ಖುಷಿ

ಹೇಗೆ ಮುಚ್ಚುವಿರಿ ನನ್ನೆದುರಿನಾಕಾಶದ ಮಿಂಚು?

Published On :

ಬೇರೆ ಎಲ್ಲೋ ಹೋಗಿದ್ದಿದ್ದರೆ ಅಷ್ಟು ಸೆಳೆಯುತ್ತಿರಲಿಲ್ಲ ಮೆರವಣಿಗೆ.
ನನ್ನ ಮನೆ ಮುಂದೆಯೇ ಹೋಯಿತು. ಅದಕ್ಕೆ ಎದ್ದು ಬಂದೆ.
ಬೇರೆ ಎಲ್ಲೋ ಉದುರಿ ಹೋಗಿದ್ದಿದ್ದರೆ ಅಷ್ಟು ಕೊರಗುತ್ತಿರಲಿಲ್ಲ ಕೊಳಲಿಗೆ.
ನನ್ನ ಕೊರಳಲ್ಲೇ ಕಳೆದುಹೋಯಿತು. ಅದಕ್ಕೆ ಹುಡುಕತೊಡಗಿದೆ.
ಬೇರೆ ಎಲ್ಲೋ ಬೆಂಕಿಗೆ ಬಿದ್ದಿದ್ದರೆ ಎತ್ತಿಕೊಳ್ಳುತ್ತಿರಲಿಲ್ಲ ಅಕ್ಷರಗಳನ್ನು.
ನನ್ನ ನಾಲಗೆಯೊಲೆಗೇ ಬಿತ್ತು. ಅದಕ್ಕೆ ಎತ್ತಿಕೊಂಡೆ.
ಬೆರಳ ಹೂಗಳು ಧಗ ಧಗ ಹೊತ್ತಿ ಉರಿಯುತಿವೆ. ಪೋಣಿಸುತ್ತಿದ್ದೇನೆ.
ನಾನೊಂದು ನಡೆದಾಡುವ ಯುದ್ಧ.
ನನ್ನನ್ನು ನೋಡಿ ನಡುಗಿವೆ ನಗರಗಳು. ಹೆದರಿವೆ ಹಳ್ಳಿಗಳು.
ನಾನು ಸಮುದ್ರದ ಕೋಣೆಯ ಅಲೆಗಳ ಅಲಮಾರು.
ಹುತಾತ್ಮ ಜಾತಿಯ ಹೊಸ ತಲೆಮಾರು.
ಅದರಲ್ಲಿದೆ ಕಣ್ಣೀರ ಕಥೆ ಸಾವಿರಾರು.
ನಿಮ್ಮ ಹೊಲದ ಬದುಗಳಲ್ಲಿವೆ ನನ್ನ ಪೂರ್ವಜರ ಹುತ್ತಗಳು.
ನಿಮ್ಮ ಈಜುಗೊಳದಲ್ಲಿ ತೇಲುತ್ತಿವೆ ನನ್ನ ಹಿಂದಿನ ಜನ್ಮದ ಹೆಣಗಳು.
ನಾ ಕೊಟ್ಟ ಪುಸ್ತಕ ನಿಮ್ಮಿಂದ ದೂರವಾದಾಗ ಮಾತ್ರ ಕಾಡುತ್ತವೆ ಹಾಡುಗಳು.
ಅದರಲ್ಲಿರುವುದು ಜೀವಂತ ಭಾಷೆ ಮತ್ತು ಸಾಯದ ಕಿವಿ.
ಕಿಡಿಯ ಮಾತುಗಾರಿಕೆಗೆ ಮರುಳಾಗಿ ಒಂದೊಂದೇ ಹಾಳೆ ಬೆಂಕಿಗೆಸೆಯುತ್ತಿದ್ದೀರ.
ಬೆಳಕರಿಯುವುದರೊಳಗೆ ಹೊಸ ಪುಸ್ತಕಗಳು ಬಿಡುಗಡೆಗೊಳ್ಳಲಿವೆ.
ತಲೆ ಮೇಲೆ ಶತ ಶತಮಾನಗಳ ಹೊರೆಯಿಟ್ಟುಕೊಂಡು ಓಣಿ ಓಣಿಯಲ್ಲಿ ಕೂಗುತ್ತಿದ್ದೇನೆ.
ಬೀದಿಯಲ್ಲಿ ಬೊಗಳುತಿವೆ ಬಂದೂಕುಗಳು.
ಕಿತ್ತುಕೊಳ್ಳಬಹುದು ನನ್ನ ಕಾಲಿನ ಲಾಟೀನು. ಕೈಯ ಕೋಲು.
ಹೇಗೆ ಮುಚ್ಚುವಿರಿ ನನ್ನೆದುರಿನಾಕಾಶದ ಮಿಂಚು?
-ಸಿ.ವಿ. ಶೇಷಾದ್ರಿ ಹೊಳವನಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.