ಖುಷಿ

ಹೆಣ್ಣೇಕೆ ಮದುವೆಯ ನಂತರ ತನ್ನ ಗಂಡನಿಗಿಂತಲೂ ರಪ್ಪ್ ಆಗ್ತಾರೆ?

Published On :

ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಹೆಣ್ಣೇಕೆ ಮದುವೆಯ ನಂತರ ತನ್ನ ಗಂಡನಿಗಿಂತಲೂ ರಪ್ಪ್ ಆಗ್ತಾರೆ?
ಗಂಡ ಸಂಸಾರ ತೂಗಿಸಲು ಜೀವ ಸವೆಸುತ್ತಿರುತ್ತಾನಲ್ಲ!

ಬಿ. ಶ್ರೀನಾಥ್, ಮೈಸೂರು
ಆಪ್‌ನವರು ಪೊರಕೆ ಗಿಫ್ಟ್ ಕೊಟ್ಟರೆ ತೆಗೆದುಕೊಳ್ಳಲೇ?
ತೆಗೆದುಕೊಂಡು ವಾಲ್‌ಗೆ ನೇತುಹಾಕಿ, ಕ್ರೇಜಿಯಾಗಿರುತ್ತೆ!

ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
ಕೈಲಾಗದವರು ನಿಜಕ್ಕೂ ಮೈಪರಚಿಕೊಳ್ಳುತ್ತಾರಾ?
ಕೈನಲ್ಲಿ ಟಿಕೆಟ್ ಸಿಗದವರು ಈಗ ಮೈ ಪರಚಿಕೊಳ್ತಿದ್ದಾರೆ!

ಬಸವರಾಜ್ ಮಾಗೇರಿ, ಕೋಲಾರ
ಸಿನಿಮಾ ಮಂದಿ ರಾಜಕೀಯ ಸೇರುವ ಹಾಗೆ ರಾಜಕಾರಣಿಗಳು ಸಿನಿಮಾ ಸೇರಿದ್ರೆ ಹೇಗೆ?
ಬಾಕ್ಸ್ ಆಫೀಸ್ ಅಲ್ಲ, ಸಿನಿಮಾ ಕ್ಷೇತ್ರವನ್ನೇ ಕೊಳ್ಳೆ ಹೊಡೀತಾರೆ!

ಸ್ವಾಮಿ ನಿರ್ಮಲಾ, ಉಡಿಗಾಲ
ಕುಮಾರಸ್ವಾಮಿ ಏರಿಗೆಳೆದರೆ ದೇವೇಗೌಡ್ರು ನೀರಿಗೆಳೆಯುತ್ತಿದ್ದಾರಂತೆ?
ದತ್ತ ಏನೂ ತೋಚದೆ ಅತ್ತ-ಇತ್ತ ನೋಡ್ತಿದ್ದಾರಂತೆ!

ನೇರಲಗುಡ್ಡ ಶಿವಕುಮಾರ್, ಶಿರಾ
ಕರ್ನಾಟಕದ ಅಣ್ಣಾ ಹಜಾರೆ ಯಾರು ಗುರು?
ಇಲ್ಲಿರುವ ಅಣ್ಣಂದಿರೆಲ್ಲ ಮಾನ ಹರಾಜಾದವರೆ!

ಮಹೇಶ್, ನೆಲಮಂಗಲ
ಇಲ್ಲೊಬ್ಬರು ಊಟವಾದ ಮೇಲೆ ಕೆಮ್ಮುತ್ತಾರಲ್ಲ ಯಾಕೆ?
ಊಟದ ನಡುವೆ ಕೆಮ್ಮಿದರೆ ಅಕ್ಕಪಕ್ಕದವರಿಗೆ ತೊಂದರೆ ಅಲ್ವಾ?

ಮ. ಶಿವಸ್ವಾಮಿ ಕರೋಹಟ್ಟಿಕರ್, ಬೆಂಗಳೂರು
ನಲ್ಲ-ನಲ್ಲೆಯ ಬೇವು ಬೆಲ್ಲ ಉಗಾದಿಗಲ್ಲ?
ಅದು ಆಗಲ್ಲ- ಈಗಲ್ಲ ಮಾತ್ರ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಗಾಂಧೀಜಿ ಇಂದು ಇದ್ದಿದ್ದರೆ ಹೇಗಿರುತ್ತಿತ್ತು?
ಅವರಿಗೆ ಯಾವ ಪಕ್ಷದವರೂ ಟಿಕೆಟ್ ಕೊಡ್ತಿರಲಿಲ್ಲ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಹೆಂಗಸರಲ್ಲೇಕೆ ಗುಟ್ಟು ಉಳಿಯುವುದಿಲ್ಲ?
ಕೆಲವು ವಿಷಯಗಳು ಗುಟ್ಟು ಅಂತ ಅವರಿಗೆ ಗೊತ್ತಿರೋಲ್ಲ!

-ಎಸ್.ವಿ.ಪಧ್ಮನಾನಾಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.