ನೆಮ್ಮದಿ ಕೇಂದ್ರ
ನನ್ನನ್ನೇ ನೋಡ್ತಾಳಲ್ಲ...
ಮಾವನ ಮಗಳನ್ನು ಪ್ರೀತಿಸುತ್ತಿದ್ದೇನೆ. ಎದುರಾದಾಗಲೆಲ್ಲ ನನ್ನನ್ನೇ ನೋಡುತ್ತಾಳೆ. ಅಂತೆಯೇ ಅವಳ ಗೆಳತಿಯರು ನೋಡುತ್ತಾರೆ. ಅವಳು ಪ್ರೀತಿಸುತ್ತಿದ್ದಾಳೋ, ಇಲ್ಲವೋ ಎಂದು ಹೇಗೆ ತಿಳಿಯಲಿ?
- ನಾಗರಾಜ, nagu8867671214@gmail.com
'ನೋಡುತ್ತಾಳೆ' ಎಂದ ಮಾತ್ರಕ್ಕೆ ಅದು ಪ್ರೀತಿ ಎಂದುಕೊಳ್ಳುವುದು ಹುಚ್ಚುತನ. ನೀನೇ ಹೇಳಿರುವಂತೆ ಅವಳ ಗೆಳತಿಯರೂ ನೋಡುತ್ತಾರೆ ಎಂದಿದ್ದೀಯ. ಹಾಗಂತ ಅವರೆಲ್ಲರೂ ನಿನ್ನನ್ನು ಪ್ರೀತಿಸುತ್ತಿದ್ದಾರೆ ಎಂದುಕೊಳ್ಳುವುದರಲ್ಲಿ ಅರ್ಥವಿಲ್ಲ. ಮಾವನ ಮಗಳೇ ಆಗಿರುವುದರಿಂದ ನೇರವಾಗಿ ನಿನ್ನ ಪ್ರೀತಿಯನ್ನು ನಿವೇದಿಸಿ, 'ಮದುವೆಯಾಗುತ್ತೀಯ?' ಎಂದು ಕೇಳಿ ನೋಡು. ಆಕೆಯ ಹಿಂದೆ ಬೀಳುವ ಹುಚ್ಚುತನ ಬೇಡ.
ಪ್ರೀತಿ ಹುಟ್ಟಿಸಬೇಕಿದೆ...
ಸಹಪಾಟಿಯನ್ನು ಪ್ರೀತಿಸುತ್ತಿದ್ದೇನೆ. ಅವಳನ್ನು ಹೊರತುಪಡಿಸಿ ಬೇರಾವ ಹುಡುಗಿಯನ್ನೂ ನನ್ನವಳೆಂದು ಒಪ್ಪಿಕೊಳ್ಳಲು ತಯಾರಿಲ್ಲ. ಹಲವು ಬಾರಿ ಆಕೆಯೊಂದಿಗೆ ಮಾತನಾಡಿದ್ದೇನೆ. ಅವಳಲ್ಲಿ ಪ್ರೀತಿ ಹುಟ್ಟಲು ಏನುಮಾಡಲಿ?
- ಸಂಜಯ್ ಎಸ್., ಎಂಜಿನಿಯರಿಂಗ್ ವಿದ್ಯಾರ್ಥಿ
ಸಾಮಾನ್ಯವಾಗಿ ಹೆಚ್ಚಿನ ಹುಡುಗಿಯರು 21-22 ವರ್ಷವಿರುವಾಗಲೇ ಮದುವೆ ಮಾಡಿಕೊಳ್ಳುತ್ತಾರೆ. ಹುಡುಗರು ಹೆಚ್ಚಾಗಿ 24 ವರ್ಷದ ನಂತರವೇ ಮದುವೆ ಆಗುತ್ತಾರೆ. ಸುಖಾಸುಮ್ಮನೆ ಸಹಪಾಟಿಯನ್ನು ಪ್ರೀತಿಸಿ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳಬೇಡ. ಎಂಜಿನಿಯರಿಂಗ್ ಮುಗಿಸಿ ಒಳ್ಳೆಯ ಉದ್ಯೋಗಕ್ಕೆ ಸೇರು. ಆಕೆಯೇನು, ಅವಳಿಗಿಂತ ಒಳ್ಳೆಯ ಹುಡುಗಿಯೇ ಸಿಗುತ್ತಾಳೆ.
ಕೂದಲು ಕಳಚಿ ಬೀಳುತ್ತಿದೆ!
ಸ್ನಾನ ಮಾಡುವಾಗ ಕೂದಲುಗಳು ಉದುರುತ್ತವೆ. ಇದರಿಂದಾಗಿ ವಾರಗಟ್ಟಲೆ ತಲೆಗೆ ಸ್ನಾನ ಮಾಡುವುದನ್ನೇ ನಿಲ್ಲಿಸಿದ್ದೇನೆ. ಕೂದಲುದುರುವುದು ಒಂದು ರೋಗವೇ?
- ಶಾಲಿನಿ ಪಾಟೀಲ, ಬಾಗಲಕೋಟೆ
ಖಂಡಿತಾ ಅಲ್ಲ. ಹರೆಯದಲ್ಲಿ ಕೂದಲುದುರುವುದು ಸಹಜ. ಅದಕ್ಕಾಗಿ ಭಯ ಬೀಳಬೇಕಿಲ್ಲ. ಹಿಂಭಾಗಕ್ಕೆ ಬಾಚಿ ಬಿಗಿಯಾಗಿ ಕಟ್ಟುವುದರಿಂದಲೂ ಕೂದಲು ಉದುರುತ್ತದೆ. ಮಾನಸಿಕ ಒತ್ತಡ, ಗರ್ಭನಿರೋಧಕ ಮಾತ್ರೆ ಸೇವನೆ, ಥೈರಾಯ್ಡ್ ಸಮಸ್ಯೆ ಇದ್ದಲ್ಲಿ ಕೂದಲು ಉದುರುವ ಸಂಭವ ಹೆಚ್ಚು. ಮೊದಲು ಇವುಗಳಿಗೆ ಸೂಕ್ತ ಚಿಕಿತ್ಸೆ ಪಡೆಯಿರಿ. ನಿಶ್ಚಿಂತೆಯಿಂದ ತಲೆಗೆ ಸ್ನಾನಮಾಡಿ. ಹೆಚ್ಚು ಚಿಂತಿಸಿದರೆ ಕೂದಲು ಉದುರುವುದು ಜಾಸ್ತಿ ಆಗುತ್ತದೆ ಎಂಬುದನ್ನು ಮರೆಯಬೇಡಿ.
-ಡಾ. ನರೇಂದ್ರ ಗಾಂಧಿ
nemmadikendra4@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

