ಅತಿರೇಕ ವಿಶ್ವಾಸ ಎಂದರೆ, ವಿದ್ಯಾರ್ಥಿ ಏನೂ ಓದದೆ ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆಯೊಂದಿಗೆ ಕುಳಿತು 'ಮಗಾ, ತಲೆ ಕೆಡಿಸಿಕೊಳ್ಳಬೇಡ. ಪರೀಕ್ಷೆ ಮುಂದೂಡಲ್ಪಡುತ್ತದೆ!' ಎಂದು ಸಮಾಧಾನ ಪಟ್ಟುಕೊಳ್ಳುವುದು.
ನಿಷ್ಠಾವಂತ ಸ್ಟೂಡೆಂಟ್ ಅಂದ್ರೆ, ಒಂದು ನಾಣ್ಯವನ್ನು ಮೇಲೆ ಚಿಮ್ಮಿಸಿ 'ಹೆಡ್ ಬಿದ್ರೆ ಮಲಗ್ತೀನಿ, ಟೈಲ್ ಬಿದ್ರೆ ಸಿನಿಮಾ ನೋಡ್ತಿನಿ. ಅಕಸ್ಮಾತ್ ನೇರವಾಗಿ ನಿಂತುಕೊಂಡ್ರೆ ಓದ್ತೀನಿ!' ಅನ್ನೋದು.
ನಿಜವಾದ ಪ್ರೊಟೆಸ್ಟ್ ಎಂದರೆ, 'ಒಂದು ಪೇಪರ್ ತಯಾರಿಸಲು 15 ಮರಗಳನ್ನು ಕಡಿಯಬೇಕಾಗುತ್ತದೆ. ಹಾಗಾದರೆ ಪರೀಕ್ಷೆಗೆ ಉಪಯೋಗಿಸುವ ಪೇಪರ್ಗಳಿಗೆ ಅದೆಷ್ಟು ಮರಗಳನ್ನು ಕಡಿಯಬೇಕಾದೀತು? ಹಾಗಾಗಿ ಪರೀಕ್ಷೆ ಬರೆಯದೆ ಪ್ರೊಟೆಸ್ಟ್ ಮಾಡೋಣ' ಎಂದು ಕರೆ ನೀಡುವುದು.