ಜೇನು ತುಪ್ಪದ ಅಂಗಡಿಯಲ್ಲಿ ಗ್ರಾಹಕ ಬಾಟಲ್ ತೆಗೆದು ನೆಕ್ಕಿ ನೋಡಿ ಸಿಟ್ಟಿನಿಂದ ಕೇಳಿದ: ಈ ಜೇನು ತುಪ್ಪ ಪ್ಯೂರಾ? ಪ್ಯೂರ್ ಇದೆ ಅಂತ ಏನು ಗ್ಯಾರಂಟಿ?
ಅಂಗಡಿಯವ: ಯಾವುದಾದರೂ ನಾಯಿಗೆ ಇದರಲ್ಲಿರೋ ಜೇನು ಹನಿ ಕೊಡಿ. ನಾಯಿ ಅದನ್ನು ನೆಕ್ಕದಿದ್ದರೆ ಅದು ಶುದ್ಧ ಅಂತ ಅರ್ಥ.
ಗ್ರಾಹಕ: ನಾಯಿ ಅದನ್ನು ನೆಕ್ಕಿಬಿಟ್ಟರೆ?
ಅಂಗಡಿಯವ: ಅದು ನಾಯಿಯೇ ಅಲ್ಲ ಅಂತ ಅರ್ಥ!
---
ಹುಡುಗ ತನ್ನ ಪ್ರೇಯಸಿಗೆ ಫೋನ್ ಮಾಡ್ತಾನೆ. ಅವರಪ್ಪ ಫೋನ್ ಎತ್ತಿಕೊಳ್ತಾರೆ.
ಅಪ್ಪ: ಹಲೋ... ಯಾರು ಮಾತಾಡ್ತಿರೋದು?
ಹುಡುಗ: (ತುಸು ಧ್ವನಿ ಬದಲಿಸಿ) ನಾನು ನಿಮ್ಮ ಪುನೀತ್ ರಾಜ್ಕುಮಾರ್. ಕನ್ನಡದ ಕೋಟ್ಯಧಿಪತಿಯಿಂದ ಮಾತಾಡ್ತಾ ಇದ್ದೀನಿ. ನಿಮ್ಮ ಮಗಳ ಫ್ರೆಂಡ್ ಇಲ್ಲಿ ಹಾಟ್ಸೀಟಲ್ಲಿ ಕೂತಿದಾರೆ. ನಿಮ್ಮ ಮಗಳಿಗೆ ಸ್ವಲ್ಪ ಫೋನ್ ಕೊಡ್ತೀರಾ ಸರ್?
ಅಪ್ಪ ಸಿಕ್ಕಾಪಟ್ಟೆ ಎಕ್ಸೈಟ್ ಆಗಿ 'ಓಹ್ ಓಹ್ ಓಕೆ' ಅಂತ ಮಗಳಿಗೆ ಫೋನ್ ಕೊಡುತ್ತಾರೆ.
ಹುಡುಗ: ನಿಮ್ಮ ಪ್ರಶ್ನೆ- 'ಇಂದು ಸಂಜೆ ನೀವು ನನ್ನನ್ನು ಎಲ್ಲಿ ಭೇಟಿ ಮಾಡುತ್ತೀರಿ?'.
ನಿಮ್ಮ ಆಯ್ಕೆಗಳು ಎ) ಸ್ಯಾಂಕಿ ಟ್ಯಾಂಕ್, ಬಿ) ಕಾಫಿ ಡೇ, ಸಿ) ಮಂತ್ರಿ ಮಾಲ್, ಡಿ) ಗರುಡಾ ಮಾಲ್
ಹುಡುಗಿ: ಆಪ್ಷನ್ (ಎ)
ಹುಡುಗ: ಥ್ಯಾಂಕ್ ಯೂ (ಫೋನ್ ಕಟ್ ಮಾಡ್ತಾನೆ)
----
ಏರ್ಲೈನ್ಸ್ ಸಂಸ್ಥೆಯೊಂದು ತನ್ನ ದೇಶದ ಬ್ಯುಸಿನೆಸ್ಮನ್ಗಳಿಗೆ ಹೊಸಾ ಆಫರ್ ಕೊಟ್ಟಿತು.
'ನಿಮ್ಮ ಅರ್ಧಾಂಗಿಯೊಂದಿಗೆ ನಿಮ್ಮಿಷ್ಟದ ದೇಶಕ್ಕೆ ಪ್ರಯಾಣಿಸಿರಿ. ನಿಮ್ಮ ಟಿಕೆಟ್ ಮಾತ್ರ ಕೊಳ್ಳಿರಿ. ನಿಮ್ಮ ಹೆಂಡತಿಯ ಟಿಕೆಟನ್ನು ಉಚಿತವಾಗಿ ಪಡೆಯಿರಿ'.
ಆಫರ್ ಸಿಕ್ಕಾಪಟ್ಟೆ ಯಶಸ್ವಿಯಾಯ್ತು. ಸಾವಿರಾರು ಬ್ಯುಸಿನೆಸ್ಮನ್ಗಳು ಟಿಕೆಟ್ ಬುಕ್ ಮಾಡಿ ಉಚಿತ ಟಿಕೆಟ್ ಪಡೆದು ಟ್ರಿಪ್ ಮುಗಿಸಿಬಂದರು.
ಈ ಯಶಸ್ಸಿನ ನಂತರ, ಏರ್ಲೈನ್ಸ್ ಕಂಪನಿ ಟ್ರಿಪ್ ಬಗೆಗಿನ ಅಭಿಪ್ರಾಯ ತಿಳಿಸಲು ಕೋರಿ ಎಲ್ಲರ ಮನೆಗೂ ಪತ್ರ ಕಳಿಸಿತು.
ಎಲ್ಲ ಹೆಂಡತಿಯರಿಂದ ಬಂದದ್ದು ಒಂದೇ ಉತ್ತರ: 'ಯಾವ ಟ್ರಿಪ್? ಯಾವಾಗ ಇತ್ತು?'!
----
ತುಂಬು ಗರ್ಭಿಣಿ ಮತ್ತು ಆಕೆಯ ಮೂರು ವರ್ಷದ ಮಗ ಆಸ್ಪತ್ರೆಗೆ ಹೋಗಿರುತ್ತಾರೆ.
ಮಗ ಕೇಳ್ತಾನೆ: ಅಮ್ಮ ನಿನ್ನ ಹೊಟ್ಟೆ ಯಾಕೆ ಇಷ್ಟು ದಪ್ಪ ಇದೆ?
ಅಮ್ಮ: ಯಾಕಂದ್ರೆ ನನ್ನ ಹೊಟ್ಟೆ ಒಳಗೆ ಪಾಪು ಇದೆ.
'ನಿನ್ ಹೊಟ್ಟೇಲಿ ಪಾಪು ಇದ್ಯಾ?' ಮಗ ಆಶ್ಚರ್ಯದಿಂದ ಕಣ್ಣರಳಿಸ್ತಾನೆ.
ಅಮ್ಮ: ಹೌದು ಪುಟ್ಟಾ.
ಮಗ ಕೇಳ್ತಾನೆ: ಆ ಪಾಪು ಒಳ್ಳೇವ್ನೋ ಕೆಟ್ಟವ್ನೋ?
ಅಮ್ಮ: ತುಂಬಾ ಒಳ್ಳೇವ್ನು. ನಿನ್ ಥರಾನೇ.
ಮಗ: ಒಳ್ಳೆಯವನಾ? ಮತ್ಯಾಕೆ ನೀನು ಅವನನ್ನ ತಿಂದ್ ಹಾಕಿರೋದು??? <
ಸಾಲ್ ಪನಿಕ
'ಅತ್ಯುತ್ತಮ ತಾಯಿ' ಪ್ರಶಸ್ತಿ ಸ್ಪರ್ಧೆಯಲ್ಲಿ ತಾಯಂದಿರು ಗೆಲ್ಲುವುದು ಮಾಮೂಲು. ತಂದೆಯೊಬ್ಬ ಗೆಲ್ಲುವುದು ವಿಶೇಷ!
ವಾದ ಅಥವಾ ಜಗಳದಲ್ಲಿ ಹೆಣ್ಣು ಒಬ್ಬರ ಎದುರು ಮಾತ್ರ ಸೋಲು ಒಪ್ಪಿಕೊಳ್ಳೋಕೆ ಸಾಧ್ಯ. ಅದು ಆಕೆಯ ತಾಯಿ.
ಹೆಂಡತಿಗೆ ಕೋಪ ಬಂದಿದ್ದು ಜಗಳ ಕೂಡ ಆಡ್ತಾ ಇಲ್ಲ ಅಂದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ: ಅಡುಗೆ ಮನೆಯ ಡಬ್ಬ, ಬಾಟಲು ಮತ್ತು ಇತರೆ ವಸ್ತುಗಳನ್ನು ಆಕೆಯಿಂದ ದೂರ ಇರಿಸುವುದು.
ಕೋಟ್ & ಬೋಲ್ಡ್
ನಾನು ಅತಿ ಮಾತಾಡ್ತೀನಿ ನಿಜ. ಆದರೆ ರೊಮ್ಯಾನ್ಸ್ ಮಾಡುವಾಗ ಯಾವತ್ತೂ ನಾನು ಮಾತಾಡಿಲ್ಲ. ನನ್ನ ಕೈಗಳು ಮಾತಾಡಿಡ್ರೆ ಅದು ನನ್ನ ತಪ್ಪಲ್ಲ!
- ಸೆಲೆನಾ ಗೊಮೆಜ್, ಹಾಲಿವುಡ್ ನಟಿ