ಖುಷಿ

ಬಿಎಸ್‌ವೈ ಬಿಜೆಪಿ ಸೇರಿದ ಮೇಲೆ ಅವರ ಕಟ್ಟಾ ಬೆಂಬಲಿಗರ ಗತಿ ?

Published On :

ರವಿಕುಮಾರ್ ಜಿ.ಬಿ. ಬೆಂಗಳೂರು
ಬಿಎಸ್‌ವೈ ಬಿಜೆಪಿ ಸೇರಿದ ಮೇಲೆ ಅವರ ಕಟ್ಟಾ ಬೆಂಬಲಿಗರ ಗತಿ ?
- ವೈ... ವೈ... ಅಂತ ಯಡಿಯೂರಪ್ಪನವರಿಗೆ ಪ್ರಶ್ನೆ ಕೇಳ್ತಿದ್ದಾರೆ ಅಷ್ಟೇ !
ಅಂದಾನಯ್ಯ ತಿಗರಿಮಠ, ಅಳವಂಡಿ
ಬಿಜೆಪಿಯವರು ನಮೋ ಟೀ ಸ್ಟಾಲ್ ಇಟ್ಟರೆ, ಕಾಂಗ್ರೆಸ್‌ನವರು ಏನು ಇಡುತ್ತಾರೆ ?
- ಏನಾದ್ರೂ ಕೈ ತುತ್ತು ಕೊಡಲು ಯೋಚಿಸ್ತಿದ್ದಾರೆ !



ಕಾಳೀಹುಂಡಿ ಶಿವಕುಮಾರ್, ಮೈಸೂರು
ಜೀವನ ಉಲ್ಲಾಸದ ಪಯಣವಾಗಬೇಕಾದರೆ ಏನು ಮಾಡಬೇಕು ?
- ಅಡ್ಡದಾರಿ ಬಿಟ್ಟು ಒಳ್ಳೆಯ ದಾರಿಯಲ್ಲಿ ಪಯಣಿಸಬೇಕು !
ಕಾಳಿದಾಸ, ರಾಮಕೃಷ್ಣನಗರ
ಅಧಿಕಾರಿಯಾಗುವುದಕ್ಕೂ, ಉತ್ತರಾಧಿಕಾರಿಯಾಗುವದಕ್ಕೂ ವ್ಯತ್ಯಾಸವೇನು ?
- ಅಧಿಕಾರಿಯಿಂದ ಉತ್ತರ ಬರೋದು ಕಷ್ಟ, ಉತ್ತರಾಧಿಕಾರಿಯಿಂದ ಕೂಡಲೇ ಉತ್ತರ ಸಿಗುತ್ತೆ !


ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಹಣವನ್ನು ಗಳಿಸುವ ನ್ಯಾಯವಾದ, ಸುಲಭವಾದ ಮಾರ್ಗ ಯಾವುದು ?
- ಸುಲಭವಾಗಿ ಇರಬೇಕು, ನ್ಯಾಯವಾಗಿಯೂ ಇರಬೇಕು ಎಂದರೆ ಹೇಗೆ ?
ಚಿಕ್ಕೋಬನಹಳ್ಳಿ ಚಾಂದ್‌ಭಾಷಾ, ತಳಕು
ಈಗ ಆ ಯೋಜನೆ ಜಾರಿ ಈ ಯೋಜನೆ ಜಾರಿ, ಚುನಾವಣೆ ನಂತರ ?
- ನಾವು ಜಾರಿ ಬಿದ್ದದ್ದು ಆ ಮೇಲೆ ಗೊತ್ತಾಗುತ್ತೆ !
ನೇತ್ರಾ ಆನೆಕೆರೆ ಬೀದಿ, ಮಂಡ್ಯ
ಹೆಣ್ಣಿಗೆ ಸೋಲದ ಗಂಡು ಈ ಪ್ರಪಂಚದಲ್ಲಿ ಇದ್ದಾರಾ?
- ಕೆಲವರು ಸೋಲುವ ಭಯದಲ್ಲಿ ಮೊದಲೇ ರಾಜಿ ಮಾಡ್ಕೋತಾರೆ !
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಸತ್ತವರ ಹೆಸರಿನಲ್ಲಿ ಇದ್ದವರು ಸಿಹಿಯೂಟ ಮಾಡುವುದೇಕೆ ?
- ಇದ್ದಾಗ ಅವರು ಸಿಹಿಯೂಟ ಹಾಕಿಸಲಿಲ್ಲ ಅಂತ !
ಆರ್.ಸಿ.ಪರಶುರಾಮ್, ಶಿಕಾರಿಪುರ
ಮಧ್ಯಮ ವರ್ಗಕ್ಕೂ ಮಾಧ್ಯಮ ವರ್ಗಕ್ಕೂ ವ್ಯತ್ಯಾಸವೇನು ?
- ಮಧ್ಯಮ ವರ್ಗ ಕಷ್ಟ ಪಡ್ತಾರೆ, ಮಾಧ್ಯಮ ವರ್ಗ ಅದನ್ನು ಸುದ್ದಿ ಮಾಡುತ್ತೆ !

-ಎಸ್.ವಿ. ಪದ್ಮನಾಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.