ನಡು ಮೆದುಳಲ್ಲಿ

ಜಗದಗಲ ದೃಷ್ಟಿ ಹರಡುವ ಕನಸ ಹೊತ್ತ ಕಂಗಳುನಿಧಾನ ಮೋಡ ಕವಿದ ಹಾಗೆ ರೆಪ್ಪೆಗಳ ಮುಚ್ಚಿ...
ನಡು ಮೆದುಳಲ್ಲಿ
Updated on: 

ಜಗದಗಲ ದೃಷ್ಟಿ ಹರಡುವ ಕನಸ ಹೊತ್ತ ಕಂಗಳು
ನಿಧಾನ ಮೋಡ ಕವಿದ ಹಾಗೆ ರೆಪ್ಪೆಗಳ ಮುಚ್ಚಿ
ದ್ಯಾನಸ್ಥ ಸ್ಥಿತಿಗೆ ಜಾರಿದರೆ
ಅಲ್ಲಿ ಒಳಗೆ ನಡು ಮೆದುಳಲ್ಲಿ
ಹೆಣ್ಣಿನ ಕಣ್ಣು ತೆರೆಯುತ್ತದೆ.
ಪಿಳಿಪಿಳಿಸುವ ಕಣ್ಣ ಸುತ್ತಲೂ
ಹೆಪ್ಪುಗಟ್ಟಿದ ಮೌನ ಕಪ್ಪುಗಟ್ಟಿದ ಕತ್ತಲು
ಕತ್ತಲೂ ಅಲ್ಲದ ಬೆಳಕೂ ಅಲ್ಲದ ಸ್ಥಿತಿಯಲ್ಲಿ
ಮಂಜುಗಟ್ಟುವ ಮಾತು
ನಡು ತಲೆಯ ಸುಳಿಯಲ್ಲಿ ತಣ್ಣಗಿನ ಕೆರೆತ
ಮೌನವ ಕೊರೆದ ಆಳಬಾವಿಯ ಕಪ್ಪು ನೀರಿನಲ್ಲಿ
ತೇಲುವ ಆ ಕಣ್ಣು
ಏನನ್ನಾದರು ಪ್ರತಿಫಲಿಸುತ್ತದೇನೋ ಎಂದು ಇಣುಕಿದೆ
ನನ್ನ ಬಿಂಬವಂತೂ ಕಾಣಲಿಲ್ಲ
ಅದು ಮಾತ್ರ ಅಮಾವಾಸ್ಯೆಯ ಕತ್ತಲು ನಕ್ಷತ್ರ
ಮಿನುಗುವಂತೆ ಮಿನುಗುತ್ತಲೇ ಇದೆ
ಬೆಳಕಾಗುವ ಬಗೆಯ, ನಿರಂತರ ಬೆಳಗುವ ಬಗೆಯ
ಹೊಳಪನ್ನು ತುಂಬಿಕೊಂಡು
ನನ್ನ ನಡು ಮೆದುಳಲ್ಲಿ ಹೆಣ್ಣಿನ ಕಣ್ಣು
ಆ ಕಣ್ಣೊಳಗೆ ನಿರಂತರ ನನ್ನ ಕಾಳಜಿ!

 -ಚೀಮನಹಳ್ಳಿ ರಮೇಶಬಾಬು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com