಮೋದಿ ಮುಸ್ಲಿಂ ವಿರೋಧಿಯೇ? (ಗುಜರಾತಿನಲ್ಲಿ ನಿಜಕ್ಕೂ ನಡೆದಿದ್ದೇನು? ಮೋದಿ ಮಾಡಿದ್ದೇನು?)
ಪ್ರತಾಪ್ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: ರೂ. 150/-
ನಾದಗಳು ನುಡಿಯಾಗಲೇ (ಕಂಬಾರರ ಹಾಡುವ ಗೀತೆಗಳು)
ಚಂದ್ರಶೇಖರ ಕಂಬಾರ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರೂ. 170/-
ಮೆಲೂಹದ ಮೃತ್ಯುಂಜಯ (ಪ್ರಸಿದ್ಧ ಇಂಗ್ಲಿಷ್ ಪುಸ್ತಕದ ಕನ್ನಡಾನುವಾದ)
ಅಮೀಶ್
ಅನು: ಎಸ್. ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: ರೂ. 195/-
ಗಾಂಧಿ ಸೀಟು (ಜಗತ್ತಿನ ಚಲನಚಿತ್ರಗಳಿಗೊಂದು ಕಿಂಡಿ)
ಆರ್. ಕೇಶವಮೂರ್ತಿ
ನಿರಂತರ, ಬೆಂಗಳೂರು
ಬೆಲೆ: ರೂ. 180/-
ಅಂತರ್ಮುಖ (ಲೇಖನಗಳು)
ವೀಣಾ ಬನ್ನಂಜೆ
ಯಾಜಿ ಪ್ರಕಾಶನ, ಹೊಸಪೇಟೆ
ಬೆಲೆ: ರೂ. 80/-
ಪುರಾಣ ಮತ್ತು ವಾಸ್ತವ (ಭಾರತದ  ಸಾಂಸ್ಕೃತಿಕ ರಚನೆಯನ್ನು ಕುರಿತ ಅಧ್ಯಯನಗಳು)
ಡಿ.ಡಿ. ಕೊಸಾಂಬಿ
ಅನು: ಟಿ.ಎಸ್. ವೇಣುಗೋಪಾಲ್, ಶೈಲಜಾ
ಚಿಂತನ ಪುಸ್ತಕ, ಬೆಂಗಳೂರು
ಬೆಲೆ: ರೂ. 150/-
ಲೋಕಯಾತ್ರೆ (ಮಹಾಭಾರತದ ದರ್ಶನದಲ್ಲಿ)
ಪ್ರೊ. ಜಿ.ಎಸ್. ಆಮೂರ
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು
ಬೆಲೆ: ರೂ. 100/-
ಮೋಹನಸ್ವಾಮಿ (ಕಥಾಸಂಕಲನ)
ವಸುಧೇಂದ್ರ
ಛಂದ ಪುಸ್ತಕ, ಬೆಂಗಳೂರು
ಬೆಲೆ: ರೂ. 180/-

ಕನ್ನಡದಲ್ಲಿ ಮಾರ್ಕ್ವೆಜ್
ಇಡೀ ಲ್ಯಾಟಿನ್ ಅಮೆರಿಕದಲ್ಲಿ ಗಾಬೋ ಎಂದೇ ಪರಿಚಿತನಾಗಿರುವ ಕೊಲಂಬಿಯಾದ ನೊಬೆಲ್ ಪುರಸ್ಕೃತ ಸಾಹಿತಿ ಗೇಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್ ಅವರ 'ನೋ ಒನ್ ರೈಟ್ಸ್ ಟು ಕರ್ನಲ್' ಕಾದಂಬರಿಯನ್ನು ಶ್ರೀನಿವಾಸ ವೈದ್ಯ ಅವರು 'ಕರ್ನಲ್ಗೆ ಯಾರೂ ಬರೆಯುವುದೇ ಇಲ್ಲ' ಎಂದು ಕನ್ನಡಿಸಿದ್ದಾರೆ. ಮಾರ್ಕ್ವೆಜ್ ಅವರನ್ನು ಅನುವಾದಿಸುವುದು ಒಂದು ಸವಾಲಿನ ಕೆಲಸ. ಯುದ್ಧದ ನಂತರದ ಬದುಕನ್ನು ಕಟ್ಟುವ ವಿವರವನ್ನು ಓದುಗರಿಗೆ ದಕ್ಕುವಂತೆ ತುಂಬ ಸರಳವಾಗಿ ವೈದ್ಯರು ಅನುವಾದ ಮಾಡಿದ್ದಾರೆ.
ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ, ಪುಟಗಳು 82, ಬೆಲೆ ರು. 60

ಮೊಗಸಾಲೆಯ ಮುಖಾಂತರ
ಕಾಂತಾವರದ ಮೂಲಕ ಇಡೀ ರಾಜ್ಯಕ್ಕೇ ಸಾಂಸ್ಕೃತಿಕ ಆಯಸ್ಕಾಂತವಾಗಿ ಮಾರ್ಪಟ್ಟ ಮೊಗಸಾಲೆ ನಾರಾಯಣ ಭಟ್ಟರಿಗೆ 70 ತುಂಬಿದ ಸಂದರ್ಭದಲ್ಲಿ ಬೆಳಗೋಡು ರಮೇಶ ಭಟ್ಟರು ಬರೆದ ವ್ಯಕ್ತಿಚಿತ್ರ 'ಮೊಗಸಾಲೆಯ ಮುಖಾಂತರ'. ಡಾ.ನಾ. ಮೊಗಸಾಲೆಯವರ ವ್ಯಕ್ತಿತ್ವ ಬಹುಮುಖಿಯಾದದ್ದು. ಸಾಹಿತಿ, ಸಮಾಜಸೇವಕ, ಸಂಘಟಕರಾಗಿರುವ ಅವರು ಹಲವು ಎಲೆ ಮರೆಯ ಪ್ರತಿಭೆಗಳು ಬೆಳಕಿಗೆ ಬರಲು ಕಾರಣರಾದವರು. ರಮೇಶ ಭಟ್ಟರು ತುಂಬ ಆಪ್ತವಾಗಿ ಮೊಗಸಾಲೆಯವರ ವಿಶೇಷಗಳನ್ನು ಈ ಕೃತಿಯಲ್ಲಿ ಹೇಳಿದ್ದಾರೆ.
ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು, ಪುಟಗಳು 156, ಬೆಲೆ ರು. 80

ಅಹಂ ತೊರೆಯುವುದು ಹೇಗೆ?
ಅಹಂ ಎಂಬುದು ಎಲ್ಲರಲ್ಲೂ ಇರುತ್ತದೆ. ಅಹಂ ಅಸ್ಮಿತೆಯ ಲಕ್ಷಣ. ಆದರೆ ಅಹಂ ಎನ್ನುವುದು ಒಂದು ಮಿತಿಯಲ್ಲಿ ಇರಬೇಕಾಗುತ್ತದೆ. ಮಿತಿಯನ್ನು ಮೀರಿದಾಗ ಅದು ದುರಹಂಕಾರವೆನ್ನಿಸುತ್ತದೆ. ಈ ಅಹಂ ಮತ್ತು ದುರ್ಅಹಂ ಇವುಗಳ ನಡುವೆ ಸಮತೋಲನವನ್ನು ಸಾಧಿಸಬೇಕಾಗುತ್ತದೆ. ರಾಜು ಗಡ್ಡಿಯವರು 'ನಾನು ನಾನಲ್ಲ, ನನ್ನೊಳಗಿನ ಅಹಂ' ಕೃತಿ ಈ ಸಮತೋಲನ ಸಾಧಿಸುವ ಬಗೆಯನ್ನು ಹೇಳುವ 28 ಲೇಖನಗಳನ್ನು ಒಳಗೊಂಡಿದೆ. ವ್ಯಕ್ತಿತ್ವ ವಿಕಸನಕ್ಕೆ ಇದೊಂದು ಉಪಯುಕ್ತ ಕೈಪಿಡಿ.
ಪ್ರ: ಸಾವಣ್ಣ ಎಂಟರ್ಪ್ರೈಸಸ್, ಬೆಂಗಳೂರು, ಪುಟಗಳು 172, ಬೆಲೆ ರು. 125

ಇಸ್ಲಾಂ ಮತ್ತು ಮಹಿಳೆ
ಧರ್ಮಗಳ ಭೇದವಿಲ್ಲದೆ ಮಹಿಳೆ ಎಲ್ಲೆಡೆಯೂ ಶೋಷಿತಳೇ. ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರ ಸ್ಥಾನಮಾನದ ಬಗ್ಗೆ ಡಾ.ಅಸ್ಗರ್ ಅಲಿ ಎಂಜಿನಿಯರ್ ಬರೆದ ಬಿಡಿ ಲೇಖನಗಳನ್ನು ಹಸನ್ ನಯೀಂ ಸುರಕೋಡ ಅವರು ಅನುವಾದಿಸಿದ್ದಾರೆ. ಕುರಾನ್ನಲ್ಲಿ ಮಹಿಳೆಗೆ ಗೌರವ ತಂದುಕೊಡುವ ಉಲ್ಲೇಖಗಳು ಸಾಕಷ್ಟಿದ್ದರೂ ಪುರುಷರು ಸ್ವಾರ್ಥಿಗಳಾಗಿ ಅದನ್ನು ತಿರುಚಿ ಅರ್ಥೈಸುತ್ತಿದ್ದಾರೆ. ಅದನ್ನು ತಿಳಿಹೇಳಿ ಜಾಗೃತಿ ಮೂಡಿಸುವ ಕೆಲಸವನ್ನು ಇಲ್ಲಿಯ ಲೇಖನಗಳು ಮಾಡಿವೆ.
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು, ಪುಟಗಳು 88, ಬೆಲೆ ರು. 55

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.