

ಆ ಎಪ್ಪತ್ತೈದರ ಹಿರಿಯ ತನ್ನ ಮಗನೊಂದಿಗೆ ಪಾರ್ಕಿನ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡಿದ್ದ. ಹಿಂದೆ ಇದ್ದ ಮರದ ಮೇಲೊಂದು ಕಾಗೆ ಕುಳಿತಿತ್ತು. ಅಪ್ಪ ಏನದು ಎಂದು ಕೇಳಿದ. ಅದಕ್ಕೆ ಮಗ ಕಾಗೆ ಎಂದು ಉತ್ತರಿಸಿದ. ಅಪ್ಪ ಇನ್ನೊಮ್ಮೆ ಅದೇನೆಂದು ಕೇಳಿದ. ಈ ಬಾರಿ ಮಗ ಸ್ವಲ್ಪ ದೊಡ್ಡ ದನಿಯಲ್ಲಿ ಕಾಗೆ ಎಂದ. ಅಪ್ಪ ಮತ್ತೊಮ್ಮೆ ಅದೇ ಪ್ರಶ್ನೆ ಕೇಳುತ್ತಿದ್ದಂತೆ ಮಗನ ತಾಳ್ಮೆ ಕಟ್ಟೆಯೊಡೆಯಿತು. 'ನಿನಗೇನು ಕಿವಿ ಕೇಳಲ್ವಾ ಅಥವಾ ತಲೆಗಿಲೆ ಕೆಟ್ಟಿದೆಯೋ? ಎಷ್ಟ್ ಸತಿ ಹೇಳ್ಬೇಕು ಅದು ಕಾಗೆ ಅಂತ' ಎಂದು ಕೂಗಾಡಿದ. ಅಪ್ಪ ಶಾಂತವಾಗಿ ಹೇಳಿದ, 'ನೀನು 5 ವರ್ಷದವನಿದ್ದಾಗ ಇದೇ ಪ್ರಶ್ನೆಯನ್ನು 173 ಬಾರಿ ಕೇಳಿದ್ದೆ. ಮತ್ತು ನಾನು ಪ್ರತಿ ಬಾರಿ ಉತ್ತರಿಸುವಾಗಲೂ ನಿನ್ನ ಹಣೆಗೊಂದು ಮುತ್ತನಿಟ್ಟಿದ್ದೆ!'