ಏನೇ ಆದ್ರೂ ಮ್ಯಾನೇಜ್ ಮಾಡ್ತಾರಪ್ಪಾ...

ಆಟಗಾರರು ಪರದೆಯ ಹಿಂದೆ ಹಲವು ಸೇವೆಗಳಲ್ಲಿ ತೊಡಗುತ್ತಾರೆ. ನಮ್ಮ ಅಥ್ಲೀಟ್ ಅಶ್ವಿನಿ ನಾಚಪ್ಪ ಕೂಡ ಅಂಥ ಉದಾರಿಗಳಲ್ಲೊಬ್ಬರು.
ಏನೇ ಆದ್ರೂ ಮ್ಯಾನೇಜ್ ಮಾಡ್ತಾರಪ್ಪಾ...
Updated on: 

ಆಟಗಾರರು ಪರದೆಯ ಹಿಂದೆ ಹಲವು ಸೇವೆಗಳಲ್ಲಿ ತೊಡಗುತ್ತಾರೆ. ನಮ್ಮ ಅಥ್ಲೀಟ್ ಅಶ್ವಿನಿ ನಾಚಪ್ಪ ಕೂಡ ಅಂಥ ಉದಾರಿಗಳಲ್ಲೊಬ್ಬರು. ತಾವು ನಡೆಸುತ್ತಿದ್ದ ಬಡ ಮಕ್ಕಳ ಶಾಲೆಗೆ ಖ್ಯಾತ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರನ್ನು ಕರೆಸಬೇಕೆಂಬ ಕನಸು ಅವರಲ್ಲಿ ಹಲವು ದಿನಗಳಿಂದಿತ್ತು. ಬಡ ಮಕ್ಕಳು ಅವರನ್ನು ಹತ್ತಿರದಿಂದ ನೋಡಬೇಕೆಂಬ ಅದಮ್ಯ ಆಸೆ ಅಶ್ವಿನಿ ಅವರದ್ದು. 2003ರಲ್ಲಿ, ಅದೇ ಸಮಯಕ್ಕೆ ಸರಿಯಾಗಿ ಬೆಂಗಳೂರಿನಲ್ಲಿ ಟೀಂ ಇಂಡಿಯಾ ಕ್ಯಾಂಪ್ ನಡೆಯುತ್ತಿರುತ್ತದೆ. ಆಗ ಕ್ಯಾಂಪ್‌ನಲ್ಲಿದ್ದ ಸಚಿನ್ ಮತ್ತು ಗಂಗೂಲಿ ಇಬ್ಬರೂ ಶಾಲೆಗೆ ಆಗಮಿಸಿದ್ದರು. ಅವರೆಲ್ಲ ದಿಢೀರನೇ ಭೇಟಿ ನೀಡಿದ್ದರಿಂದ ಅಶ್ವಿನಿ ಅವರಿಗೆ ಇದನ್ನು ನಂಬಲು ಸಾಧ್ಯವಾಗಲೇ ಇಲ್ಲ. ಸಚಿನ್, ಗಂಗೂಲಿ ಇಬ್ಬರೂ ಸುಮಾರು ಎರಡೂವರೆ ಗಂಟೆ ಆ ಮಕ್ಕಳೊಂದಿಗೆ ಕಳೆದರು. ಮಕ್ಕಳು ಎಲ್ಲಿಲ್ಲದ ಉತ್ಸಾಹದಲ್ಲಿ ತೇಲಿದರು. ಆ ಮಕ್ಕಳ ಬಯಕೆಗಳೇನು? ಅವರಿಗೆ ತಾವೇನು ಸಹಾಯ ಮಾಡಬಹುದು? ಎಂದು ಯೋಚಿಸಿದರು ಇಬ್ಬರೂ. ಅಲ್ಲಿದ್ದಷ್ಟೂ ಕಾಲ ಆ ಮಕ್ಕಳೊಂದಿಗೆ ಸಂಪೂರ್ಣವಾಗಿ ಬೆರೆತುಬಿಟ್ಟಿದ್ದರು. ಇತ್ತ ಅಶ್ವಿನಿ ತಮ್ಮ ಕನಸು ನನಸಾದ ಸಂಭ್ರಮದಲ್ಲಿ ಮುಳುಗಿಬಿಟ್ಟಿದ್ದರು. ಇದು ಸಾಧ್ಯವಾಗಿದ್ದು, ಆಗ ಟೀಂ ಇಂಡಿಯಾಕ್ಕೆ ಸ್ಥಳೀಯ ಮ್ಯಾನೇಜರ್ ಆಗಿದ್ದ ಸಿದ್ದರಾಮು ಅವರಿಂದ!
ಕ್ರೀಡಾ ತಂಡಗಳಿಗೆ ಮ್ಯಾನೇಜರ್ ಆದವರ ಕಾರ್ಯ ತುಂಬಾ ಮಹತ್ವದ್ದು. ಅವರ ಜವಾಬ್ದಾರಿ ಬಹಳ ಹೆಚ್ಚು. ಸಾಮಾನ್ಯವಾಗಿ ಆಟಗಾರರು ಸಣ್ಣಪುಟ್ಟ ತಪ್ಪುಗಳನ್ನು ಮಾಡಿದಾಗ, ರೆಫ್ರೀಗಳು ಅವರಿಗೆ ಶಿಕ್ಷೆ ವಿಧಿಸುವ ವೇಳೆ ಮ್ಯಾನೇಜರ್ 'ನಮ್ಮವ ಆಟಗಾರ ತಪ್ಪು ಮಾಡಿಲ್ಲ' ಎಂದು ವಾದಿಸಬಹುದು. ಶಿಕ್ಷೆಯಿಂದ ತಪ್ಪಿಸಬಹುದು. ಒಂದು ರೀತಿಯಲ್ಲಿ ಮ್ಯಾನೇಜರ್ ತಂಡದ ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತಾರೆ. ಆಟಗಾರರ ಊಟ, ವಸತಿ ಸೇರಿದಂತೆ, ಅವರ ಬೇಕು ಬೇಡಗಳು ಮತ್ತು ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು? ಎಲ್ಲಿಗೆ ಕಳುಹಿಸಬಾರದು? ಟೂರ್ನಿಯಲ್ಲಿ ಇರುವ ನಿರ್ಬಂಧಗಳನ್ನು ಆಟಗಾರರಿಗೆ ವಿವರಿಸುವ ಹೊಣೆಗಾರಿಕೆ ಅವರದಾಗಿರುತ್ತದೆ.

ಮಹತ್ವದ ಅಂಶ

'ವಿದೇಶಿ ತಂಡ ಆಗಮಿಸಿದಾಗ, ಆ ತಂಡದ ಹೊಣೆಯನ್ನು ಸ್ಥಳೀಯ ಮ್ಯಾನೇಜರ್ ವಹಿಸಿಕೊಳ್ಳಬೇಕಾಗುತ್ತದೆ. ಆ ಆಟಗಾರರು ತಮಗೆ ಅಗತ್ಯವಿರುವ ಹಲವು ವಸ್ತುಗಳನ್ನು ತಂದಿರುತ್ತಾರೆ. ಆದರೆ, ಅವುಗಳಿಗೆ ಪ್ರತಿಯೊಂದಕ್ಕೆ ಸುಂಕ ಕಟ್ಟಬೇಕಾಗುತ್ತದೆ. ಆಗ ಯಾವುದೇ ಸಮಸ್ಯೆ ಎದುರಾದರೆ, ಆ ವಿದೇಶಿ ತಂಡದ ಮ್ಯಾನೇಜರ್ ಜತೆ ಸೇರಿ ಅದನ್ನು ಬಗೆಹರಿಸಬೇಕಾಗುತ್ತದೆ. ಇದು ಮ್ಯಾನೇಜರ್ ಆದವರಿಗೆ ಕಠಿಣ ವಿಷಯವೇ ಸರಿ' ಎನ್ನುತ್ತಾರೆ ಕರ್ನಾಟಕ ಕ್ರಿಕೆಟ್ ತಂಡದ ಮ್ಯಾನೇಜರ್ ಸಿದ್ದರಾಮು.
ಆಯಾ ಕ್ರಿಕೆಟ್ ಸಂಸ್ಥೆಗಳು ಮ್ಯಾನೇಜರ್‌ಗಳಿಗೆ ಮಾತುಕತೆಯ ಮೂಲಕ ಸಂಭಾವನೆಯನ್ನು ನಿಗದಿಪಡಿಸುತ್ತವೆ.

-ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com