ಮಳೆಗಾಲ ಬಂತು ಮಳೆಗಾಲ
ಬಿರಿದ ಭೂಮಿಗೆ ತಂಪೆರೆಯುವ ಕಾಲ
ಬೇಸಿಗೆ ಕಳಿಸಿ ಬರುವುದು ಕಾಲ
ಬೇಸರ ತರದು ಈ ಮಳೆಗಾಲ
ಬೇಡಿದ ಅನ್ನವ ನೀಡುವ ಕಾಲ
ತರುವಿಗೆ ಅಮೃತ ಸಿಂಚನ ಕಾಲ
ಮಕ್ಕಳು ಕಳೆ-ಮಳೆ ಆಡುವ ಕಾಲ
ಹಡಗನು ತೇಲಿಸಿ ಆಡುವ ಕಾಲ
ನೆಲವನು ಹಸಿರಾಗಿ ನಗಿಸುವ ಕಾಲ
ರೈತನು ದಾರಿ ನೋಡುವ ಕಾಲ
ರೈತನ ಜೀವಾಳ ಈ ಮಳೆಗಾಲ
ಅದು ಕೈಕೊಟ್ಟರೆ ಬರಗಾಲ
-ರೋಶನ್ ರವೀಂದ್ರ
ಮಾಶಾಪೂರ, 9ನೇ ತರಗತಿ 'ಬಿ' ವಿಭಾಗ
ಲೊಯೋಲಾ ಹೈಸ್ಕೂಲ್, ಬೆಟಗೇರಿ, ಗದಗ