ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿದೆ
ಪ್ರಮೀಳಾ, ಊರಿಲ್ಲ
ತಂದೆಯವರು ವಿಲ್ ಮೂಲಕ ತಮ್ಮ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳಿಗೆ ಹಂಚಿರುತ್ತಾರೆ. ಆದರೆ 1993ರಲ್ಲಿ ಮದುವೆಯಾದ ನನಗೆ ಆಸ್ತಿ ಕೊಟ್ಟಿರುವುದಿಲ್ಲ. ಸದರಿ ವಿಲ್ಲನ್ನು ನೋಂದಣಿ ಮಾಡಿಸಿರುವುದಿಲ್ಲ. ನೋಂದಣಿ ಕಡ್ಡಾಯವೇ? ಹಾಗಿದ್ದರೆ ಎಂದಿನಿಂದ? 2000ನೇ ಸಾಲಿನಿಂದ ಮದುವೆಯಾದ ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಹಕ್ಕಿಲ್ಲವೇ?
- ವಿಲ್ಲನ್ನು ನೋಂದಣಿ ಕಾಯ್ದೆಯಂತೆ ನೋಂದಣಿ ಮಾಡಿಸುವುದು ಕಡ್ಡಾಯವಲ್ಲ. ಬೇಕಾದರೆ ಮಾಡಿಸಬಹುದು. ಅದಕ್ಕೆ ಛಾಪಾ ಕಾಗದ ಅಥವಾ ಸ್ಟಾಂಪ್ (ನೋಂದಣಿ ಮಾಡಿಸದಿದ್ದರೆ) ಅಗತ್ಯವಿಲ್ಲ. ಆದರೆ ಅದನ್ನು ಬರೆದ ನಂತರ ಇಬ್ಬರು ಸಾಕ್ಷಿಗಳ ಮುಂದೆ ಸಹಿ ಮಾಡಿರಬೇಕು ಹಾಗೂ ಮಾಡುವವರು ಮಾನಸಿಕ ಸ್ವಾಸ್ಥ್ಯವಿರುವವರಾಗಿರಬೇಕು. ಯಾವುದೇ ಒತ್ತಡ/ಬೆದರಿಕೆಗಳಿಂದ ಬರೆದಿರಬಾರದು.
ಆದರೆ ವಿಲ್ ಮಾಡುವಾಗ ಪಿತ್ರಾರ್ಜಿತ ಆಸ್ತಿಯಲ್ಲಿ ತಮ್ಮ ಭಾಗಕ್ಕೆ ಅಂದರೆ ಮಕ್ಕಳ ಹಕ್ಕನ್ನು ಕೊಟ್ಟರೆ ಮಾತ್ರವೇ ವಿಲ್ ಮಾಡಬಹುದು. ನಿಮಗೆ 9.9.2005ರಿಂದ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ (ವಿಲ್ ಬೇರೆ ರೀತಿ ಮಾಡಿದ್ದರೂ ಕೂಡ) ಹಕ್ಕಿದೆ.
ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ
ಹೆಸರು, ಊರು ಬೇಡ
ಭಿಕ್ಷುಕರ ಪುನರ್ವಸತಿ ಕೇಂದ್ರದ ನಾಲ್ಕು ಜನ ಅಧಿಕಾರಿ/ನೌಕರರನ್ನು ಅಮಾನತು ಮಾಡಿ ಪುನಃ ಅದನ್ನು ರದ್ದು ಮಾಡಿ ಅಲ್ಲೇ ಅವರನ್ನು ಮುಂದುವರಿಸುವುದು ಇತ್ಯಾದಿ ಬಗ್ಗೆ ತಿಳಿಸಿ.
- ಈಗಾಗಲೇ ಹಲವಾರು ಬಾರಿ ಇಂತಹ ಪರ, ವಿರೋಧದ ಪ್ರಶ್ನೆಗಳಿಗೆ ಉತ್ತರಿಸಿಯಾಗಿದೆ. ಬೇರೆ ಕಡೆ ವರ್ಗಾವಣೆ ಮಾಡುವುದು ಅಥವಾ ಅಲ್ಲೇ ಮುಂದುವರಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ. ಇದರ ಬಗ್ಗೆ ಯಾವ ಕಾನೂನೂ ಇಲ್ಲ.
ಹೆಣ್ಣುಮಕ್ಕಳಿಗೂ ಹಕ್ಕಿದೆ
ವಿವೇಕಾನಂದ ಕರಬು, ಇಂಡಿ
ಸೆಪ್ಟೆಂಬರ್ 1994ರಲ್ಲಿ ಹತ್ತು ಎಕರೆ, ಹದಿನೈದು ಗುಂಟೆ ಜಮೀನನ್ನು ವ್ಯಕ್ತಿಯೊಬ್ಬರು ತಮ್ಮವಳ ಹೆಸರಿಗೆ ಖಾತಾ ಮಾಡಿಸಿದರು. ಹೆಣ್ಣುಮಕ್ಕಳಿಲ್ಲ ಎಂದು ಬರೆದಿರುತ್ತಾರೆ. ಅದರಲ್ಲಿ 2006-07ರಲ್ಲಿ ಇಬ್ಬರ ಹಿಸ್ಸೆಯನ್ನು ನಾವು ಖರೀದಿ ಮಾಡಿದ್ದೇವೆ. ಈಗ ಹೆಣ್ಣುಮಕ್ಕಳು ತಮಗೂ ಹಿಸ್ಸೆ ಬೇಕೆಂದು ದಾವಾ ಹಾಕಿದ್ದಾರೆ. ಅವರಿಗೆಲ್ಲರಿಗೂ 1993ಕ್ಕೂ ಮೊದಲೇ ಮದುವೆಯಾಗಿದೆ. ಪರಿಹಾರವೇನು?
- ಹಿಂದೂ ಉತ್ತರಾಧಿಕಾರ ಕಾಯ್ದೆ, 1950, ಕಲಂ 6, ದಿನಾಂಕ 9.9.2005ರಲ್ಲಿ ತಿದ್ದುಪಡಿಯಾಗಿದ್ದು. ಅದರ ಕಲಂ 6(1)ರಂತೆ ಎಲ್ಲ ಹೆಣ್ಣುಮಕ್ಕಳಿಗೂ ಹುಟ್ಟಿನಿಂದಲೇ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿದೆಯೆಂದು ತಿಳಿಸಿದೆ. ಆದರೆ ಡಿಸೆಂಬರ್ 20, 2004ಕ್ಕಿಂತ ಮೊದಲು ಆದ ವಿಭಾಗ, ಪರಭಾರೆ ಅಥವಾ ವಿಲ್ ಮೂಲಕ ಆದ ಆಸ್ತಿಗೆ ಇದು ಅನ್ವಯಿಸುವುದಿಲ್ಲ. ಆದರೆ ಇದು ಯಾವುದೂ ಆಗಿಲ್ಲದಿರುವುದರಿಂದ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಹಕ್ಕಿದೆ.
- ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

