ಸಿಂಕ್ಲೇರ್ ಲೂಯಿಸ್ ಅಮೆರಿಕದ ಪ್ರಖ್ಯಾತ ಲೇಖಕ.
ಒಂದು ದೊಡ್ಡ ವಿಶ್ವವಿದ್ಯಾನಿಲಯ ಇವನನ್ನು ಆಹ್ವಾನಿಸಿ, ಪದವಿ ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ, 'ಲೇಖಕರಾಗಲು ಏನು ಮಾಡಬೇಕು?' ಎನ್ನುವ ವಿಷಯವನ್ನು ಕುರಿತು ಮಾತನಾಡಲು ಕೇಳಿಕೊಂಡಿತು.
'ನಿಮ್ಮಲ್ಲಿ ಬರೆಯಬೇಕೆಂಬ ಆಸೆ, ಉತ್ಸಾಹ ಎಷ್ಟು ಮಂದಿಗೆ ಇದೆ?' ಎಂದು ಕೇಳಿದ ಲೂಯಿಸ್.
ಕುಳಿತಿದ್ದವರೆಲ್ಲ ಕೈ ಎತ್ತಿದರು!
'ಮತ್ತೆ, ಇಲ್ಲಿ ಕುಳಿತುಕೊಂಡು ಏಕೆ ಕಾಲಹರಣ ಮಾಡುತ್ತಿದ್ದೀರಿ? ಕಾಗದ- ಪೆನ್ನು ತೆಗೆಯಿರಿ. ಬರೆಯಲು ಆರಂಭಿಸಿ. ತರಗತಿಯಿಂದ ಎದ್ದು ನಡೆಯಿರಿ' ಎಂದು ಲೂಯಿಸ್ ಹೊರಟೇಬಿಟ್ಟ.
ಆಹ್ವಾನಿಸಿದ್ದ ಉಪನ್ಯಾಸಕರು ಬಾಯಿಬಾಯಿ ಬಡಿದುಕೊಂಡರು!
- ಸಂಪಟೂರು ವಿಶ್ವನಾಥ್